ಟಾಟಾ ಪಂಚ್ ಕಾರು ಬಿಡುಗಡೆ
ಸಂಪೂರ್ಣ ಸುರಕ್ಷತೆ, ಅತ್ಯದ್ಭುತ ಗ್ರೌಂಡ್ ಕ್ಲಿಯರೆನ್ಸ್ | ಎಸ್‌ಯುವಿ ಆವೃತ್ತಿಯ ಕಾರು ಮಾರುಕಟ್ಟೆಗೆ
Team Udayavani, Oct 11, 2021, 11:56 AM IST
ಮುಂಬೈ: ಒಳಾಂಗಣ ವಿಸ್ತೀರ್ಣ, ಸಂಪೂರ್ಣ ಸುರಕ್ಷತೆ, ದೃಢತೆ, ಅದ್ಭುತ ಗ್ರೌಂಡ್ ಕ್ಲಿಯರೆನ್ಸ್ ಹೊಂದಿರುವ “ಟಾಟಾ ಪಂಚ್’ ಕಾರನ್ನು ಟಾಟಾ ಮೋಟಾರ್ಸ್ ಮಾರುಕಟ್ಟೆಗೆ ಹೊಸದಾಗಿ ಪರಿಚಯಿಸಿದೆ. ಟಾಟಾ ಮೋಟಾರ್ಸ್‌ನ ಎಸ್ ಯುವಿ ಆವೃತ್ತಿಯ ಈ ಕಾರು ಇಂದಿನ ಯುವ ಸಮುದಾಯದ ಆಶಯಕ್ಕೆ ಪೂರಕವಾಗಿ ನಿರ್ಮಾಣವಾದಂತಿದೆ.
ಇದು, ಮಿನಿ ಎಸ್‌ಯುವಿ ಕಾರಾಗಿದ್ದು, ಹೊಸ ತಂತ್ರಜ್ಞಾನದೊಂದಿಗೆ ಆವಿಷ್ಕರಿಸಲಾಗಿದೆ. ಈ ಕುರಿತು “ಉದಯವಾಣಿ’ ಟೆಸ್ಟ್ ಡ್ರೈವ್ ನಡೆಸಿದೆ. “ಟಾಟಾ ಪಂಚ್’ನ ವಿನ್ಯಾಸ ಆಕರ್ಷಕವಾಗಿದೆ. ಟಾಟಾ ಮೋಟರ್ಸ್‌ನ 2.0 ವಿನ್ಯಾಸ ಕಾರ್ಯಕ್ರಮದಡಿ “ಪಂಚ್’ ಅನ್ನು ವಿನ್ಯಾಸ ಮಾಡಲಾಗಿದೆ. ಈಗಾಗಲೇ ಬಿಡುಗಡೆ ಆಗಿರುವ
ನೆಕ್ಸಾನ್, ಆಲ್ಟೋಜ್, ಸಫಾರಿ, ಹ್ಯಾರಿಯರ್‌ನಂತೆ ಪಂಚ್‌ನ ವಿನ್ಯಾಸವೂ ಆಕರ್ಷಕವಾಗಿದೆ. ಒಂದೆಡೆ ಎಸ್‌ಯುವಿ ಗಡುಸುತನ ಮತ್ತು ಮತ್ತೂಂದೆಡೆ ಮೃದುಭಾವ ನೀಡುವ ಎಲಿಮೆಂಟ್‌ಗಳು ಸಮ್ಮಿಳಿತವಾಗಿವೆ. ನೆಕ್ಸಾನ್‌ನಿಂದ ಸ್ಪೂರ್ತಿ ಪಡೆದು ಪಂಚ್‌ನ ಹಿಂಭಾಗವನ್ನು ವಿನ್ಯಾಸ ಮಾಡಲಾಗಿದೆ.
