ಮಾರುಕಟ್ಟೆಗೆ ಲಗ್ಗೆಯಿಟ್ಟ ಕಿಯಾ-ಸೆಲ್ಟೊಸ್ ಕಾರು
Team Udayavani, Aug 24, 2019, 3:04 AM IST
ಬೆಂಗಳೂರು: ಅತ್ಯಾಧುನಿಕ ತಂತ್ರಜ್ಞಾನ, ಹೊಸ ವಿನ್ಯಾಸ ಮತ್ತು ಆಕರ್ಷಕ ಒಳಾಂಗಣ ವಿನ್ಯಾಸ ಹೊಂದಿರುವ ಕಿಯಾ ಮೋಟರ್ ಸಂಸ್ಥೆಯ ಕಿಯಾ-ಸೆಲ್ಟೊಸ್ ಕಾರುಗಳನ್ನು ಶುಕ್ರವಾರ ಮಾರುಕಟ್ಟೆಗೆ ಪರಿಚಯಿಸಲಾಯಿತು.
ನಗರದ ಖಾಸಗಿ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಿಯಾ ಮೋಟಾರ್ (ಭಾರತ)ನ ವ್ಯವಸ್ಥಾಪಕ ನಿರ್ದೇಶಕ ಕೂಖ್ಯೂಂ ಶಿಮ್ ಮತ್ತು ಮಾರುಕಟ್ಟೆ ವಿಭಾಗದ ಉಪಾಧ್ಯಕ್ಷ ಮನೋಹರ್ ಭಟ್ ಮೊದಲಾದ ಅಧಿಕಾರಿಗಳು ಕಿಯಾ-ಸೆಲ್ಟೊಸ್ ಕಾರನ್ನು ಮಾರುಕಟ್ಟೆಗೆ ಪರಿಚಯಿಸಿದರು.
ಶಕ್ತಿಶಾಲಿ ಎಂಜಿನ್, ಅತ್ಯುತ್ತಮ ಕಾರ್ಯ ಕ್ಷಮತೆ, ಅತ್ಯಾಕರ್ಷಕ ವಿನ್ಯಾಸ ಹಾಗೂ ಗುಣ ಮಟ್ಟದ ಕಿಯಾ-ಸೆಲ್ಟೊಸ್ ಕಾರುಗಳು ಪೆಟ್ರೋಲ್, ಟರ್ಬೋ-ಪೆಟ್ರೋಲ್, ಡೀಸೆಲ್ ವಿಭಾಗದಲ್ಲಿ ಲಭ್ಯವಿದೆ. ಕಿಯೊ-ಸೆಲ್ಟೊಸ್ ನಾರ್ಮಲ್, ಇಕೋ ಹಾಗೂ ನ್ಪೋರ್ಟ್ ಹೀಗೆ ಮೂರು ಮಾದರಿಯಲ್ಲಿ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ.
ಜಿಟಿ ಲೈನ್ ಹಾಗೂ ಟೆಕ್ ಲೈನ್ ಎಂಬ ಎರಡು ವಿನ್ಯಾಸದಲ್ಲಿ ಕಾರುಗಳು ಮಾರುಕಟ್ಟೆಗೆ ಬಂದಿದೆ. ಬಿಳಿ, ಸ್ಟೀಲ್ ಸಿಲ್ವರ್, ಗ್ರಾವಿಟಿ ಗ್ರೇ, ಇಂಟೆ ಞಲಿಜೆನ್ಸಿ ಬ್ಲೂ ಸಹಿತವಾಗಿ ಎಂಟು ಬಣ್ಣಗಳಲ್ಲಿ ಕಾರು ಗ್ರಾಹಕರಿಗೆ ಸಿದ್ಧವಾಗಿದೆ. ಹಾಗೆಯೇ 5 ವಿಶ್ರಿತ ಬಣ್ಣಗಳಲ್ಲೂ ಸಿಗಲಿದೆ.
