ಸವರಿನ್ ಗೋಲ್ಡ್ ಬಾಂಡ್ ಹೂಡಿಕೆಗೆ ಉತ್ತಮ ಯೋಜನೆ
Team Udayavani, Dec 27, 2020, 6:10 AM IST
ಷೇರು ಮಾರುಕಟ್ಟೆ ಸಹಿತ ಬಹುತೇಕ ಎಲ್ಲ ಹೂಡಿಕೆಗಳು ಆಗಾಗ ಏರಿಳಿತವಾಗುತ್ತಲೇ ಇರುತ್ತವೆ. ಪರಿಸ್ಥಿತಿ ಹೀಗಿರುವಾಗ ಹೂಡಿಕೆದಾರರಿಗೆ ಎಲ್ಲಿ ಬಂಡವಾಳ ಹಾಕಬೇಕು ಎಂಬ ಗೊಂದಲ ಎದುರಾಗುವುದು ಸಹಜ. ಅಲ್ಲದೇ ಹೂಡಿಕೆಗೆ ಸಾಕಷ್ಟು ಆಯ್ಕೆಗಳಿರುವಾಗ ಯಾವ ಯೋಜನೆ ಉತ್ತಮ ಹಾಗೂ ಸುರಕ್ಷಿತ ಎಂದು ನಿರ್ಧರಿಸುವುದು ಕಷ್ಟಸಾಧ್ಯ. ಆದರೆ ಹಲವಾರು ಯೋಜನೆಗಳಂತೆ “ಸವರಿನ್ ಗೋಲ್ಡ್ ಬಾಂಡ್’ (ಎಸ್ಜಿಬಿ) ಕೂಡ ಹೂಡಿಕೆಗೆ ಉತ್ತಮ ಆಯ್ಕೆಯಾಗಿದ್ದು, ಉತ್ತಮ ಬಡ್ಡಿ ಮೊತ್ತವನ್ನು ಪಡೆಯಬಹುದು.
ಇದೀಗ ಸವರಿನ್ ಗೋಲ್ಡ್ ಬಾಂಡ್(ಎಸ್ಜಿಬಿ) ಯೋಜನೆಯ 9ನೇ ಸರಣಿ ಡಿ. 28ರಂದು ಪ್ರಾರಂಭಗೊಳ್ಳಲಿದ್ದು, ಜ.1 2021ರ ವರೆಗೆ ಜಾರಿಯಲ್ಲಿರಲಿದೆ. ಆರ್ಬಿಐ ಈ ಯೋಜನೆಯಲ್ಲಿ ಹೂಡಿಕೆಗೆ ಅವಕಾಶ ಮಾಡಿಕೊಟ್ಟಿದ್ದು, ಬಾಂಡ್ ಬೆಲೆಯನ್ನು ಪ್ರತೀ ಗ್ರಾಂ.ಗೆ 5 ಸಾವಿರ ರೂ. ಎಂದು ನಿಗದಿ ಮಾಡಿದೆ. ಮಾರುಕಟ್ಟೆ ಧಾರಣೆ ಮೇಲೆ ಮೌಲ್ಯ ನಿರ್ಧಾರ ಆರ್ಬಿಐನ ಬಾಂಡ್ ಆಗಿರುವ ಎಸ್ಜಿಬಿ ಬಾಂಡ್ ಮೌಲ್ಯವನ್ನು ಚಿನ್ನದ ಮಾರುಕಟ್ಟೆಯ ಮೂಲಕ ಅಳೆಯಲಾಗುತ್ತದೆ. ಬಾಂಡ್ 5 ಗ್ರಾಂ. ಚಿನ್ನದ್ದಾಗಿದ್ದರೆ, 5 ಗ್ರಾಂ ಚಿನ್ನದ ಬೆಲೆ ಬಾಂಡ್ ಬೆಲೆಗೆ ಸಮನಾಗಿರುತ್ತದೆ. ಮೆಚ್ಯುರಿಟಿ ಬಳಿಕ ಹಣವನ್ನು ಹೂಡಿಕೆದಾರರ ಖಾತೆಗೆ ಜಮಾ ಮಾಡಲಾಗುತ್ತದೆ. ಈ ವೇಳೆ ಕಡೆಯ 3 ಕೆಲಸದ ದಿನಗಳ ಬೆಲೆಯನ್ನು ಮಾನ ದಂಡವನ್ನಾಗಿಟ್ಟುಕೊಂಡು ಅದರ ಸರಾಸರಿ ಬೆಲೆಯನ್ನು ಅನ್ವಯಿಸಿ ಬಾಂಡ್ನ ಮೌಲ್ಯವನ್ನು ನಿರ್ಧರಿಸಲಾಗುತ್ತದೆ. ಇನ್ನೂ ಆಧಾರ್ ಕಾರ್ಡ್, ಪಾನ್, ಪಾಸ್ಪೋರ್ಟ್, ವೋಟರ್ ಐಡಿ ಪೈಕಿ ಯಾವುದಾದರೂ ಒಂದನ್ನು ನೀಡಬಹುದು. ಅರ್ಜಿ ಸಲ್ಲಿಸುವ ಸಂದರ್ಭ ಪಾನ್ ಸಂಖ್ಯೆ ಕಡ್ಡಾಯ.