ಮಿರರ್: ಕಾರಿನಲ್ಲಿರುವ ಹಿಂದಿನ ಗ್ಲಾಸ್‌ಗಳು ಇತರೆ ಕಾರುಗಳಿಗೆ ಹೋಲಿಸಿದರೆ ಅಲ್ಪ ಮಟ್ಟದಲ್ಲಿ ದೊಡ್ಡದಾಗಿವೆ. ಇದರಿಂದಾಗಿ ಕಾರಿನ ಹೊರಗಿನಿಂದ ಇತರರನ್ನು ಬೇಗ ಗುರುತಿಸಲು ಸಾಧ್ಯವಾಗುತ್ತದೆ. ಇನ್ನು ಪ್ರವಾಸ ಸಂದರ್ಭದಲ್ಲಿ ಮಕ್ಕಳು ಗ್ಲಾಸ್ ಅನ್ನು ತೆಗೆಯದೇ ನಿಸರ್ಗವನ್ನು ಕಾರಿನಲ್ಲಿಯೇ ಕೂತು ಆನಂದಿಸಬಹುದಾಗಿದೆ. ಹಾಗೆಯೇ ಕಾರು ಎಲ್‌ಇಡಿ ಬೆಳಕು ಚೆಲ್ಲುತ್ತದೆ. ಕಾರಿನ ಅಕ್ಕಪಕ್ಕ ಇಂಡಿಕೇಟರ್‌ಗಳನ್ನು ಹಿಂಬದಿ ಸವಾರರಿಗೆ ತೀಕ್ಷ್ಣವಾಗಿ ಗೋಚರವಾಗುವಂತೆ ನಿರ್ಮಿಸಲಾಗಿದೆ.
ಹೆಡ್‌ಲೈಟ್ ಎಲ್‌ಇಡಿಯಿಂದ ಕೂಡಿದ್ದು ರಾತ್ರಿ ಚಾಲನೆ ವೇಳೆ ಆರಾಮದಾಯಕವಾಗಿರಲಿದೆ. ಕಾರು ಚಾಲನೆ ಅನುಭವ: ಟಾಟಾ ಪಂಚ್ ಕಾರು ಮ್ಯಾನುವಲ್ ಹಾಗೂ ಆಟೋ ಮ್ಯಾಟಿಕ್‌ನಲ್ಲಿ ಲಭ್ಯವಿದೆ. ಕೇವಲ 3 ಸೆಕೆಂಡ್‌ಗಳಲ್ಲಿ 0-100 ಕಿ. ಮೀ. ಸ್ಪೀಡ್ ಹೋಗುವ ಈ ಕಾರನ್ನು ಚಲಾಯಿಸುವಾಗ ಅತ್ಯದ್ಭುತ ಅನುಭವ ನೀಡುತ್ತದೆ.
ಪ್ರತಿ ಗಂಟೆಗೆ ಗರಿಷ್ಠ 150 ಕಿ.ಮೀ. ವೇಗವನ್ನು ತಲುಪುವ ಸಾಮರ್ಥ್ಯ ಹೊಂದಿದೆ. ಕಾರಿನ ಒಳಾಂಗಣವೂ ಅತ್ಯುತ್ತಮವಾಗಿದ್ದು 4×1 ಮಂದಿ ಆರಾಮದಾಯಕವಾಗಿ ಕೂರಬಹುದಾಗಿದೆ. ಕಾರಿನ ಸೀಟುಗಳು ಸಮಾನಾಂತರವಾಗಿದ್ದು ಪ್ರಯಾಣಿಕರಿಗೆ ಬೆನ್ನು ನೋವಿನ ಅನುಭವ ಕಂಡು ಬರುವುದಿಲ್ಲ. ಹಾಗೆಯೇ ಚಾಲಕನ ಸೀಟು ಮುಂಬದಿ ಗ್ಲಾಸ್‌ಗಿಂತ ಅಲ್ಪ ಎತ್ತರವಾಗಿ ಗೋಚರಿಸಲಿದ್ದು ಮುಂಬದಿ ಬರುವ ವಾಹನಗಳು ಸ್ಪಷ್ಟವಾಗಿ ಕಾಣುತ್ತವೆ. ಹಿಂಬದಿ ಇರುವ ಬೂಟ್ ಸ್ಪೇಸ್ ಹೆಚ್ಚಾಗಿದೆ. ಮಾರುಕಟ್ಟೆಗೆ ಹೋದಾಗ, ಮನೆಯಿಂದ ಪ್ರಯಾಣಿಸುವಾಗ ಹೆಚ್ಚಾಗಿ ಸರಕುಗಳನ್ನು ತುಂಬಲು ಸಹಕಾರಿಯಾಗುತ್ತದೆ.