ಎಲ್‌ಇಡಿ ಹೆಡ್‌ಲೈಟ್, ಎಲೆಕ್ಟ್ರಿಕ್ ಸನ್‌ಫ್ರೂಫ್ ಒವರ್ ಹೆಡ್ ಜತೆಗೆ ಏರೀ ಕ್ಯಾಬಿನ್ ಹೊಂದಿದೆ. ಕಾರಿನ ಒಳ ವಿನ್ಯಾಸ ಕೂಡ ಅತ್ಯಾ ಕರ್ಷವಾಗಿದ್ದು, ಅಗಲವಾದ ಸ್ಥಳವಕಾಶವಿದ್ದು, ಡ್ರೈವರ್ ಮತ್ತು ಮುಂಭಾಗದ ಸೀಟುಗಳು ಸುಲಭವಾಗಿ ಅಡ್ಜೆಸ್ಟ್ ಮಾಡಿಕೊಳ್ಳಬಹು ದಾಗಿದೆ. ಈ ಕಾರಿನ ಇನ್ನೊಂದು ವಿಶೇಷತೆ ಯೆಂದರೆ, ಕಾರಿನ ಒಳಗೆ ಗಾಳಿ ಶುದ್ಧೀಕರಿಸುವ ವ್ಯವಸ್ಥೆ ( ಏರ್ ಪುರೀಪೈಯರ್)ಇದೆ.
ಯುವಿಒ ಮೊಬೈಲ್ ಆ್ಯಪ್ ಮೂಲಕ 37 ವಿಶೇಷ ಆಯ್ಕೆಗಳನ್ನು ಪಡೆಯಬಹುದಾಗಿದೆ. ಅಲ್ಲದೆ, ಇದು ಮೂರು ವರ್ಷಗಳವರೆಗೂ ಉಚಿತವಾಗಿ ಸಿಗಲಿದೆ. ಭದ್ರತೆ, ಸುರಕ್ಷತೆ ಹಾಗೂ ಜಾಗರೂಕತೆಗೆ ಇದು ಸಹಕಾರಿ ಯಾಗಲಿದೆ. ಕಾರಿನ ಒಳಗೆ 10.285 ಎಚ್‌ಡಿ ಟಚ್ ಸ್ಕ್ರೀನ್ ಇದೆ. ಪಾರ್ಕಿಂಗ್ ಮಾಡಲು ಅನುಕೂಲವಾಗುವಂತೆ ಬಿವಿಎಂ ಒಳಗೊಂಡಿರುವ ಕ್ಯಾಮರ ಅಳವಡಿಸಲಾಗಿದೆ.
ಕಿಯಾ ಸೊಲ್ಟೆಸ್ ಟೆಕ್‌ಲೈನ್ ಮಾದರಿಯ ಡೀಸೆಲ್ ಕಾರುಗಳು 9.99 ಲಕ್ಷ ರೂ.ಗಳಿಂದ 13.79 ಲಕ್ಷದ ವರೆಗೂ, ಪೆಟ್ರೋಲ್ ಕಾರುಗಳು 9.69 ಲಕ್ಷ ರೂ.ಗಳಿಂದ 13.79 ಲಕ್ಷ ರೂ. ಎಕ್ಸ್ ಶೋರೂಂ ದರ ಹೊಂದಿದೆ. ಹಾಗೆಯೇ ಜಿಟಿ ಲೈನ್ ಮಾದರಿಯ ಪೆಟ್ರೋಲ್ ಕಾರುಗಳು 13.49 ಲಕ್ಷ ರೂ.ಗಳಿಂದ 15.99 ಲಕ್ಷ ರೂ. ಎಕ್ಸ್ ಶೋ ರೂಂ ದರ ಹೊಂದಿದೆ. ಆನ್‌ಲೈನ್‌ನಲ್ಲಿ ಬುಕ್ಕಿಂಗ್ ವ್ಯವಸ್ಥೆ ಇದ್ದು, ಈಗಾಗಲೇ 32035 ಕಾರು ಬುಕ್ ಆಗಿದೆ.
