2020ರ ಎಪ್ರಿಲ್‌ನಿಂದ ಟಾಟಾ ನ್ಯಾನೋ ಉತ್ಪಾದನೆ, ಮಾರಾಟ ಬಂದ್
Team Udayavani, Jan 24, 2019, 1:35 PM IST
ಹೈದರಾಬಾದ್ : ರತನ್ ಟಾಟಾ ಅವರ ಕನಸಿನ ಕಾರು ಎಂದೇ ವರ್ಣಿಸಲ್ಪಟ್ಟಿದ್ದ ನ್ಯಾನೋ ಕಾರಿನ ಉತ್ಪಾದನೆ ಮತ್ತು ಮಾರಾಟವನ್ನು 2020ರ ಎಪ್ರಿಲ್‌ನಿಂದ ನಿಲ್ಲಿಸಲಾಗುವುದು ಎಂದು ಟಾಟಾ ಮೋಟರ್ಸ್ ಕಂಪೆನಿ ಹೇಳಿದೆ.
ಟಾಟಾ ನ್ಯಾನೋ ಕಾರನ್ನು ಬಿಎಸ್-6 ಮಟ್ಟಕ್ಕೇರಿಸುವಲ್ಲಿ ಹಣ ಹೂಡುವ ಯಾವುದೇ ಯೋಜನೆ ತನಗಿಲ್ಲ ಎಂದು ಕಂಪೆನಿ ಹೇಳಿದೆ.
ಈ ವರ್ಷ ಜನವರಿಯಿಂದ ಕೆಲವೊಂದು ಸುರಕ್ಷಾ ಕ್ರಮಗಳು ಜಾರಿಗೆ ಬಂದಿವೆ. ಎಪ್ರಿಲ್‌ನಲ್ಲಿ ಪುನಃ ಇನ್ನಷ್ಟು ಕ್ರಮಗಳು ಜಾರಿಗೆ ಬರಲಿವೆ. ಅಕ್ಟೋಬರ್‌ನಿಂದ ಮತ್ತೆ ಹೊಸ ಸುರಕ್ಷಾ ಕ್ರಮಗಳು ಜಾರಿಗೆ ಬರಲಿವೆ. 2020ರ ಎಪ್ರಿಲ್ 1ರಿಂದ ಬಿಎಸ್-6 ಸಂಪೂರ್ಣವಾಗಿ ಜಾರಿಗೆ ಬರಲಿದೆ.
ಇದಕ್ಕೆ ಅನುಗುಣವಾದ ಉತ್ಪನ್ನ ತರಲು ದೊಡ್ಡ ಮಟ್ಟದ ಹೂಡಿಕೆ ಅಗತ್ಯ ಇರುತ್ತದೆ. ಆದರೆ ಕಂಪೆನಿ ನ್ಯಾನೋ ಸುಧಾರಣೆಗಾಗಿ ಹಣ ಹೂಡುವ ಯಾವುದೇ ಯೋಜನೆ ಹೊಂದಿಲ್ಲ ಎಂದು ಕಂಪೆನಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
UPI: ದೇಶದಲ್ಲಿ ಯುಪಿಐ ವಿಕ್ರಮ ಅಕ್ಟೋಬರ್‌ನಲ್ಲಿ ದಾಖಲೆ
Google;ಗೂಗಲ್ ಮ್ಯಾಪ್ ಜತೆ ಮಾತಾಡುತ್ತಾ ಡ್ರೈವ್ ಮಾಡಬಹುದು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.