ಇದನ್ನೂ ಓದಿ;- ಕತಾರ್‌ನಲ್ಲಿ ಭಾರತೀಯ ಮೂಲದ ಮೂವರು ಸಮುದ್ರ ಪಾಲು
ಕಾರಿನಲ್ಲಿ ಎಲ್‌ಇಡಿ ಸ್ಕ್ರೀನ್ ಕೂಡ ಇದ್ದು ತಾಪಮಾನ, ಟೈಮಿಂಗ್ಸ್, ಲೋಕೇಷನ್ ಅನ್ನು ಮತ್ತೂಬ್ಬರಿಗೆ ಸೆಂಡ್ ಮಾಡುವ ತಾಂತ್ರಿಕತೆಯನ್ನು ಅಳವಡಿಸಲಾಗಿದೆ. ಹಾಗೆಯೇ ಎಫ್.ಎಂ, ಬ್ಲೂ ಟೂತ್ ಕನೆಕ್ಟಿವಿಟಿಯೂ ಇದೆ. ಕಾರಿನಲ್ಲಿ ಎಸಿ ಸೌಲಭ್ಯವೂ ಇದೆ. 160 ಕಿ.ಮೀ. ಸ್ಪೀಡ್‌ನಲ್ಲಿ ಕಾರು ಚಲಿಸಿದರೂ ಎಂಜಿನ್ ಮೂಲಕ ಯಾವುದೇ ಶಬ್ಧ ಬರುವುದಿಲ್ಲ.
“ಭಾರತ, ಯುಕೆ, ಇಟಲಿಯಲ್ಲಿರುವ ನಮ್ಮ ಮೂರು ವಿನ್ಯಾಸದ ಸ್ಟುಡಿಯೋಗಳು ಕಾರು ರಚನೆಯಲ್ಲಿ ಪ್ರಮುಖ ಪಾತ್ರವಹಿಸಿವೆ. ಇದರಲ್ಲಿ 140ಕ್ಕೂ ಹೆಚ್ಚು ಸಿಬ್ಬಂದಿ, ನೂರಾರು ಸ್ಕೆಚ್‌ಗಳು, ಹಲವಾರು ವಿನ್ಯಾಸದ ಪ್ರಸ್ತಾಪ ಹಾಗೂ ಮಾದರಿಗಳನ್ನು ತಯಾರಿಸಲಾಗಿತ್ತು. ಅಂತಿಮವಾಗಿ ಎಸ್‌ಯುವಿ ಆವೃತ್ತಿಯ ನೂತನ ತಂತ್ರಜ್ಞಾನ ಹೊಂದಿರುವ “ಟಾಟಾ ಪಂಚ್’ ರಚಿಸಲಾಗಿದೆ.”
– ಮಾರ್ಟಿನ್ ಉಹ್ಲಾರಿಕ್, ಟಾಟಾ ಮೋಟಾರ್ಸ್ ಲಿಮಿಟೆಡ್ ವಿನ್ಯಾಸದ ಜಾಗತಿಕ ಮುಖ್ಯಸ್ಥ
ಬುಕ್ಕಿಂಗ್‌ಗೆ 21ಸಾವಿರ ರೂ. ಭಾರತದ ಪ್ರಮುಖ ಆಟೋ ಮೊಬೈಲ್ ಆಗಿರುವ ಟಾಟಾ ಮೋಟಾರ್ಸ್ ದೇಶದ ಮೊದಲ ಉಪ-ಕಾಂಪ್ಯಾಕ್ಟ್ ಎಸ್‌ಯುವಿ, “ಟಾಟಾ ಪಂಚ್’ ನಾಲ್ಕು ವಿಭಿನ್ನ ಶೈಲಿಗಳಲ್ಲಿ ಲಭ್ಯವಿದೆ. 7 ಬಣ್ಣಗಳಲ್ಲಿ ಕಾರು ಲಭ್ಯವಿದೆ. ಭಾರತಾದ್ಯಂತ 1 ಸಾವಿರಕ್ಕೂ ಹೆಚ್ಚು ಶೋ ರೂಂಗಳಲ್ಲಿ ಕೇವಲ 21 ಸಾವಿರ ರೂ. ನೀಡಿ ಬುಕ್ಕಿಂಗ್ ಮಾಡಿ ಕಾರನ್ನು ಪಡೆಯಬಹುದಾಗಿದೆ. 5 ಲಕ್ಷ ರೂ.ಆರಂಭಿಕ ಬೆಲೆ ಎಂದು ಅಂದಾಜಿಸಲಾಗಿದೆ.
● ಹರೀಶ್ ಎಚ್.ಆರ್. ಹಾಡೋನಹಳ್ಳಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.