ಡೆಬಿಟ್/ ಕ್ರೆಡಿಟ್‌ ಕಾರ್ಡ್‌ ಸೆ.30ರಿಂದ ಜಾರಿಯಾಗಲಿದೆ ಹೊಸ ನಿಯಮಗಳು


Team Udayavani, Sep 22, 2020, 6:00 AM IST

ಡೆಬಿಟ್/ ಕ್ರೆಡಿಟ್‌ ಕಾರ್ಡ್‌ ಸೆ.30ರಿಂದ ಜಾರಿಯಾಗಲಿದೆ ಹೊಸ ನಿಯಮಗಳು

ಸಾಂದರ್ಭಿಕ ಚಿತ್ರ

ಮಣಿಪಾಲ: ಡೆಬಿಟ್‌ /ಕ್ರೆಡಿಟ್‌ ಕಾರ್ಡ್‌ ಬಳಕೆಗೆ ಸಂಬಂಧಪಟ್ಟಂತೆ ರಿಸರ್ವ್‌ ಬ್ಯಾಂಕ್‌ ಆಫ್ ಇಂಡಿಯಾ (ಆರ್‌ಬಿಐ) ಸೆಪ್ಟಂಬರ್‌ 30ರಿಂದ ಈ ಹೊಸ ನಿಯಮ ಗಳು ಜಾರಿ ಮಾಡಲಿದೆ. ಅಂತಾ ರಾಷ್ಟ್ರೀಯ ವ್ಯವಹಾರ, ಕಾರ್ಡ್‌ ರಹಿತ ವ್ಯವಹಾರ, ಆನ್‌ಲೈನ್‌ ವ್ಯವಹಾರಗಳಿಗೆ ಸಂಬಂಧಿ ಸಿದ ನಿಯಮಗಳನ್ನು ಬದಲಾವಣೆ ಮಾಡಿದ್ದು, ಕೆಲವೊಂದು ಮಾರ್ಪಾಡುಗಳನ್ನು ಮಾಡಿದೆ.

ಆದ್ಯತೆಯ ಮೆರೆಗೆ ಸೌಲಭ್ಯ
ಈ ಹೊಸ ನಿಯಮಗಳ ಪ್ರಕಾರ ಗ್ರಾಹಕರು ತಮ್ಮಗೆ ಅಗತ್ಯವಿರುವ ಸೇವೆಗೆ ಅರ್ಜಿ ಸಲ್ಲಿಸಬೇಕಾಗಿದ್ದು, ತಮ್ಮ ಆದ್ಯತೆಗೆ ಒಳಗೊಂಡಂತೆ ಸೌಲಭ್ಯಗಳನ್ನು ಪಡೆದುಕೊಳ್ಳಬಹುದಾಗಿದೆ. ಅರ್ಜಿ ಯಲ್ಲಿ ಗ್ರಾಹಕರು ಆಯ್ಕೆ ಮಾಡಿ ಕೊಂಡ ಸೇವೆಗಳನ್ನು ಮಾತ್ರ ಬ್ಯಾಂಕ್‌ಗಳು ನೀಡಲಿದ್ದು, ಅಂತಾರಾಷ್ಟ್ರೀಯ ವಹಿವಾಟುಗಳು, ಆನ್‌ಲೈನ್‌ ವಹಿವಾಟು ಗಳ ಅಗತ್ಯತೆ ಇದೆ ಎಂದಾದರೆ ಅಂತಹ ಸೇವೆಗಳಿಗೆ ಪ್ರತ್ಯೇಕ ಅರ್ಜಿ ಸಲ್ಲಿಸಬೇಕಾಗುತ್ತದೆ.

ದೇಶೀಯ ಆದ್ಯತೆ
ಡೆಬಿಟ್‌ ಕಾರ್ಡ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ ವಹಿವಾಟು ನಡೆಸುವಾಗ ಗ್ರಾಹಕರು ದೇಶೀಯ ವಹಿವಾಟಿಗೆ ಆದ್ಯತೆ ನೀಡಬೇಕು ಎಂದು ಆರ್‌ಬಿಐ ತಿಳಿಸಿದ್ದು, ತಮ್ಮಗೆ ಅಗತ್ಯವಿದ್ದರೆ ಮಾತ್ರ ವಿದೇಶಿ ವ್ಯವಹಾರಗಳು ಹಾಗೂ ಪಿಒಎಸ್‌ ಟರ್ಮಿನಲ್‌ನ ಮೂಲಕ ನಡೆಸಲಾಗುವ ವಹಿವಾಟುಗಳ ಸೌಲಭ್ಯವನ್ನು ಪಡೆಯುವಂತೆ ಸೂಚಿಸಿದೆ.

