2 ಸಾವಿರ ಅಂಕ ಪತನ ; ಅಮೆರಿಕ-ಚೀನಾ ವಾಕ್ಸಮರಕ್ಕೆ ಷೇರುಪೇಟೆ ತತ್ತರ
Team Udayavani, May 5, 2020, 1:54 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಮುಂಬಯಿ: ಕೋವಿಡ್ ವೈರಸ್ಗೆ ಸಂಬಂಧಿಸಿ ಅಮೆರಿಕ ಮತ್ತು ಚೀನಾ ನಡುವಿನ ವಾಕ್ಸಮರವು ಮತ್ತೂಂದು ಸುತ್ತಿನ ವ್ಯಾಪಾರ ಯುದ್ಧಕ್ಕೆ ನಾಂದಿ ಹಾಡುವುದೇ ಎಂಬ ಭೀತಿ ಹಾಗೂ ರಾಷ್ಟ್ರವ್ಯಾಪಿ ದಿಗ್ಬಂಧನ ಮತ್ತಷ್ಟು ವಿಸ್ತರಣೆ ಆಗಿರುವುದು ಷೇರು ಪೇಟೆಯ ಹೂಡಿಕೆದಾರರನ್ನು ಆಘಾತಕ್ಕೆ ತಳ್ಳಿದೆ.
ಇದರ ಪರಿಣಾಮವೆಂಬಂತೆ, ಮುಂಬೈ ಷೇರುಪೇಟೆ ಸಂವೇದಿ ಸೂಚ್ಯಂಕ ಸೋಮವಾರ ದಾಖಲೆಯ 2002 ಅಂಕಗಳ ಪತನ ಕಂಡಿದೆ. ತಿಂಗಳ ಬಳಿಕ ಈ ಮಟ್ಟದ ಇಳಿಕೆ ಕಂಡಿರುವ ಸೆನ್ಸೆಕ್ಸ್, ದಿನಾಂತ್ಯಕ್ಕೆ 2002 ಅಂಕ ಇಳಿಕೆ (ಶೇ.5.94) ದಾಖಲಿಸಿ, 31,715ರಲ್ಲಿ ವಹಿವಾಟು ಅಂತ್ಯಗೊಳಿಸಿದೆ.
ಹೂಡಿಕೆದಾರರು ಒಂದೇ ಸಮನೆ ಷೇರುಗಳ ಮಾರಾಟದಲ್ಲಿ ತೊಡಗಿಕೊಂಡ ಕಾರಣ, ನಿಫ್ಟಿ ಕೂಡ 566 ಅಂಕ ಕುಸಿದು, 9,293ರಲ್ಲಿ ವಹಿವಾಟು ಅಂತ್ಯಗೊಳಿಸಿದೆ. ಸೋಮವಾರದ ವಹಿವಾಟಿನಲ್ಲಿ ಐಸಿಐಸಿಐ ಬ್ಯಾಂಕು ಅತಿಹೆಚ್ಚು ನಷ್ಟ ಅನುಭವಿಸಿದ್ದು, ಇದರ ಷೇರುಗಳು ಶೇ.10ರಷ್ಟು ಕುಸಿತ ಅನುಭವಿಸಿವೆ.
ಬಜಾಜ್ ಫೈನಾನ್ಸ್, ಎಚ್ಡಿಎಫ್ಸಿ, ಇಂಡಸ್ ಇಂಡ್ ಬ್ಯಾಂಕ್, ಆ್ಯಕ್ಸಿಸ್ ಬ್ಯಾಂಕ್ ಮತ್ತು ಮಾರುತಿ ಕಂಪನಿ ಷೇರು ಗಳು ಕೂಡ ನಷ್ಟ ಕಂಡಿವೆ. ಕೇವಲ ಭಾರ್ತಿ ಏರ್ ಟೆಲ್ ಮತ್ತು ಸನ್ ಫಾರ್ಮಾ ಮಾತ್ರವೇ ಸೋಮವಾರ ಲಾಭ ಕಂಡ ಕಂಪನಿಗಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
Stock Market: ಷೇರುಪೇಟೆ ಸೂಚ್ಯಂಕ 400ಕ್ಕೂ ಅಧಿಕ ಅಂಕ ಕುಸಿತ, ನಿಫ್ಟಿಯೂ ಇಳಿಕೆ
Nestle: ಹೊಸ ವರ್ಷಕ್ಕೆ ಮ್ಯಾಗಿ ನೂಡಲ್ಸ್, ಕಿಟ್ಕ್ಯಾಟ್ ಚಾಕ್ಲೆಟ್ ಬೆಲೆ ಏರಿಕೆ?
‘DigiLocker’; ಕ್ಲೇಮ್ ಮಾಡದ ಹೂಡಿಕೆಗೆ ಪರಿಹಾರ?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.