ಕಾರಿನಲ್ಲಿ ಗ್ರಾಹಕರ ಭದ್ರತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಆರು ಏರ್ ಬ್ಯಾಗ್‌ಗಳು ಇದರಲ್ಲಿದೆ. ಚಾಲಕರಿಗೆ ಅಗತ್ಯವಿರುವ ಎಲ್ಲ ರೀತಿಯ ಸುರಕ್ಷತಾ ಸಾಧನಗಳನ್ನು ಅಳವಡಿಸಲಾಗಿದೆ. ನಾಲ್ಕು ಚಕ್ರಕ್ಕೂ ಡಿಸ್ಕ್ ಬ್ರೇಕ್ ಸೇರಿ ಗ್ರಾಹಕರಿಗೆ ಬೇಕಾದ ಸಂಪೂರ್ಣ ಸುರಕ್ಷತೆ ಕಿಯಾ-ಸೆಲ್ಟೊಸ್‌ನಲ್ಲಿದೆ.
-ಮನೋಹರ್ ಭಟ್, ಉಪಾಧ್ಯಕ್ಷ, ಮಾರುಕಟ್ಟೆ ವಿಭಾಗ
ಸಂಸ್ಥೆಯ ಕಾರು ತಯಾರಿಕ ಘಟಕವು ಆಂಧ್ರ ಪ್ರದೇಶದ ಅನಂತಪುರ ಜಿಲ್ಲೆಯಲ್ಲಿದ್ದು, ವರ್ಷಕ್ಕೆ 3 ಲಕ್ಷ ಕಾರುಗಳನ್ನು ತಯಾರಿಸುವ ಸಾಮರ್ಥ್ಯ ಹೊಂದಿದ್ದೇವೆ. ಗ್ರಾಹಕರಿಗೆ ಯಾವುದೇ ರೀತಿಯ ವಿಳಂಬ ಇಲ್ಲದೆ ಸೂಕ್ತ ಸಮಯದಲ್ಲಿ ಕಾರು ಒದಗಿಸುತ್ತೇವೆ.
-ಕೂಖ್ಯೂಂ ಶಿಮ್, ವ್ಯವಸ್ಥಾಪಕ ನಿರ್ದೇಶಕ, ಕಿಯಾ ಮೋಟಾರ್ (ಭಾರತ)
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Bidar: ಕಾರಂಜಾ ಸಂತ್ರಸ್ತರ ಸಮಸ್ಯೆ ಅಧ್ಯಯನಕ್ಕೆ ತಾಂತ್ರಿಕ ಸಮಿತಿ ರಚನೆ: ಸಿಎಂ ಸಿದ್ದರಾಮಯ್ಯ
Davanagere; ಉಸ್ತುವಾರಿ ಸಚಿವರ ಬದಲಾವಣೆಗೆ ಸಿಎಂಗೆ ಪತ್ರ ಬರೆದ ಚನ್ನಗಿರಿ ಕಾಂಗ್ರೆಸ್ ಶಾಸಕ
BSY: ಬಿಎಸ್‌ವೈ ತಪ್ಪೊಪ್ಪಿಕೊಂಡಿರುವುದಾಗಿ ಸಂತ್ರಸ್ತೆ ಹೇಳಿಕೆ ದಾಖಲು: ಎಸ್‌ಪಿಪಿ
Belagavi Session: ವಕ್ಫ್ ಅಧಿಸೂಚನೆ ಹಿಂಪಡೆಯಲ್ಲ, ಪರಿಹಾರಕ್ಕೆ ಸಮಿತಿ: ಸಿಎಂ ಭರವಸೆ
Over Remarks: ʼಸಿದ್ದರಾಮೋತ್ಸವʼ ಮಾಡಿಸುವ ನೀವು ‘ಅಂಬೇಡ್ಕರ್ ಉತ್ಸವ’ ಮಾಡಲ್ಲ: ಬಿಜೆಪಿ
MUST WATCH
ಹೊಸ ಸೇರ್ಪಡೆ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Shirva: ಹೊಂಡ ಗುಂಡಿ, ಧೂಳುಮಯ ಕೋಡು-ಪಂಜಿಮಾರು ರಸ್ತೆ
BBK11: ಮಂಜು ಅವರದ್ದು ಚೀಪ್ ಮೆಂಟಲಿಟಿ ಎಂದ ರಜತ್; ಭವ್ಯ – ಮೋಕ್ಷಿತಾ ವಾಗ್ವಾದ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.