ಇಂದು ಚಿನ್ನದ ಬಾಂಡ್ 5ನೇ ಸರಣಿ ಬಿಡುಗಡೆ
ಆ.11ರವರೆಗೆ SGB ಕೊಳ್ಳಲು ಅವಕಾಶ, ಬಾಂಡ್ ಅವಧಿ ಎಂಟು ವರ್ಷ
Team Udayavani, Aug 3, 2020, 7:03 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: 2020-21ರ ಸವರನ್ ಗೋಲ್ಡ್ ಬಾಂಡ್‌ನ (ಎಸ್‌ಜಿಬಿ) 5ನೇ ಸರಣಿ ಆ.3ಕ್ಕೆ ಬಿಡುಗಡೆಯಾಗಲಿದೆ.
ಆ.11ರವರೆಗೆ ಚಂದಾದಾರಿಕೆ ಪಡೆಯಲು ಅವಕಾಶವಿದೆ.
ಇದನ್ನು ಅಂತರ್ಜಾಲದ ಮೂಲಕಕೊಳ್ಳುವವರಿಗೆ ಪ್ರತೀ ಗ್ರಾಮ್ ಮೇಲೆ 50 ರೂ. ವಿನಾಯ್ತಿ ಸಿಗುತ್ತದೆ.
1 ಗ್ರಾಮ್ ಎಸ್‌ಜಿಬಿ ಬೆಲೆ 5344 ರೂ. ಎಂದು ನಿಗದಿಯಾಗಿದೆ. ಗ್ರಾಹಕರು ಕನಿಷ್ಠ 1 ಗ್ರಾಮ್ ಕೊಳ್ಳಲೇಬೇಕು.
ಗರಿಷ್ಠ ಮಿತಿಯನ್ನು ಆರ್‌ಬಿಐ ವೆಬ್‌ಸೈಟ್‌ನಲ್ಲಿ ಪರಿಶೀಲಿಸಿಕೊಂಡುಕೊಳ್ಳಬೇಕಾಗುತ್ತದೆ. ವೈಯಕ್ತಿಕವಾಗಿ ಗರಿಷ್ಠ 4 ಕೆಜಿ ಕೊಳ್ಳಲು ಅವಕಾಶವಿದೆ. ಇತರೆ ಅರ್ಹಸಂಸ್ಥೆಗಳು 20 ಕೆಜಿವರೆಗೆ ಕೊಳ್ಳಬಹುದು.
ಯಾರಿಗೆ ಅರ್ಹತೆಯಿದೆ?: ಫೆಮಾ (ವಿದೇಶಿ ವಿನಿಮಯ ನಿರ್ವಹಣಾ ಕಾಯ್ದೆ) ಅಡಿ ಅರ್ಹತೆ ಪಡೆದಿರುವ ಪ್ರತೀ ಭಾರತೀಯರಿಗೂ ಎಸ್‌ಜಿಬಿ ಕೊಳ್ಳಲು ಅವಕಾಶವಿದೆ. ಆದರೆ ಅನಿವಾಸಿ ಭಾರತೀಯರಿಗೆ ಸಾಧ್ಯವಿಲ್ಲ. ಅವರಿಗೆ ನಾಮನಿರ್ದೇಶನಗೊಳ್ಳಲು ಮಾತ್ರ ಅವಕಾಶ.
ತೆರಿಗೆ?: ಎಸ್‌ಜಿಬಿ ಅವಧಿ 8 ವರ್ಷದವರೆಗೆ ಇರುತ್ತದೆ. ಅದು ಮುಗಿದ ಮೇಲೆಯೇ ಹಣ ಪಡೆದರೆ ತೆರಿಗೆ ಕಟ್ಟುವ ಪ್ರಶ್ನೆಯಿಲ್ಲ. ಇನ್ನು ಐದು ವರ್ಷ ಮುಗಿದ ಮೇಲೆಯೂ ಹಣ ಹಿಂಪಡೆಯಬಹುದು. ಒಟ್ಟಾರೆ ಅವಧಿಗೆ ಮುನ್ನ ಹಣ ಪಡೆದರೆ, ಅದಕ್ಕೆಂದೇ ನಿಗದಿಯಾಗಿರುವ ಪ್ರಮಾಣದಲ್ಲಿ ತೆರಿಗೆ ಪಾವತಿಸಬೇಕಾಗುತ್ತದೆ.
ಬೆಲೆ ನಿಗದಿ ಹೇಗೆ?
ಭಾರತೀಯ ಬುಲಿಯನ್ ಹಾಗೂ ಆಭರಣ ಸಂಸ್ಥೆಯಲ್ಲಿ ದಾಖಲಾದ ಕಡೆಯ ಮೂರು ದಿನದ ಶುದ್ಧ ಚಿನ್ನದ ಬೆಲೆಯ ಸರಾಸರಿಯನ್ನು ಪರಿಗಣಿಸಲಾಗುತ್ತದೆ. ಈ ಪ್ರಕಾರ 1 ಗ್ರಾಮ್ ಬೆಲೆಯನ್ನು ನಿರ್ಧರಿಸಿ ಬಾಂಡ್ ಬಿಡುಗಡೆ ಮಾಡಲಾಗಿದೆ. ಬಾಂಡ್‌ನ ಅವಧಿ ಮುಗಿದ ಮೇಲೆ ಆಗ ಮಾರುಕಟ್ಟೆಯಲ್ಲಿ ಎಷ್ಟು ಮೌಲ್ಯವಿರುತ್ತದೋ ಅಷ್ಟು ಹಣವನ್ನು ನೀಡಲಾಗುತ್ತದೆ.
ಎಷ್ಟು ಸುರಕ್ಷಿತ?
ಎಸ್‌ಜಿಬಿಗೆ ಸಂಪೂರ್ಣ ಆರ್‌ಬಿಐ ಸುರಕ್ಷತೆಯಿರುತ್ತದೆ. ಆದ್ದರಿಂದ ಯಾವುದೇ ಹಂತದಲ್ಲೂ ಭಯಪಡುವ ಅಗತ್ಯವಿಲ್ಲ. ಇನ್ನು ವಾರ್ಷಿಕವಾಗಿ ಶೇ.2.5ರಷ್ಟು ಬಡ್ಡಿ ಬರುತ್ತದೆ. ಅದಕ್ಕೂ ಮಿಗಿಲಾಗಿ ನಾವು ಚಿನ್ನದ ಮೌಲ್ಯದ ಬಾಂಡ್ ಕೊಂಡಿರುತ್ತೇವೆಯೇ ಹೊರತು ಚಿನ್ನವನ್ನಲ್ಲ. ಆದ್ದರಿಂದ ಕಳ್ಳತನವಾಗುವ ಭೀತಿಯಿಲ್ಲ. ಜೊತೆಗೆ ಆಭರಣ ಕೊಳ್ಳುವಾಗ ಇರುವ ಮೇಕಿಂಗ್ ಚಾರ್ಜಸ್, ಜಿಎಸ್‌ಟಿ ಇತ್ಯಾದಿ ತಾಪತ್ರಯವಿರುವುದಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.