ಸ್ಥಿರ ಠೇವಣಿಯ ಪ್ರಯೋಜನಗಳ ಬಗ್ಗೆ ನಿಮಗೆ ಎಷ್ಟು ಮಾಹಿತಿ ಇದೆ..?
Team Udayavani, Jul 4, 2021, 8:20 PM IST
ನವ ದೆಹಲಿ : ಆದಾಯ ತೆರಿಗೆಯನ್ನು ಉಳಿಸಲು ಹಲವಾರು ಆಯ್ಕೆಗಳಿವೆ. ತೆರಿಗೆಯನ್ನು ಉಳಿಸಲು ಸ್ಥಿರ ಠೇವಣಿ ಕೂಡ ಉತ್ತಮ ಆಯ್ಕೆಯಾಗಿದೆ.
ಸ್ಥಿರ ಠೇವಣಿಗಳಲ್ಲಿ ತೆರಿಗೆ ಉಳಿತಾಯ ಪ್ರಯೋಜನಗಳು ಈಗ ಲಭ್ಯವಿದೆ. 5 ವರ್ಷಗಳವರೆಗೆ ಎಫ್ ಡಿ(ಫಿಕ್ಸಡ್ ಡೆಪಾಸಿಟ್) ಯಲ್ಲಿ ಆದಾಯ ತೆರಿಗೆ ವಿನಾಯಿತಿ ಲಭ್ಯವಿದೆ.
ಆದಾಗ್ಯೂ, ಎಲ್ಲಾ ಸ್ಥಿರ ಠೇವಣಿಗಳಲ್ಲಿ ಈ ಪ್ರಯೋಜನವು ಲಭ್ಯವಿಲ್ಲ. ಠೇವಣಿ ಮೊತ್ತದ ಜೊತೆಗೆ ಅದಕ್ಕೆ ಪಾವತಿಸಲಾಗುವ ಬಡ್ಡಿಗೂ ತೆರಿಗೆ ಇರದಿರುವುದು ವಿಶೇಷ.
ಇದನ್ನೂ ಓದಿ : ಶೃಂಗೇರಿ ಅಪ್ರಾಪ್ತೆ ಮೇಲೆ 42 ಕೀಚಕರಿಂದ ಅತ್ಯಾಚಾರ ಪ್ರಕರಣ:30 ಚಾರ್ಜ್‌ಶೀಟ್ ಸಲ್ಲಿಕೆ
ಎಫ್ ಡಿ ವಿರುದ್ಧ ಸಾಲದ ಸೌಲಭ್ಯವೂ ಲಭ್ಯವಿದೆ. ಇದರ ಮತ್ತೊಂದು ಮುಖ್ಯ ವಿಷಯವೆಂದರೆ ನಿಮ್ಮ ಅನುಕೂಲಕ್ಕೆ ಅನುಗುಣವಾಗಿ ಸಾಲವನ್ನು ಮರುಪಾವತಿಸಬಹುದು. ಎಫ್ ಡಿಯ ಒಟ್ಟು ಮೌಲ್ಯದ ಶೇಕಡಾ 90 ವರೆಗೆ ಸಾಲವನ್ನು ಪಡೆಯಬಹುದಾಗಿದೆ.
ಎಫ್‌ಡಿ ಮೇಲಿನ ಸಾಲದ ಬಡ್ಡಿದರವು ನಿಮ್ಮ ಹೂಡಿಕೆಯ ಮೇಲೆ ನೀವು ಪಡೆಯುವ ಬಡ್ಡಿಗಿಂತ ಶೇಕಡಾ 1-2 ಹೆಚ್ಚಾಗಿದೆ. ಇದರರ್ಥ ನೀವು ಎಫ್‌ಡಿ ಮೇಲೆ ಶೇಕಡಾ 4 ಬಡ್ಡಿಯನ್ನು ಪಡೆಯುತ್ತಿದ್ದರೆ, ನೀವು ಪಡೆಯುವ ಸಾಲಕ್ಕೆ ಶೇಕಡಾ 5- 6 ಬಡ್ಡಿ ಪಾವತಿಸಬೇಕಾಗಬಹುದಾಗಿದೆ.
ಎಫ್ ಡಿಗಳೊಂದಿಗೆ ಲಿಕ್ವಿಡಿಟಿ ಸಹ ಬರುತ್ತದೆ. ಅಗತ್ಯವಿದ್ದರೆ, ನೀವು ಮುಕ್ತಾಯಗೊಳ್ಳುವ ಮೊದಲೇ ಹಿಂತೆಗೆದುಕೊಳ್ಳಬಹುದು. ಆದಾಗ್ಯೂ, ಹಾಗೆ ಮಾಡಲು ಬ್ಯಾಂಕ್ ನಿಮಗೆ ಕೆಲವು ಶುಲ್ಕಗಳನ್ನು ವಿಧಿಸಬಹುದು.
ಎಚ್ ಡಿ ಎಫ್ ಸಿ ಬ್ಯಾಂಕ್, ಐಸಿಐಸಿಐ ಬ್ಯಾಂಕ್ ಮತ್ತು ಡಿಸಿಬಿ ಬ್ಯಾಂಕ್ ಗ್ರಾಹಕರಿಗೆ ಸ್ಥಿರ ಠೇವಣಿಯೊಂದಿಗೆ ವಿಮೆಯನ್ನು ನೀಡುತ್ತಿವೆ. ಈ ಬ್ಯಾಂಕುಗಳಲ್ಲಿ ಎಫ್‌ಡಿ ಜೊತೆಗೆ ಆರೋಗ್ಯ ವಿಮೆಯೂ ಕೂಡ ಲಭ್ಯವಿದೆ.
ಇದನ್ನೂ ಓದಿ : ಮದುವೆಯಿಂದ ಬಾಂಧವ್ಯ ಕೊನೆಗೊಳ್ಳುವ ಭೀತಿ : ಮನನೊಂದ ಅವಳಿ ಸಹೋದರಿಯರು ಆತ್ಮಹತ್ಯೆಗೆ ಶರಣು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ
By Election: ನಿಖಿಲ್ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್; ಕುತೂಹಲದತ್ತ ಚನ್ನಪಟ್ಟಣ
Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು
Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!
Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.