ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತತ್ಕಾಲ್‌ಗೆ ಆದ್ಯತೆ!

2021ರ ಹೊತ್ತಿಗೆ ಗುತ್ತಿಗೆ ಆಧಾರಿತ, ತಾತ್ಕಾಲಿಕ ಉದ್ಯೋಗಿಗಳ ನೇಮಕ ಹೆಚ್ಚಳ ನಿರೀಕ್ಷೆ

Team Udayavani, Jun 3, 2020, 11:39 AM IST

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ತತ್ಕಾಲ್‌ಗೆ ಆದ್ಯತೆ!

ಸಾಂದರ್ಭಿಕ ಚಿತ್ರ

ಒಂದು ಕಡೆ ಕೋವಿಡ್ ಹಾವಳಿ ಏರುತ್ತಲೇ ಇದೆ. ಮತ್ತೂಂದು ಕಡೆ ಭಾರತೀಯರು ದಿಗ್ಬಂಧನದಿಂದ ಹೊರಬಂದು ಸಹಜ ಜೀವನಕ್ಕೆ ಮರಳಲು ಸಜ್ಜಾಗಿದ್ದಾರೆ. ಈ ಹಂತದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಇದನ್ನೇ ಆಧರಿಸಿರುವ ಸೇವೆಗಳಲ್ಲಿ ಒಂದು ಮಹತ್ವದ ಬದಲಾವಣೆಗೆ ವೇದಿಕೆ ಸಿದ್ಧವಾಗಿದೆ. ಎಲ್ಲ ಅಂದುಕೊಂಡಂತೆ ನಡೆದರೆ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಶಾಶ್ವತ ನೌಕರರ ಬದಲು, ಗುತ್ತಿಗೆ ಆಧಾರದಲ್ಲಿ ಉದ್ಯೋಗಿಗಳನ್ನು ತೆಗೆದುಕೊಳ್ಳುವ ಪ್ರಮಾಣ ಏರುತ್ತದೆ. ಅಂದರೆ ತತ್ಕಾಲಕ್ಕೆ ಕೆಲಸ ಮಾಡುವರ ಸಂಖ್ಯೆ ಜಾಸ್ತಿಯಾಗುತ್ತದೆ. ಯಾಕೆ? ಹೇಗೆ?

ಮಾಹಿತಿ ತಂತ್ರಜ್ಞಾನ ಕ್ಷೇತ್ರ ಕಷ್ಟದಲ್ಲಿದೆ
ಸದ್ಯ ಕೋವಿಡ್ ಕಾರಣಕ್ಕೆ ಮಾಹಿತಿ ತಂತ್ರಜ್ಞಾನ ಮತ್ತು ಇದನ್ನೇ ಆಧರಿಸಿರುವ ವ್ಯವಹಾರ ನಡೆಸಿರುವ ಕಂಪನಿಗಳ ವಹಿವಾಟು ಕುಗ್ಗಿದೆ. ಈ ಎಲ್ಲ ಕಂಪನಿಗಳು ತಮ್ಮ ಆದಾಯಕ್ಕಾಗಿ ನೆಚ್ಚಿಕೊಂಡಿರುವುದು ಅಮೆರಿಕ ಮತ್ತು ಯೂರೋಪ್‌ ದೇಶಗಳನ್ನು. ಆದರೆ ಕೊರೊನಾದಿಂದ ಆ ದೇಶಗಳೇ ನಲುಗಿವೆ! ಆದ್ದರಿಂದ ಉದ್ಯೋಗಿಗಳನ್ನು ಸಾಕುವ ಸ್ಥಿತಿಯಲ್ಲಿ ಅವಿಲ್ಲ.

