Record; 73 ಸಾವಿರ ಗಡಿ ದಾಟಿದ ಷೇರುಪೇಟೆ:ದಾಖಲೆಯ ಸಂಭ್ರಮ
Team Udayavani, Jan 16, 2024, 12:47 AM IST
ಮುಂಬಯಿ: ಸೋಮವಾರ ಮುಂಬಯಿ ಷೇರುಪೇಟೆಯಲ್ಲಿ ದಾಖಲೆಯ ಸಂಭ್ರಮ. ಬಿಎಸ್‌ಇ ಸೆನ್ಸೆಕ್ಸ್ ಇದೇ ಮೊದಲ ಬಾರಿಗೆ 73 ಸಾವಿರದ ಗಡಿ ದಾಟಿದರೆ ನಿಫ್ಟಿ 22 ಸಾವಿರದ ಗಡಿ ದಾಟಿ ಸಾರ್ವಕಾಲಿಕ ದಾಖಲೆ ಬರೆದಿದೆ.
ಐಟಿ ಷೇರುಗಳು, ರಿಲಯನ್ಸ್, ಎಚ್‌ಡಿಎಫ್ಸಿ ಬ್ಯಾಂಕುಗಳ ಷೇರುಗಳ ಖರೀದಿಯಲ್ಲಿ ಹೂಡಿಕೆದಾರರು ಭಾರೀ ಆಸಕ್ತಿ ವಹಿಸಿದ ಪರಿಣಾಮವಾಗಿ ಮುಂಬಯಿ ಷೇರುಪೇಟೆ ಸಂವೇದಿ ಸೂಚ್ಯಂಕ 759.49 ಅಂಕಗಳ ಏರಿಕೆ ಕಂಡು ದಿನಾಂತ್ಯಕ್ಕೆ 73,327.94ಕ್ಕೆ ತಲುಪುವ ಮೂಲಕ ಸಾರ್ವಕಾಲಿಕ ದಾಖಲೆ ಬರೆಯಿತು. ವಹಿವಾಟಿನ ಮಧ್ಯೆ 833.71 ಅಂಕಗಳಷ್ಟು ಏರಿಕೆಯಾಗಿ, 73,402.16ಕ್ಕೆ ತಲುಪುವ ಮೂಲಕ ಮಧ್ಯಾಂತರದಲ್ಲೂ ಸಾರ್ವಕಾಲಿಕ ದಾಖಲೆ ನಿರ್ಮಿಸಿ ಅನಂತರ ಕೆಳಗಿಳಿಯಿತು. ಇನ್ನು, ನಿಫ್ಟಿ 202.90 ಅಂಕಗಳಷ್ಟು ಏರಿಕೆಯಾಗಿ, ದಿನಾಂತ್ಯಕ್ಕೆ 22,097.45ಕ್ಕೆ ವಹಿವಾಟು ಅಂತ್ಯಗೊಳಿಸಿತು.
9.68 ಲಕ್ಷ ಕೋ.ರೂ. ಲಾಭ
5 ದಿನಗಳಲ್ಲಿ ಸೆನ್ಸೆಕ್ಸ್ 1,972.72 ಅಂಕಗಳಷ್ಟು ಏರಿಕೆ ಕಂಡಿದೆ. ಇದರಿಂದ ಬಿಎಸ್‌ಇಯಲ್ಲಿ ಲಿಸ್ಟ್ ಆಗಿರುವ ಕಂಪೆನಿಗಳ ಒಟ್ಟು ಮಾರುಕಟ್ಟೆ ಮೌಲ್ಯ 376 ಲಕ್ಷ ಕೋಟಿ ರೂ.ಗೆ ಏರಿದೆ. ಪರಿಣಾಮವಾಗಿ 5 ದಿನಗಳಲ್ಲಿ ಷೇರುಪೇಟೆ ಹೂಡಿಕೆದಾರರ ಸಂಪತ್ತು 9.68 ಲಕ್ಷ ಕೋಟಿ ರೂ.ಗಳಷ್ಟು ಹೆಚ್ಚಳವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.