ಗ್ರಾಹಕರೇ ಗಮನಿಸಿ ; 2020ಕ್ಕೆ ಹೆಚ್ಚಾಗಲಿವೆ ಹೊಸ ಕಾರುಗಳ ಬೆಲೆ
ಜನವರಿಯಿಂದಲೇ ಹೆಚ್ಚಾಗಲಿದೆ ಟಾಟಾ, ಸುಝುಕಿ, ಟೊಯೊಟೋ, ಮಹಿಂದ್ರಾ ಮತ್ತು ಮರ್ಸಿಡಿಸ್ ಕಾರುಗಳ ಬೆಲೆಗಳು
Team Udayavani, Dec 4, 2019, 8:01 PM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ನವದೆಹಲಿ: ಬಿಎಸ್ VI ನಿಯಮಾವಳಿಗಳಿಗೆ ಅನುಗುಣವಾಗಿ ಎಂಜಿನ್ ಗಳನ್ನು ಮೇಲ್ದರ್ಜೆಗೇರಿಸಬೇಕಿರುವುದರಿಂದ 2020ರ ಜನವರಿ ತಿಂಗಳಿನಿಂದ ತಾನು ತಯಾರಿಸುವ ಪ್ರಯಾಣಿಕ ವಾಹನಗಳ ಬೆಲೆಯನ್ನು ಹೆಚ್ಚಿಸುತ್ತಿರುವುದಾಗಿ ದೇಶದ ಅಗ್ರಮಾನ್ಯ ವಾಹನ ತಯಾರಿಕಾ ಕಂಪೆನಿ ಟಾಟಾ ತನ್ನ ಪ್ರಕಟನೆಯಲ್ಲಿಂದು ತಿಳಿಸಿದೆ.
ಪ್ರಸ್ತುತ ಟಾಟಾ ಕಂಪೆನಿಯು ಟಿಯಾಗೋದಿಂದ ಹಿಡಿದು ಪ್ರಯಾಣಿಕ ಕಾರು ಹೆರಿಯರ್ ತನಕ ಉತ್ಪಾದಿಸುತ್ತಿದ್ದು 4.39 ಲಕ್ಷ ರೂಪಾಯಿಗಳಿಂದ ಪ್ರಾರಂಭಿಸಿ 16.85 ಲಕ್ಷ ರೂಪಾಯಿಗಳವರೆಗಿನ (ದೆಹಲಿಯಲ್ಲಿರುವ ಎಕ್ಸ್ ಶೋ ರೂಂ ಬೆಲೆ) ವಾಹನಗಳನ್ನು ಮಾರುಕಟ್ಟೆಗೆ ಬಿಡುಗಡೆಗೊಳಿಸುತ್ತಿದೆ.
ಪ್ರಯಾಣಿಕ ವಾಹನಗಳ ಬೆಲೆ ಹೆಚ್ಚಳ ವಿಚಾರವನ್ನು ಟಾಟಾ ಮೋಟಾರ್ ಅಧ್ಯಕ್ಷ (ಪ್ರಯಾಣಿಕ ವಾಹನಗಳ ಬ್ಯುಸಿನೆಸ್ ಯುನಿಟ್) ಮಯಾಂಕ್ ಪಾರೀಖ್ ಅವರು ಸಂದರ್ಶನ ಒಂದರಲ್ಲಿ ತಿಳಿಸಿದ್ದಾರೆ. ಆದರೆ ಯಾವ ವಾಹನಗಳ ಬೆಲೆಯಲ್ಲಿ ಎಷ್ಟು ವ್ಯತ್ಯಾಸವಾಗಲಿದೆ ಎಂಬುದನ್ನು ಬಹಿರಂಗಪಡಿಸಲು ನಿರಾಕರಿಸಿದ ಪಾರೀಖ್ ಅವರು ಮುಂದಿನ ತಿಂಗಳು ಆಗುತ್ತಿರುವ ಈ ಬೆಲೆ ಹೆಚ್ಚಳ ಸ್ವಲ್ಪ ದೊಡ್ಡ ಪ್ರಮಾಣದಲ್ಲೇ ಆಗಲಿದೆ ಎಂಬ ಸುಳಿವನ್ನು ನೀಡಿದ್ದಾರೆ.
