ಮುಂದಿನ ಆರ್ಥಿಕ ವರ್ಷದಲ್ಲಿ ರಾಜ್ಯಗಳು GST ಪರಿಹಾರದ ಕೊರತೆ ಎದುರಿಸಲಿವೆಯೇ..!? : ವರದಿ
Team Udayavani, Mar 17, 2021, 11:30 AM IST
ನವ ದೆಹಲಿ : ಮುಂದಿನ ಹಣಕಾಸು/ಆರ್ಥಿಕ ವರ್ಷದಲ್ಲಿ (2021-22) ಕೇಂದ್ರದಿಂದ ಸರಕು ಮತ್ತು ಸೇವಾ ತೆರಿಗೆ ಪರಿಹಾರದ ಕೊರತೆಯನ್ನು ರಾಜ್ಯ ಸರ್ಕಾರಗಳು 2.7 ರಿಂದ 3 ಲಕ್ಷ ಕೋಟಿ ರೂ.ಗಳನ್ನು ಎದುರಿಸಬೇಕಾಗುತ್ತದೆ ಎಂದು ರೇಟಿಂಗ್ ಏಜೆನ್ಸಿ ಐ ಸಿ ಆರ್ ಎ (ಇನ್ವೆಸ್ಟ್ ಮೆಂಟ್ ಇನ್ಫಾರ್ಮೇಶನ್ ಆ್ಯಂಡ್ ಕ್ರೆಡಿಕಟ್ ರೇಟಿಂಗ್ ಏಜೆನ್ಸಿ) ನೀಡಿದ ವರದಿಯನ್ನು ಉಲ್ಲೇಖಿಸಿ ಅಂತಾರಾಷ್ಟ್ರೀಯ ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ಈ ಮೊತ್ತದಲ್ಲಿ 1.6 ರಿಂದ 2 ಲಕ್ಷ ಕೋಟಿ ರೂ.ಗಳು ಸೆಸ್ ಸಂಗ್ರಹದ ಕೊರತೆಯಿಂದಾಗಿವೆ ಎಂದು ವರದಿ ತಿಳಿಸಿದೆ.
ಓದಿ : ಹಿಮಾಚಲ್ ಪ್ರದೇಶ ಬಿಜೆಪಿ ಸಂಸದ ರಾಮ್ ಸ್ವರೂಪ್ ಶವ ಪತ್ತೆ, ಆತ್ಮಹತ್ಯೆ ಶಂಕೆ?
ಕೊರತೆಯು ರಾಜ್ಯಗಳಿಂದ ಕನಿಷ್ಠ 2.2 ಲಕ್ಷ ಕೋಟಿ ರೂ.ಗಳನ್ನು ಮಾರುಕಟ್ಟೆಗಳಿಂದ ಎರವಲು ಪಡೆಯುವಂತೆ ಒತ್ತಾಯಿಸುತ್ತದೆ ಎಂದು ಐ ಸಿ ಆರ್ ಎ ಸೋಮವಾರ(ಮಾ. 15) ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಿದೆ.
ಇನ್ನು, ಮುಂದಿನ ಹಣಕಾಸು ವರ್ಷಕ್ಕೆ 154 ನೇ ಹಣಕಾಸು ಆಯೋಗವು ಶೀಪಾರಸು ಮಾಡಿದಂತೆ ಇದು ಅದರ ವರ್ಧಿತ ಸಾಲ ಮಿತಿಯ ಶೇ. 90 ರಷ್ಟಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
ರಾಜ್ಯಗಳ ನಿವ್ವಳ ಸಾಲಗಳ ಸಾಮಾನ್ಯ ಮಿತಿಯನ್ನು ಒಟ್ಟು ರಾಜ್ಯ ದೇಶೀಯ ಉತ್ಪನ್ನದ ಶೇ. 4 ಎಂದು ನಿಗದಿಪಡಿಸಬೇಕು ಎಂದು ಆಯೋಗವು ಶಿಫಾರಸು ಮಾಡಿದ್ದು, ಇದು ಸಾಮಾನ್ಯ ಸಾಲ ಮಿತಿ ಶೇ. 3 ಕ್ಕಿಂತ ಹೆಚ್ಚಾಗಿದೆ.
“ಆರ್ಥಿಕ ವರ್ಷ 2022 ರ ಕೇಂದ್ರದ ಜಿಡಿಪಿ ಅಂದಾಜಿನ ಆಧಾರದ ಮೇಲೆ, ಒಟ್ಟು ರಾಜ್ಯ ದೇಶೀಯ ಉತ್ಪನ್ನದ ಶೇ, 1 ಅಥವಾ ರಾಜ್ಯಗಳಿಂದ 2.2 ಲಕ್ಷ ಕೋಟಿ ರೂ.ಗಳ ವರ್ಧಿತ ಸಾಲವನ್ನು ನಾವು ಯೋಜಿಸುತ್ತೇವೆ, ಏಕೆಂದರೆ ಕೇಂದ್ರದಿಂದ ಜಿ ಎಸ್‌ಟಿ ಪರಿಹಾರದ ಕೊರತೆಯನ್ನು 1.6 ರಿಂದ 2 ಲಕ್ಷ ರೂ. ಕೋಟಿ, ಒಟ್ಟಾರೆ ಜಿ ಎಸ್ ಟಿ ಪರಿಹಾರದ ಕೊರತೆಯನ್ನು ಎಫ್ ವೈ(ಫೈನಾನ್ಶಿಯಲ್ ಈಯರ್/ಆರ್ಥಿಕ ವರ್ಷ)22 ರಲ್ಲಿ 2.7-3 ಲಕ್ಷ ಕೋಟಿ ರೂ.ಗೆ ತೆಗೆದುಕೊಂಡಿದೆ ”ಎಂದು ಐ ಸಿ ಆರ್ ಎ ನ ಕಾರ್ಪೋರೇಟ್ ವಲಯದ ಮುಖ್ಯಸ್ಥ ಜಯಂತ ರಾಯ್ ಮಾಹಿತಿ ನಿಡಿದ್ದಾರೆ.
ಇನ್ನು, ಏತನ್ಮಧ್ಯೆ, ಪ್ರಸಕ್ತ ಹಣಕಾಸು ವರ್ಷದಲ್ಲಿ (2020-21) ಜಿ ಎಸ್ ಟಿ ಪರಿಹಾರ ಕೊರತೆ 1.1 ಲಕ್ಷ ಕೋಟಿ ರೂ.ಗಳನ್ನು ರಾಜ್ಯಗಳಿಗೆ ಸಂಪೂರ್ಣವಾಗಿ ಬಿಡುಗಡೆ ಮಾಡಲಾಗಿದೆ ಎಂದು ಕೇಂದ್ರ ಹಣಕಾಸು ಸಚಿವಾಲಯ ಸೋಮವಾರ ಪ್ರಕಟಣೆಯಲ್ಲಿ ತಿಳಿಸಿದೆ.
ಓದಿ : ದೆಹಲಿ ಜಗತ್ತಿನ ಅತಿ ಮಲಿನ ರಾಜಧಾನಿ: ಜಾಗತಿಕ ವಾಯು ಗುಣಮಟ್ಟ ವರದಿಯಲ್ಲೇನಿದೆ?
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.