ಯಾಕೆ ಗುತ್ತಿಗೆ ಕೆಲಸಗಾರರಿಗೇ ಆದ್ಯತೆ?
ನಿಧಾನಕ್ಕೆ ಯೂರೋಪ್‌ ಮತ್ತು ಅಮೆರಿಕದಲ್ಲಿ ಮತ್ತೆ ಎಲ್ಲ ರೀತಿಯ ಸೇವೆಗಳು ಆರಂಭವಾಗುತ್ತಿವೆ. ಹಾಗೆಯೇ ವಿವಿಧ ಕಂಪನಿಗಳು ತಮ್ಮ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲ್‌ ಮಾಡಿಕೊಳ್ಳುವತ್ತ ಗಮನ ಹರಿಸಿವೆ. ಈ ಹಂತದಲ್ಲಿ ಮಾಹಿತಿ ತಂತ್ರಜ್ಞಾನಾಧಾರಿತ ಸೇವೆಗಳಿಗೆ ಮಹತ್ವ ಸೃಷ್ಟಿಯಾಗುತ್ತಿದೆ. ಆದರೆ ಕಂಪನಿಗಳು ಶಾಶ್ವತವಾಗಿ ಕೆಲಸಕ್ಕೆ ತೆಗೆದುಕೊಳ್ಳುವ ಬದಲು, ತಾತ್ಕಾಲಿಕವಾಗಿ ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಳ್ಳುವುದಕ್ಕೆ
ಆದ್ಯತೆ ನೀಡುತ್ತವೆ. ಇದಕ್ಕಿರುವ ಕಾರಣಗಳು ಹೀಗಿವೆ…

ನಿರ್ದಿಷ್ಟ ಯೋಜನೆಗಳಿಗೆ ತಕ್ಕಂತೆ ನೇಮಕ: ಐಟಿ ಕಂಪನಿಗಳು ತಾವು ಒಪ್ಪಿಕೊಳ್ಳುವ ನಿರ್ದಿಷ್ಟ ಯೋಜನೆಗಳಿಗೆ ತಕ್ಕಂತೆ ನೇಮಕ ಮಾಡಿಕೊಳ್ಳುವುದಕ್ಕೆ ಗಮನ ಹರಿಸುತ್ತವೆ. ಆ ಯೋಜನೆ ಮುಗಿದ ಮೇಲೆ ಉದ್ಯೋಗಿಗಳ ಕೆಲಸವೂ ಮುಗಿಯುತ್ತದೆ.

ಬದಲಾವಣೆ ಸುಲಭ: ಐಟಿ ಕಂಪನಿಗಳು ತರಹೇವಾರಿ ಯೋಜನೆಗಳನ್ನು ಒಪ್ಪಿಕೊಳ್ಳುತ್ತವೆ. ಇದಕ್ಕೆ ಅದೇ ರೀತಿಯ ಕುಶಲ ಕೆಲಸಗಾರರು ಬೇಕು. ಆಗ ಬೇಡದವರನ್ನು ಬಿಟ್ಟು ಹೊಸಬರನ್ನು ತೆಗೆದುಕೊಳ್ಳಬಹುದು.

ಫ‌ಲಿತಾಂಶ ಜಾಸ್ತಿ: ಗುತ್ತಿಗೆ ಆಧಾರದಲ್ಲಿ ನೇಮಕ ಮಾಡಿಕೊಂಡಾಗ, ಕೆಲಸಗಾರರಿಗೆ ಗುರಿ ನೀಡಲಾಗಿರುತ್ತದೆ. ಆದ್ದರಿಂದ ಕಂಪನಿಗಳಿಗೆ ಫ‌ಲಿತಾಂಶ ಜಾಸ್ತಿ ಸಿಗುತ್ತದೆ. ಸಂಬಳದ ಸೋರಿಕೆಯೂ ಕಡಿಮೆ.