ಶೇ. 2.5ರಷ್ಟು ಬಡ್ಡಿ ಲಭ್ಯ
ಪ್ರಮುಖ ಅಂಚೆ ಕಚೇರಿ, ವಾಣಿಜ್ಯ ಬ್ಯಾಂಕ್ಗಳು, ಬಿಎಸ್ಇ, ಎನ್ಎಸ್ಇ ಮತ್ತು ನ್ಯಾಶನಲ್ ಸ್ಟಾಕ್ ಹೋಲ್ಡಿಂಗ್ ಕಾರ್ಪೊರೇಶನ್ನಲ್ಲಿ ಎಸ್ಜಿಬಿಗಳನ್ನು ಖರೀದಿಸಬಹುದಾಗಿದ್ದು, ಓರ್ವ ವ್ಯಕ್ತಿಯು ಆರ್ಥಿಕ ವರ್ಷದಲ್ಲಿ ಕನಿಷ್ಠ 1 ಗ್ರಾಂ.ನಿಂದ ಗರಿಷ್ಠ 4 ಕೆ.ಜಿ.ವರೆಗಿನ ಚಿನ್ನದ ಬಾಂಡ್ಗಳನ್ನು ಖರೀದಿಸಬಹುದು. 8 ವರ್ಷಗಳ ಮೆಚ್ಯುರಿಟಿ ಸಮಯ ಹೊಂದಿದ್ದು, ಬಯಸಿದರೆ 5 ವರ್ಷಗಳಿಗೆ ಮುಕ್ತಾಯ ಗೊಳಿಸಬಹುದು. ಸವರಿನ್ ಗೋಲ್ಡ್ ಬಾಂಡ್ ಯೋಜನೆಯಡಿ ನಿಮ್ಮ ಹೂಡಿಕೆಯ ಮೊತ್ತಕ್ಕೆ ವಾರ್ಷಿಕ ಶೇ. 2.50ರ ಬಡ್ಡಿ ದರವೂ ಇದ್ದು, ತೆರಿಗೆ ವಿನಾಯಿತಿಯನ್ನೂ ಹೊಂದಿದೆ. ಬಡ್ಡಿಯನ್ನು 6 ತಿಂಗಳಿಗೆ ಒಮ್ಮೆ ಪಾವತಿಸಲಾಗುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ಸರಣಿ ರಜೆ-ವಿಶ್ವವಿಖ್ಯಾತ ಹಂಪಿಯಲ್ಲಿ ಪ್ರವಾಸಿಗರ ಸಂಖ್ಯೆ ಹೆಚ್ಚಳ
ಸಿ.ಟಿ.ರವಿ ಆ ಪದ ಬಳಸಿಲ್ಲವಾದ್ರೆ ಧರ್ಮಸ್ಥಳಕ್ಕೆ ಬಂದು ಆಣೆ ಪ್ರಮಾಣ ಮಾಡಲಿ: ಸಚಿವೆ ಲಕ್ಷ್ಮೀ
ವಿದೇಶಿ ಹಕ್ಕಿಗಳ ಕಲರವ- ಕುಷ್ಟಗಿಯ ನಿಡಶೇಸಿ ಕೆರೆಗೆ ಬಂದ ಬಾನಾಡಿಗಳು!
Aranthodu: ಲಾರಿ-ಸ್ಕೂಟಿ ಅಪಘಾತ; ಸವಾರರಿಬ್ಬರು ಮೃತ್ಯು
ದೆಹಲಿ ಪರೇಡ್ಗೆ ಬ್ರಹ್ಮ ಜಿನಾಲಯ ಸ್ತಬ್ಧಚಿತ್ರ; ಗತ ವೈಭವ ಸಾರಲಿದೆ ಟ್ಯಾಬ್ಲೊ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.