ಹೊಸ ವೇತನ ನಿಯಮ ; ಕೈಗೆ ಸಿಗುವ ವೇತನಕ್ಕೆ ಕತ್ತರಿ?
ಟೇಕ್ ಹೋಂ ಸ್ಯಾಲರಿ ಇಳಿಕೆ ಸಾಧ್ಯತೆ ನಿವೃತ್ತಿ ನಿಧಿಯಲ್ಲಿ ಏರಿಕೆ
Team Udayavani, Dec 10, 2020, 5:55 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: ಮುಂದಿನ ವರ್ಷ ದಿಂದ ನಿಮ್ಮ ಕೈಗೆ ಬರುವ ವೇತನದ ಮೊತ್ತವು ಇಳಿಕೆಯಾಗಲಿದೆ! ಹೊಸ ವೇತನ ನಿಯಮಗಳ ಅನ್ವಯ ಕೇಂದ್ರ ಸರಕಾರವು ಕರಡು ನಿಯಮಗಳನ್ನು ಸಿದ್ಧ ಪಡಿಸಿದ್ದು, ಅದರಂತೆ ಎಲ್ಲ ಕಂಪೆನಿಗಳಿಗೂ ಮುಂದಿನ ವಿತ್ತೀಯ ವರ್ಷದಿಂದ ತಮ್ಮ
ಉದ್ಯೋಗಿಗಳ “ವೇತನದ ಪ್ಯಾಕೇಜ್’ ಪುನಾರಚಿಸುವ ಅನಿವಾರ್ಯತೆ ಎದುರಾಗಿದೆ.
ಹೊಸ ನಿಯಮ ಎಪ್ರಿಲ್‌ನಿಂದ ಅನ್ವಯ ವಾಗಲಿವೆ. ಉದ್ಯೋಗಿಗಳಿಗೆ ನೀಡುವ ಭತ್ತೆಯು ಆತನ ಒಟ್ಟು ವೇತನದ ಶೇ. 50ನ್ನು ಮೀರಬಾರದು ಎಂದು ಈ ನಿಯಮ ಹೇಳುತ್ತದೆ. ಅಂದರೆ ಉದ್ಯೋಗಿಯ ಮೂಲ ವೇತನವೇ ಶೇ. 50ರಷ್ಟಿರಬೇಕು. ನಿಯಮ ಪಾಲಿಸಬೇಕೆಂದರೆ ಉದ್ಯೋಗದಾತರು ಉದ್ಯೋಗಿಗಳ ಮೂಲವೇತನ ಹೆಚ್ಚಿಸಲೇ ಬೇಕಾಗುತ್ತದೆ. ಪರಿಣಾಮ ಗ್ರಾಚ್ಯುಟಿ ಪಾವತಿ ಮೊತ್ತವೂ ಸ್ವಲ್ಪಮಟ್ಟಿಗೆ ಏರಿಕೆಯಾಗುತ್ತದೆ ಮಾತ್ರವಲ್ಲ ಭವಿಷ್ಯ ನಿಧಿ (ಪಿಎಫ್)ಗೆ ಪಾವತಿಯಾ ಗುವ ಉದ್ಯೋಗಿ ಪಾಲೂ ಹೆಚ್ಚಾಗು ತ್ತದೆ. ಇದೆಲ್ಲದರ ಪರಿಣಾಮವೆಂಬಂತೆ ಉದ್ಯೋಗಿಯ ಕೈಗೆ ಬರುವ ಸಂಬಳ (ಟೇಕ್ ಹೋಂ ಸ್ಯಾಲರಿ) ಕಡಿಮೆಯಾಗುತ್ತದೆ. ಆದರೆ ಉದ್ಯೋಗಿಯ ನಿವೃತ್ತಿ ನಿಧಿ ಹೆಚ್ಚಾಗುವುದ ರಿಂದ ದೀರ್ಘಾವಧಿಯ ಲಾಭ ತರಲಿದೆ.
ಸಾಮಾಜಿಕ ಭದ್ರತೆ
ಪ್ರಸ್ತುತ ಬಹುತೇಕ ಖಾಸಗಿ ಕಂಪೆನಿಗಳು ಉದ್ಯೋಗಿಯ ಒಟ್ಟಾರೆ ಸಂಭಾವನೆಯ ಶೇ. 50ಕ್ಕಿಂತ ಕಡಿಮೆ ಮೊತ್ತವನ್ನು ಭತ್ತೆ ಯೇತರ ಮೊತ್ತವೆಂದೂ ಶೇ. 50ಕ್ಕಿಂತ ಹೆಚ್ಚಿನದನ್ನು ಭತ್ತೆಯ ಮೊತ್ತವೆಂದೂ ಪಾವತಿಸು ತ್ತವೆ. ಹೊಸ ವೇತನ ನಿಯಮ ಜಾರಿಯಾ ದರೆ ಇದೂ ಬದಲಾಗುತ್ತದೆ. ಹೀಗಾಗಿ ಸಾಮಾನ್ಯವಾಗಿ ಹೆಚ್ಚಿನ ಭತ್ತೆಗಳನ್ನು ಪಡೆಯುತ್ತಿರುವಂಥ ಖಾಸಗಿ ವಲಯದ ಉದ್ಯೋಗಿಗಳ ಕೈಗೆ ಸಿಗುವ ವೇತನದ ಮೊತ್ತ ಕಡಿಮೆಯಾಗುವುದು ಖಚಿತ. ಹೊಸ ನಿಯಮದಿಂದ ಕೈಗೆ ಬರುವ ಸಂಬಳದ ಪ್ರಮಾಣ ಕಡಿಮೆಯಾದರೂ ಅತ್ಯುತ್ತಮ ಸಾಮಾಜಿಕ ಭದ್ರತೆ, ನಿವೃತ್ತಿ ಬಳಿಕದ ಅನುಕೂಲ ಒದಗಿಸುತ್ತದೆ ಎನ್ನುತ್ತಾರೆ ತಜ್ಞರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.