ಐಟಿಗೆ ವಿತ್ತ ವಲಯದಿಂದಲೂ ಸೇರ್ಪಡೆ
ಕಳೆದ ಕೆಲವು ವಾರಗಳಿಂದ ಸಿಬ್ಬಂದಿ ನೇಮಕ ಸಂಸ್ಥೆಗಳು ಒಂದು ವಿಶಿಷ್ಟ ಸಂಗತಿ ಗಮನಿಸಿವೆ. ಐಟಿ ಸಂಸ್ಥೆಗಳಿಗೆ ಬ್ಯಾಂಕ್‌, ಆರ್ಥಿಕ ಸೇವೆಗಳು, ವಿಮಾ ತಜ್ಞರು ಹೆಚ್ಚಿನ ಪ್ರಮಾಣದಲ್ಲಿ ಉದ್ಯೋಗಿಗಳಾಗಿ ಸೇರಿಕೊಳ್ಳುತ್ತಿದ್ದಾರೆ. ಇದಕ್ಕೆ ಕಾರಣವೇನೆಂದರೆ ವಿತ್ತ ಆಧಾರಿತ ಸಂಸ್ಥೆಗಳು, ವಿಮಾ ಕಂಪನಿಗಳು, ಮ್ಯೂಚ್ಯುವಲ್‌ ಫ‌ಂಡ್‌ಗಳು, ಬ್ಯಾಂಕ್‌ಗಳು ತಮ್ಮ ವ್ಯವಸ್ಥೆಯನ್ನು ಸಂಪೂರ್ಣ ಡಿಜಿಟಲೀಕರಣ ಮಾಡಲು, ಬಲಿಷ್ಠ ಮಾಡಲು ಹೊರಟಿವೆ. ಆಗ ತಜ್ಞರ ನೆರವು ಬೇಕಾಗುವುದರಿಂದ ಈ ರೀತಿಯ ಬದಲಾವಣೆಯಾಗಿದೆ.

ಯಾವ್ಯಾವ ಉದ್ಯೋಗಗಳಿಗೆ ಬೇಡಿಕೆ?
ಎಲ್ಲ ಕಡೆ ಕಂಪ್ಯೂಟರೀಕೃತ ವ್ಯವಸ್ಥೆ, ಆನ್‌ಲೈನ್‌ ಸೇವೆಗಳು, ಅದಕ್ಕೆ ಪೂರಕವಾದ ಇತರೆ ವ್ಯವಸ್ಥೆಗಳಿಗೆ ಗರಿಷ್ಠ ಆದ್ಯತೆ ಶುರುವಾಗಿದೆ. ಆದ್ದರಿಂದ ಈಗ ಮಾಹಿತಿ ತಂತ್ರಜ್ಞಾನಾಧಾರಿತ ಉದ್ಯೋಗಗಳಿಗೆ ಬೇಡಿಕೆಯಿದೆ. ಅವು ಹೀಗಿವೆ…

? ಡಿಜಿಟಲ್‌ ಪರಿವರ್ತನೆ ತಜ್ಞರು (ಟ್ರಾನ್ಸ್‌ಫಾರ್ಮೇಶನ್‌ ಎಕ್ಸ್‌ಪರ್ಟ್ಸ್)
? ಮಾಹಿತಿ ವಿಜ್ಞಾನಿಗಳು (ಡಾಟಾ ಸೈಂಟಿಸ್ಟ್ಸ್) ಮತ್ತು ಸಂಖ್ಯಾತಜ್ಞರು (ಸ್ಟಾಟಿಸ್ಟಿಶಿಯನ್ಸ್‌)
? ಮಾಹಿತಿ ತಂತ್ರಜ್ಞಾನ ಭದ್ರತೆ (ಐಟಿ ಸೆಕ್ಯುರಿಟಿ) ಮತ್ತು ನೆಟ್‌ವರ್ಕ್‌ ವಿನ್ಯಾಸಕರು (ಆರ್ಕಿಟೆಕ್ಟ್ಸ್)
? ಕ್ಲೌಡ್‌, ಉದ್ದಿಮೆ ಬುದಿಟಛಿಮತ್ತೆ (ಬ್ಯುಸಿನೆಸ್‌ ಇಂಟೆಲಿಜೆನ್ಸ್‌), ಕೃತಕ ಬುದಿಟಛಿಮತ್ತೆ (ಆರ್ಟಿಫಿಶಿಯಲ್‌ ಇಂಟೆಲಿಜೆನ್ಸ್‌)
? ತಂತ್ರಾಂಶ ತಯಾರಕರು (ಸಾಫ್ಟ್ವೇರ್‌ ಡೆವಲಪರ್ಸ್‌)