ಸಾಮಾನ್ಯವಾಗಿ ಉತ್ಪಾದನೆಯಲ್ಲಿ ಯಾವುದೇ ರೀತಿಯ ಬದಲಾವಣೆಗಳಾದಲ್ಲಿ ಬೆಲೆ ಹತ್ತು ಸಾವಿರದಿಂದ ಹದಿನೈದು ಸಾವಿರದವರೆಗೆ ಹೆಚ್ಚಳವಾಗುತ್ತದೆ. ಇದೀಗ ಎರಡು ರೀತಿಯ ಬದಲಾವಣೆಗಳಾಗುತ್ತಿದೆ ಒಂದು ಬಿಎಸ್ VIಗೆ ಹೋಗುತ್ತಿರುವುದು ಹಾಗೂ ಇನ್ನೊಂದು ಬಿಡಿಭಾಗಗಳ ಬೆಲೆಯಲ್ಲೂ ಹೆಚ್ಚಳವಾಗಿದೆ, ಹಾಗಾಗಿ ನಿರ್ಧಿಷ್ಟ ಬೆಲೆ ಹೆಚ್ಚಳದ ಕುರಿತಾಗಿ ಚರ್ಚೆಗಳು ನಡೆಯುತ್ತಿದೆ ಎಂದು ಪಾರೀಖ್ ಅವರು ಮಾಹಿತಿ ನೀಡಿದ್ದಾರೆ.
ಇದಕ್ಕೂ ಮೊದಲು ಮಾರುತಿ ಸುಝುಕಿ ತನ್ನ ವಿವಿಧ ಕಾರಿನ ಮಾದರಿಗಳ ಬೆಲೆಗಳನ್ನು ಜನವರಿಯಲ್ಲಿ ಹೆಚ್ಚಿಸುವುದಾಗಿ ಹೇಳಿಕೊಂಡಿತ್ತು. ಇವೆರಡು ಕಂಪೆನಿಗಳು ಮಾತ್ರವಲ್ಲದೇ ಟೊಯೊಟೋ, ಮಹಿಂದ್ರಾ ಆ್ಯಂಡ್ ಮಹಿಂದ್ರಾ, ಮರ್ಸಿಡಿಸ್ ಬೆಂಝ್ ಕಂಪೆನಿಗಳೂ ಸಹ ಮುಂದಿನ ವರ್ಷಾರಂಭದಲ್ಲಿ ತಮ್ಮ ವಾಹನಗಳ ಮಾದರಿಗಳಲ್ಲಿ ಬೆಲೆ ಹೆಚ್ಚಳ ಮಾಡುವ ಸುಳಿವನ್ನು ನೀಡಿವೆ.
ಆದರೆ, ಹುಂಡೈ ಮೋಟಾರ್ ಇಂಡಿಯಾ ಮತ್ತು ಹೋಂಡಾ ಕಾರ್ಸ್ ಇಂಡಿಯಾ ಸಂಸ್ಥೆಗಳು ಜನವರಿಯಲ್ಲಿ ಬೆಲೆ ಹೆಚ್ಚಳ ಮಾಡುವುದಿಲ್ಲ ಎಂದು ಹೇಳಿಕೊಂಡಿವೆ ಆದರೆ ಒಮ್ಮೆ ದೇಶದಲ್ಲಿ ಬಿಎಸ್ VI ಮಾದರಿ ಸಂಪೂರ್ಣವಾಗಿ ಜಾರಿಗೊಂಡಲ್ಲಿ ಈ ಕಂಪೆನಿಗಳ ಕಾರುಗಳ ಬೆಲೆಯಲ್ಲೂ ಹೆಚ್ಚಳವಾಗುವ ನಿರೀಕ್ಷೆ ಇದೆ.
ದೇಶಾದ್ಯಂತ ಬಿಎಸ್ VI ಮಾದರಿ 2020ರ ಎಪ್ರಿಲ್ ತಿಂಗಳಿನಿಂದ ಜಾರಿಯಾಗಲಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock: ಟ್ರಂಪ್ ನೀತಿ ಎಫೆಕ್ಟ್-ಷೇರುಪೇಟೆ ಸೂಚ್ಯಂಕ 1,200 ಅಂಕ ಕುಸಿತ, 7 ಲಕ್ಷ ಕೋಟಿ ನಷ್ಟ
Bullet Train: ಮುಂಬೈ-ಅಹಮದಾಬಾದ್ ಹೈಸ್ಪೀಡ್ ಕಾರಿಡಾರ್ ವಿದ್ಯುದ್ದೀಕರಣ ಕಾರ್ಯ ಶುರು
The Shoolin Group: ಮಂಗಳೂರಿನ ಹೊಸ ಪ್ರೀಮಿಯಂ ಹೋಟೆಲ್ ಶೂಲಿನ್ ಕಂಫರ್ಟ್ಸ್ ಉದ್ಘಾಟನೆ
Share Market: ಷೇರುಪೇಟೆ ಸೂಚ್ಯಂಕ 300 ಅಂಕ ಜಿಗಿತ: ಲಾಭಗಳಿಸಿದ ಷೇರು ಯಾವುದು?
Meta Lay off: ಟೆಕ್ ದೈತ್ಯ ಮೆಟಾ ಸಂಸ್ಥೆಯಿಂದ 3,600 ಉದ್ಯೋಗಿಗಳ ವಜಾ: ಜುಗರ್ ಬರ್ಗ್