ಡೆಬಿಟ್‌ ಕಾರ್ಡ್‌ ಬಳಕೆದಾರರೇ ಹೆಚ್ಚು
ದೇಶದಲ್ಲಿ 82.94 ಕೋಟಿ ಡೆಬಿಟ್‌ ಕಾರ್ಡ್‌ ಮತ್ತು 4.6 ಕೋಟಿ ಕ್ರೆಡಿಟ್‌ ಕಾರ್ಡ್‌ಗಳು ಬಳಕೆ ಯಾಗುತ್ತಿವೆ. ಈ ಎಲ್ಲ ಕಾರ್ಡ್‌ಗಳಿಗೂ ಹೊಸ ನಿಯಮ ಅನ್ವಯ ವಾಗಲಿದೆ. ಇತ್ತೀಚೆಗೆ ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಗಳ ಮೂಲಕ ನಡೆಯುವ ವಹಿವಾಟಿನ ಪ್ರಮಾಣ, ಮೌಲ್ಯ ಹೆಚ್ಚಾಗಿದೆ.

ಗ್ರಾಹಕರೇ ಆಯ್ಕೆ ಮಾಡಿಕೊಳ್ಳಬಹುದು
ಕಾರ್ಡ್‌ಗಳನ್ನು ಸಕ್ರಿಯಗೊಳಿಸುವ, ಸ್ಥಗಿತಗೊಳಿಸುವ, ಅಂತಾರಾಷ್ಟ್ರೀಯ ವಹಿವಾಟು, ಪಿಓಎಸ್‌, ಎಟಿಎಂ, ಆನ್‌ಲೈನ್‌, ಚಿಪ್‌ ಕಾರ್ಡ್‌ ವಹಿವಾಟುಗಳನ್ನು ನಿರ್ಧರಿಸುವ ಅವಕಾಶ ಗ್ರಾಹಕರಿಗೆ ದೊರೆಯಲಿದೆ. ಡಿಜಿಟಲ್‌ ವಹಿವಾಟಿನ ಭದ್ರತೆ ಹೆಚ್ಚಿಸಲು ನೆರವಾಗುವ ದೃಷ್ಟಿಯಲ್ಲಿ ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ ಗಳನ್ನು ಅಗತ್ಯಕ್ಕೆ ಅನುಗುಣವಾಗಿ ಸಕ್ರಿಯ ಮತ್ತು ಸ್ಥಗಿತ ಮಾಡುವ ಅವಕಾಶವನ್ನು ಗ್ರಾಹಕರಿಗೆ ನೀಡಲಾಗಿದೆ.

ವ್ಯವಹಾರದ ಮಿತಿ ಬದಲಾವಣೆ

ಹೊಸ ನಿಯಮಗಳನ್ನು ಅನುಸರಿಸಿ ಗ್ರಾಹಕರು ತಾವೇ ಸ್ವತ: ವಹಿವಾಟಿನ ಮಿತಿಯನ್ನು ಸಹ ಬದಲಾಯಿಸಲು ಅನುವು ಮಾಡಿಕೊಡಲಾಗಿದೆ. ಮೊಬೈಲ್‌ ಅಪ್ಲಿಕೇಶನ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಎಟಿಎಂ ಯಂತ್ರ ಮತ್ತು ಐವಿಆರ್‌ ಮೂಲಕ ಕಾರ್ಡ್‌ನ ಮಿತಿಯನ್ನು ಬದಲಾಯಿಸಬಹುದು. ಇದರೊಂದಿಗೆ ಗ್ರಾಹಕರಿಗೆ ತಮ್ಮ ಎಟಿಎಂ ಕಾರ್ಡ್‌ ವಹಿವಾಟುವಿನ ಮಿತಿಯನ್ನು ನಿರ್ಧಾರಿಸುವ ಸೌಲಭ್ಯವನ್ನು ನೀಡಲಾಗಿದ್ದು, ಮೊಬೈಲ್‌ ಅಪ್ಲಿಕೇಷನ್‌, ಇಂಟರ್‌ನೆಟ್‌ ಬ್ಯಾಂಕಿಂಗ್‌, ಎಟಿಎಂಗಳು, ಐವಿಆರ್‌ ಅಥವ ಇಂಟರಾಕ್ಟೀವ್‌ ವಾಯ್ಸ ರೆಸ್ಪಾ®Õ… ಮೊದಲಾದವುಗಳನ್ನು ನಿವಾರಿಸಲು 24×7 ಸಹಾಯವಾಣಿ ದೊರೆಯಲಿದೆ. ಕಾರ್ಡ್‌ನಲ್ಲಿ ಯಾವುದಾದರೂ ಬದಲಾವಣೆಗಳಾದರೆ ಬಳಕೆದಾರರಿಗೆ ಎಸ್‌ಎಂಎಸ್‌, ಇ-ಮೇಲ್‌ ಮೂಲಕ ಮಾಹಿತಿ ದೊರೆಯಲಿದೆ.

