ಎಜಿಆರ್ ವಿಚಾರ ಮತ್ತೆ ಪರಿಶೀಲಿಸಲ್ಲ ; ಸುಪ್ರೀಂ ಕೋರ್ಟ್ ಸ್ಪಷ್ಟ ಎಚ್ಚರಿಕೆ
Team Udayavani, Mar 19, 2020, 7:19 AM IST
ಹೊಸದಿಲ್ಲಿ: ಬಾಕಿ ಇರುವ ಸರಿದೂಗಿಸಲ್ಪಟ್ಟ ಒಟ್ಟು ಆದಾಯವನ್ನು (ಅಡ್ಜೆಸ್ಟೆಡ್ ಗ್ರಾಸ್ ಇನ್ಕಂ- ಎಜಿಆರ್) ಮತ್ತೂಮ್ಮೆ ಲೆಕ್ಕ ಹಾಕಲು ಯಾವುದೇ ಕಾರಣಕ್ಕೂ ಅವಕಾಶ ನೀಡುವುದಿಲ್ಲ ಎಂದು ದೇಶದ ಎಲ್ಲ ಟೆಲಿಕಾಂ ಕಂಪೆನಿಗಳು ಹಾಗೂ ಕೇಂದ್ರಕ್ಕೆ ಸುಪ್ರೀಂ ಕೋರ್ಟ್ ಸ್ಪಷ್ಟ ಎಚ್ಚರಿಕೆ ನೀಡಿದೆ.
ಟೆಲಿಸಂವಹನ ಕಂಪೆನಿಗಳು ತಮ್ಮ ಎಜಿಆರ್ ಬಾಕಿಯನ್ನು ಮುಂದಿನ 20 ವರ್ಷಗಳಲ್ಲಿ ಪಾವತಿಸುವಂತೆ ಸೂಚಿಸಲು ಕೋರಿ ಕೇಂದ್ರ ಸರಕಾರ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾ| ಅರುಣ್ ಮಿಶ್ರಾ ನೇತೃತ್ವದ ನ್ಯಾಯಪೀಠ, 20 ವರ್ಷಗಳ ಕಾಲಾವಕಾಶ ನೀಡುವುದು ಅಸಮಂಜಸ. ನ್ಯಾಯಾಲಯವು ಈಹಿಂದೆ ನೀಡಿರುವ ಆದೇಶದಲ್ಲಿ ತಿಳಿಸಿದ ಅವಧಿಯೊಳಗೇ ಎಲ್ಲ ಸಂಸ್ಥೆಗಳು ಬಾಕಿ ಮೊತ್ತ ಪಾವತಿಸಬೇಕು ಎಂದು ಸ್ಪಷ್ಟವಾಗಿ ತಿಳಿಸಿದೆ.
ಇದೇ ವೇಳೆ ಅಲ್ಲದೆ, ಎಜಿಆರ್ ಸಮಸ್ಯೆಗೆ ಸಂಬಂಧಿಸಿದಂತೆ ಮಾಧ್ಯಮಗಳಲ್ಲಿ ಪ್ರಕಟವಾದ ಲೇಖನಗಳ ಕುರಿತಂತೆ ಬೇಸರ ವ್ಯಕ್ತಪಡಿಸಿರುವ ನ್ಯಾಯಪೀಠ, ಮುಂದೆ ಅಂತಹ ಲೇಖನಗಳು ಪ್ರಕಟಗೊಂಡರೆ ಅದಕ್ಕೆ ಟೆಲಿಕಾಂ ಕಂಪೆನಿ ಹೊಣೆಯಾಗಬೇಕಾಗುತ್ತದೆ ಮತ್ತು ಅದನ್ನು ನ್ಯಾಯಾಂಗ ನಿಂದನೆ ಎಂದು ಪರಿಗಣಿಸಬೇಕಾಗುತ್ತದೆ ಎಂದು ಎಚ್ಚರಿಸಿದೆ.
ಇನ್ನೊಂದೆಡೆ ಲೋಕಸಭೆ ಅಧಿವೇಶನದಲ್ಲೂ ಬುಧವಾರ ಈ ವಿಷಯ ಕುರಿತು ಡಿಎಂಕೆ ಸಂಸದರು ಮತ್ತು ದೂರಸಂಪರ್ಕ ಸಚಿವರ ನಡುವೆ ತೀವ್ರ ವಾಗ್ವಾದ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!
Bharat Brand: ಭಾರತ್ ಬ್ರ್ಯಾಂಡ್-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34
US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್
Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ
Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.