![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Oct 10, 2019, 3:32 PM IST
ನವದೆಹಲಿ: ಕಾರು ತಯಾರಿಕಾ ಸಂಸ್ಥೆ ಟಾಟಾ, ತನ್ನ ಜನಪ್ರಿಯ ಮಾಡೆಲ್ ಆದ ಟಾಟಾ ಟಿಗೋರ್ ಕಾರಿನ “ವಿದ್ಯುತ್ ಚಾಲಿತ ಆವೃತ್ತಿ’ಯನ್ನು ಬುಧವಾರ ಬಿಡುಗಡೆ ಮಾಡಿದೆ.
ಒಂದು ಬಾರಿ ಚಾರ್ಚ್ ಮಾಡಿದರೆ,213 ಕಿ.ಮೀ.ವರೆಗೆ ಸಾಗಬಲ್ಲ ಶಕ್ತಿಶಾಲಿ ರೀಚಾರ್ಜಬಲ್ ಬ್ಯಾಟರಿ ಹೊಂದಿರುವುದು ಈ ಕಾರಿನ ವಿಶೇಷ. ಈ ಕಾರು, ಎಕ್ಸ್‌ಎಂ, ಎಕ್ಸ್ ಟಿ, ಎಕ್ಸ್‌ಇ ಪ್ಲಸ್, ಎಕ್ಸ್ ಎಮ್ ಪ್ಲಸ್ ಹಾಗೂ ಎಕ್ಸ್‌ಟಿ ಪ್ಲಸ್ ಎಂಬ ಮೂರು ಮಾದರಿಗಳಲ್ಲಿ ಲಭ್ಯವಿರಲಿದ್ದು, ಇವೆಲ್ಲವೂ ಆಟೋಮ್ಯಾಟಿಕ್ ಗೇರ್ ವ್ಯವಸ್ಥೆಯಲ್ಲಿ ಮಾತ್ರ ಲಭ್ಯ.
ಇವುಗಳ ಬೆಲೆ ದೆಹಲಿ ಎಕ್ಸ್-ಶೋರೂಂ ಬೆಲೆಗಳ ಪ್ರಕಾರ, 9.44ರಿಂದ 13.41 ಲಕ್ಷ ರೂ.ವರೆಗೆ ಇದೆ. ಬೆಂಗಳೂರು ಎಕ್ಸ್ -ಶೋರೂಂ ಬೆಲೆಗಳ ಪ್ರಕಾರ, 10.99ರಿಂದ 13.41 ಲಕ್ಷ ರೂ.ವರೆಗೆ ಇದೆ.
ಹೋಂಡಾ ಸಿಟಿ ಮುನ್ನಡೆ: ಸಿ-ಸೆಗ್ಮೆಂಟ್ ಸೆಡಾನ್ ಕಾರುಗಳ ಮಾರಾಟದಲ್ಲಿ ಕಳೆದ ತಿಂಗಳು ಹೋಂಡಾ ಸಿಟಿ, ತನ್ನ ಪ್ರತಿಸ್ಪರ್ಧಿಗಳಾದ ಹುಂಡೈ ವರ್ನಾ, ಮಾರುತಿ ಸಿಯಾಜ್‌ಗಳನ್ನು ಹಿಂದಿಕ್ಕಿದೆ. ಸೆಪ್ಟೆಂಬರ್‌ನಲ್ಲಿ 1,819 ಹೋಂಡಾ ಸಿಟಿ ಕಾರುಗಳು ಮಾರಾಟವಾಗಿದ್ದರೆ, ವರ್ನಾ 1,938 ಮತ್ತು ಸಿಯಾಜ್ 1,715 ಕಾರುಗಳು ಮಾರಾಟವಾಗಿವೆ.
ಬಜಾಜ್ ಇ-ಸ್ಕೂಟರ್
ದಶಕಗಳ ಹಿಂದೆ ಭಾರತದಲ್ಲಿ ಜನಪ್ರಿಯವಾಗಿದ್ದ ಬಜಾಜ್‌ನ ಚೇತಕ್ ಸ್ಕೂಟರನ್ನು ಮತ್ತೆ ಮಾರುಕಟ್ಟೆಗೆ ಪರಿಚಯಿಸಲಾಗುತ್ತಿದೆ. ಅ. 16ರಂದು ಅನಾವರಣಗೊಳ್ಳಲಿರುವ ಆ ಸ್ಕೂಟರ್ ವಿದ್ಯುತ್ ಚಾಲಿತ ಮಾದರಿಯಲ್ಲಿ ಇರಲಿದೆ. ಈ ಹೊಸ ವಿನ್ಯಾಸಕ್ಕೆ “ಅರ್ಬನೈಟ್’ ಎಂದು ಹೆಸರಿಡಲಾಗಿದೆ.
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.