ತಾತ್ಕಾಲಿಕ ಉದ್ಯೋಗಿಗಳ ಸಂಖ್ಯೆ 7 ಲಕ್ಷಕ್ಕೇರಿಕೆ?
ದೇಶದಲ್ಲಿರುವ 40 ಲಕ್ಷ ಮಾಹಿತಿ ತಂತ್ರಜ್ಞಾನ ಉದ್ಯೋಗಿಗಳ ಪೈಕಿ 5 ಲಕ್ಷ ಮಂದಿ ಗುತ್ತಿಗೆ ಆಧಾರದ ಕೆಲಸ ಹೊಂದಿದ್ದಾರೆ (2018ರ ಮಾಹಿತಿ).
2021ರ ಹೊತ್ತಿಗೆ ಈ ಪ್ರಮಾಣ ಶೇ.13ರಷ್ಟು ಏರಿ, ತಾತ್ಕಾಲಿಕ ಉದ್ಯೋಗಿಗಳ ಸಂಖ್ಯೆ 7.2 ಲಕ್ಷಕ್ಕೇರುವ ನಿರೀಕ್ಷೆಯಿದೆ ಎಂದು ಭಾರತ ಸಿಬ್ಬಂದಿ ಒಕ್ಕೂಟ (ಇಂಡಿಯನ್‌ ಸ್ಟಾಫಿಂಗ್‌ ಫೆಡರೇಶನ್‌) ತಿಳಿಸಿದೆ.

377 ಶೇ. ದೂರದಿಂದಲೇ ಕೆಲಸ ಮಾಡುವ ಅವಕಾಶಗಳಿಗಾಗಿ, ಫೆಬ್ರವರಿಯಿಂದ ಮೇವರೆಗೆ ಹುಡುಕಾಡಿದವರ ಪ್ರಮಾಣ.
168 ಶೇ. ಫೆಬ್ರವರಿಯಿಂದ ಮೇ ಅವಧಿಯಲ್ಲಿ,ಮನೆಯಿಂದಲೇ ಕೆಲಸ ಮಾಡುವ ವ್ಯಕ್ತಿಗಳನ್ನು ಕಂಪನಿಗಳು ಆಯ್ದುಕೊಂಡ ಪ್ರಮಾಣ.

ಟಾಪ್ ನ್ಯೂಸ್

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Bengaluru: ಚಿನ್ನದಂಗಡಿಯಲ್ಲಿ 3 ಕೆಜಿ ಚಿನ್ನ ದೋಚಿದ ಮಹಿಳೆ

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

Expensive wedding: ಭಾರತದ ಅದ್ಧೂರಿ ಮದುವೆ ಮೇಲೆ ಈಗ ಐಟಿ ಕಣ್ಣು!

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

T20 Asia Cup: ಬಾಂಗ್ಲಾ ವಿರುದ್ದ ಅಂಡರ್‌ 19 ವನಿತಾ ಏಷ್ಯಾಕಪ್‌ ಚಾಂಪಿಯನ್‌ ಆದ ಭಾರತ

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BBK11: ವೀಕ್ಷಕರಿಗೆ ಸರ್ಪ್ರೈಸ್;‌ ಮತ್ತೆ‌ ಬಿಗ್ ಬಾಸ್‌ಗೆ ಗೋಲ್ಡ್‌ ಸುರೇಶ್

BGT 2024: Team India faces injury problems ahead of Melbourne match

BGT 2024: ಮೆಲ್ಬೋರ್ನ್‌ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್‌ ಸಿಇಒ ಸುಂದರ್‌ ಪಿಚೈ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ

2-

ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

ಕೊಡುವುದರಿಂದ ಕೊರತೆಯಾಗದು!

ಕೊಡುವುದರಿಂದ ಕೊರತೆಯಾಗದು!

Stories: ಹಾಡಿನಂಥ ಕಾಡುವಂಥ ಕಥೆಗಳು

Stories: ಹಾಡಿನಂಥ ಕಾಡುವಂಥ ಕಥೆಗಳು

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Pushpa-2: ಸಂಕ್ರಾಂತಿಗೆ ಓಟಿಟಿಗೆ ಬರುತ್ತಾ ʼಪುಷ್ಪ-2ʼ?: ಸ್ಪಷ್ಟನೆ ನೀಡಿದ ನಿರ್ಮಾಣ ಸಂಸ್ಥೆ

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

Tragic: ಗಂಡನ ಮೇಲೆ ಅನುಮಾನ: ಹೆಂಡತಿ ನೇಣಿಗೆ ಶರಣು

4

Bengaluru: ಹಫ್ತಾ ನೀಡಲು ವ್ಯಾಪಾರಿಗೆ ಜೈಲಿನಿಂದಲೇ ಧಮ್ಕಿ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.