ಜುಲೈ 1 ರಿಂದ ಸಿಂಡಿಕೇಟ್ ಬ್ಯಾಂಕ್ ನ ಈಗಿರುವ ಐ ಎಫ್​ ಎಸ್ ​ಸಿ ಕೋಡ್ ನಿಷ್ಕ್ರಿಯ..!

ಜುಲೈ 1, 2021ರಿಂದ ಬದಲಾಗಲಿವೆ ಐ ಎಫ್ ​ಎಸ್ ​ಸಿ ಕೋಡ್ ​ಗಳು : ಮಾಹಿತಿ ಇಲ್ಲಿದೆ

Team Udayavani, Jun 14, 2021, 5:58 PM IST

syndicate-bank-customers-alert-here-are-the-changes-come-in-to-effrect-from-july-1st

ನವ ದೆಹಲಿ : ಗ್ರಾಹಕರ ಈ ಹಿಂದಿನ ಐ ಎಫ್ ​ಎಸ್ ​ಸಿ ಕೋಡ್​ಗಳು ಜುಲೈ 1, 2021ರಿಂದ ಬದಲಾಗಲಿವೆ ಎಂದು ಸಿಂಡಿಕೇಟ್ ಬ್ಯಾಂಕ್ ಮಾಹಿತಿ ನೀಡಿದೆ.

ಕೇಂದ್ರ ಸರ್ಕಾರ ಬ್ಯಾಂಕುಗಳ ವಿಲೀನ ಸರಣಿಯಲ್ಲಿ, ಕಳೆದ ವರ್ಷ ಅಂದರೇ 2020ರ ಏಪ್ರಿಲ್​ ನಲ್ಲಿ  ದೇಶದ ದೊಡ್ಡ ನಾಗರಿಕ ಬ್ಯಾಂಕ್ ಗಳಲ್ಲಿ ಒಂದಾದ ಕೆನರಾ ಬ್ಯಾಂಕ್ ನೊಂದಿಗೆ​ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಿದೆ.

“ಕೆನರಾ ಬ್ಯಾಂಕ್​ ನೊಂದಿಗೆ ಸಿಂಡಿಕೇಟ್ ಬ್ಯಾಂಕ್ ವಿಲೀನವಾಗಿದ್ದು, ಈ ಮೂಲಕ ತಿಳಿಸುವುದೇನೆಂದರೆ ಎಲ್ಲ ಸಿಂಡಿಕೇಟ್ ಬ್ಯಾಂಕ್ ನ ಸಿವೈಎನ್ ಬಿ( SYNB) ಎಂದು ಆರಂಭವಾಗುವ  ಐಎಫ್​ ಎಸ್ ​ಸಿ ಬರುವ ತಿಂಗಳು ಅಂದರೇ, ಜುಲೈ ತಿಂಗಳಲ್ಲಿ ಬದಲಾವಣೆ ಆಗಲಿದೆ ಎಂದು ತಿಳಿಸಿದೆ.

ಇದನ್ನೂ ಓದಿ : ಕೋವಿಡ್ ಲಸಿಕೆ ಪಡೆದರೆ ಆಯಸ್ಕಾಂತ ಶಕ್ತಿ ಬರುತ್ತದಾ? ಉಡುಪಿಯ ವೈರಲ್ ವಿಡಿಯೋಗೆ DC ಸ್ಪಷ್ಟನೆ

ಈ ಬಗ್ಗೆ ಮಾಹಿತಿ ಹಂಚಿಕೊಂಡಿರುವ ಕೆನರಾ ಬ್ಯಾಂಕ್ ತನ್ನ ಅಧಿಕೃತ ವೆಬ್ ಸೈಟ್ ನಲ್ಲಿ,  ಜುಲೈ 1, 2021ರಿಂದ ಅನ್ವಯ ಆಗುವಂತೆ ಸಿ ವೈ ಎನ್ ಬಿ( SYNB)  ಎಂದು ಆರಂಭವಾಗುವ ಐಎಫ್​ ಎಸ್ ​ಸಿ ಕೋಡ್ ​ಗಳು ಕಾರ್ಯ ನಿರ್ವಹಣೆ ನಿಲ್ಲಿಸುತ್ತದೆ,” ಎಂದು ಕೆನರಾ ಬ್ಯಾಂಕ್​ ತಿಳಿಸಿದೆ. ಇನ್ನು ಮುಂದೆ ಎನ್​ ಇ ಎಫ್ ​ಟಿ/ಆರ್​ಟಿಜಿಎಸ್​/ಐಎಂಪಿಎಸ್ ಮೂಲಕ ಹಣ ಕಳಿದುವಾಗ ಹೊಸ ಐ ಎಫ್​ಎಸ್ ​ಸಿ ಕೋಡ್ ಸಿ ಎನ್ ಆರ್ ಬಿ (CNRB) ಎಂದು ಬಳಸುವಂತೆ ಮನವಿ ಮಾಡಲಾಗಿದೆ.​