ಲಾಕ್‌ಡೌನ್‌ ವೇಳೆ ಕ್ರೆಡಿಟ್‌ ಕಾರ್ಡ್‌ ಬಳಕೆ ಕುಂಠಿತ
ಡೆಬಿಟ್‌ ಮತ್ತು ಕ್ರೆಡಿಟ್‌ ಕಾರ್ಡ್‌ಗಳ ಬಳಕೆ ಕುರಿತು ಆರ್‌ಬಿಐ ಮಾಹಿತಿಯ ಹಂಚಿಕೊಂಡಿದ್ದು, ಈ ವರ್ಷದ ಜೂನ್‌ ತಿಂಗಳಲ್ಲಿ ದೇಶದ ಜನರು ಕ್ರೆಡಿಟ್‌ ಕಾರ್ಡ್‌ಗಳ ಮೂಲಕ 42,818 ಕೋಟಿ ರೂ. ಮೌಲ್ಯದ ವಸ್ತಗಳನ್ನು ಖರೀದಿಸಿ ದ್ದಾರೆ. ಆದರೆ ಜನವರಿಯಲ್ಲಿ ಇದರ ಪ್ರಮಾಣ ಹೆಚ್ಚಿದ್ದು, ಕ್ರೆಡಿಟ್‌ ಕಾರ್ಡ್‌ ಮೂಲಕ 67,000 ಕೋಟಿ ರೂ.ಗಳಷ್ಟು ಮೌಲ್ಯದ ವಸ್ತುಗಳನ್ನು ಜನರು ಖರೀದಿಸಿದ್ದರು.

ಟಾಪ್ ನ್ಯೂಸ್

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

Missing: 3 ದಿನದಿಂದ ಕೆಪಿಸಿ ಭದ್ರತಾ ಸಿಬ್ಬಂದಿ ನಾಪತ್ತೆ… ಮಾಣಿ ಡ್ಯಾಂ ಬಳಿ ಬೈಕ್ ಪತ್ತೆ

ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

Excise: ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಆರೋಪ: ನ.20ರಂದು ರಾಜ್ಯದಲ್ಲಿ ಮದ್ಯ ಮಾರಾಟ ಬಂದ್‌

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

DGP: ಮಹಾರಾಷ್ಟ್ರದ ನೂತನ ಡಿಜಿಪಿ ಆಗಿ ಐಪಿಎಸ್ ಅಧಿಕಾರಿ ಸಂಜಯ್ ವರ್ಮಾ ನೇಮಕ

12

Gadaga: ನರಿ-ನಾಯಿ, ತೋಳ-ನಾಯಿ ಮಿಶ್ರ ತಳಿ ಪತ್ತೆ!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Americ ಚುನಾವಣೆ ಎಫೆಕ್ಟ್:‌ ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ

US elections ಎಫೆಕ್ಟ್:‌ ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ

UPI: ದೇಶದಲ್ಲಿ ಯುಪಿಐ ವಿಕ್ರಮ ಅಕ್ಟೋಬರ್‌ನಲ್ಲಿ ದಾಖಲೆ

UPI: ದೇಶದಲ್ಲಿ ಯುಪಿಐ ವಿಕ್ರಮ ಅಕ್ಟೋಬರ್‌ನಲ್ಲಿ ದಾಖಲೆ

1-a-google-MPa

Google;ಗೂಗಲ್‌ ಮ್ಯಾಪ್‌ ಜತೆ ಮಾತಾಡುತ್ತಾ ಡ್ರೈವ್‌ ಮಾಡಬಹುದು

Google

Russian Court; ಗೂಗಲ್‌ಗೆ 20 ಡೆಸಿಲಿಯನ್‌ ದಂಡ

sens-2

Deepavali; ಮುಹೂರ್ತ ಟ್ರೇಡಿಂಗ್‌ನಲ್ಲಿ 448 ಅಂಕ ಏರಿದ ಸೆನ್ಸೆಕ್ಸ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

8

Mangaluru: ರಾತ್ರಿ ಪ್ರಿಪೇಯ್ಡ್  ಆಟೋ ಇಲ್ಲದೆ ಪ್ರಯಾಣಿಕರ ಪರದಾಟ

13

Kanguva: 10 ಸಾವಿರಕ್ಕೂ ಹೆಚ್ಚಿನ ಸ್ಕ್ರೀನ್‌ನಲ್ಲಿ ಅದ್ಧೂರಿಯಾಗಿ ರಿಲೀಸ್‌ ಆಗಲಿದೆ ʼಕಂಗುವʼ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Bypolls: ಯಡಿಯೂರಪ್ಪರನ್ನು ರಾಜಕೀಯವಾಗಿ ಮುಗಿಸಲು ಬೊಮ್ಮಾಯಿ ಪ್ಲ್ಯಾನ್:‌ ಸಿದ್ದರಾಮಯ್ಯ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Shirola: ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕೊರತೆ… ರೋಗಿಗಳ ಪರದಾಟ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.