ಕೆನರಾ ಬ್ಯಾಂಕ್​ ನಿಂದ ಅಧಿಕೃತ ವೆಬ್​ ಸೈಟ್  ​ನಲ್ಲಿ ಹೊಸ ಐ ಎಫ್​ಎಸ್ ​ಸಿ ಕೋಡ್​ ಗಳನ್ನು ಬಿಡುಗಡೆ ಮಾಡಲಾಗಿದೆ. ಅವುಗಳನ್ನು ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಇನ್ನು ಮುಂದೆ ಬಳಸಬೇಕು. ತಮ್ಮ ಹೊಸ ಐ ಎಫ್ ಎಸ್ ​ಸಿ ಕೋಡ್ ​ಗಳನ್ನು ಕೆನರಾ ಬ್ಯಾಂಕ್ ​ನ ವೆಬ್​ಸೈಟ್ ​ನಲ್ಲಿ ಇರುವ ಟೂಲ್ ಮೂಲಕ ತಿಳಿಯಬಹುದು. ಸಿಂಡಿಕೇಟ್ ಬ್ಯಾಂಕ್ ಗ್ರಾಹಕರು ಹೊಸ ಐಎಫ್​ಎಸ್​ ಕೋಡ್ ಮತ್ತು ಎಂಐಸಿಆರ್​ ಕೋಡ್​ಗಳ ಜತೆಗೆ ಹೊಸ ಚೆಕ್ ​ಬುಕ್ ​ಗಳನ್ನು ಪಡೆಯಬೇಕಾಗಿದೆ.

ಇನ್ನು, ಸಿಂಡಿಕೇಟ್​ ಬ್ಯಾಂಕ್​ ನ ಈ ಹಿಂದಿನ ಸ್ವಿಫ್ಟ್​ ಕೋಡ್ SYNBINBBXXX ಕೂಡ ಜುಲೈ 1, 2021ರಿಂದ ನಿಷ್ಕ್ರಿಯಗಳ್ಳಲಿದ್ದು,  ವಿದೇಶೀ ವಿನಿಮಯ ವಹಿವಾಟನ್ನು ಸ್ವಿಫ್ಟ್ ಸಂದೇಶಗಳನ್ನು ಸ್ವೀಕರಿಸಲು ಮತ್ತು ಕಳುಹಿಸಲು ಸ್ವಿಫ್ಟ್ ಕೋಡ್ಸ್ ನನ್ನು ಬಳಸಲಾಗುತ್ತದೆ.

ವಿದೇಶೀ ವಿನಿಮಯ ವಹಿವಾಟಿಗೆ ಇನ್ನು ಮುಂದೆ ಸ್ವಿಫ್ಟ್​ ಕೋಡ್ ಸಿಎನ್ ಆರ್ ಬಿ ಐ ಎನ್ ಬಿ ಬಿ ಎಫ್ ಡಿ ಚ(CNRBINBBFD) ಬಳಸಲು ಮನವಿ ಮಾಡಲಾಗಿದೆ ಎಂದು ಕೆನರಾ ಬ್ಯಾಂಕ್ ತಿಳಿಸಿದೆ.

2019 ರಲ್ಲಿ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 10 ಸಾರ್ವಜನಿಕ ಸ್ವಾಮ್ಯದ ಬ್ಯಾಂಕ್ ​ಗಳ ವಿಲೀನ ಘೋಷಣೆ ಮಾಡಿ, ಅದನ್ನು ಜಾಗತಿಕ ಸಾಮರ್ಥ್ಯದ ನಾಲ್ಕು ಬ್ಯಾಂಕ್​ಗಳನ್ನಾಗಿಸುವ ಪ್ರಸ್ತಾವ ಮಾಡಿದರು. ಈ ವಿಲೀನಗಳು ಏಪ್ರಿಲ್ 1, 2021ರಿಂದ ಜಾರಿಗೆ ಬಂತು. ಕೆನರಾ ಬ್ಯಾಂಕ್​ ನಲ್ಲಿ ಸಿಂಡಿಕೇಟ್​ ಬ್ಯಾಂಕ್ ವಿಲೀನವಾಗಿದ್ದು ಅದೇ ವಿಲೀನ ಪ್ರಕ್ರಿಯೆಯ ಭಾಗ. ಈ ಪ್ರಕ್ರಿಯೆಯ ನಂತರ ಕೆನರಾ ಬ್ಯಾಂಕ್, ತನ್ನ ಬ್ಯಾಂಕಿಂಗ್ ವಹಿವಾಟುಗಳ ಹೆಚ್ಚಳದ ಕಾರಣದಿಂದಾಗಿ ದೇಶದ ನಾಲ್ಕನೇ ಅತಿ ದೊಡ್ಡ ಬ್ಯಾಂಕ್ ಗುರುತಿಸಿಕೊಂಡಿದೆ.

ಇದನ್ನೂ ಓದಿ : ಬಾಕಿ ಬಿಲ್‌ ಪಾವತಿಸದಕ್ಕೆ ನಿವೃತ್ತ ಯೋಧನ ಮೃತದೇಹ ನೀಡದ ಆಸ್ಪ ತ್ರೆ ವಿರುದ್ಧ ಆಕ್ರೋಶ

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ

“Jiostar” new website live amid jio domain uproar!

Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್‌’ ಹೊಸ ವೆಬ್‌ಸೈಟ್‌ ಪ್ರತ್ಯಕ್ಷ!

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.