ಎಸ್‌ಬಿಐ ಹೆಸರಲ್ಲಿ ಯಾವುದೇ ಲಕ್ಕಿ ಡ್ರಾ ಇಲ್ಲ
Team Udayavani, Sep 29, 2020, 6:06 AM IST
ಸಾಂದರ್ಭಿಕ ಚಿತ್ರ
ಹೊಸದಿಲ್ಲಿ: “ನೀವು ಲಕ್ಕಿ ಡ್ರಾದಲ್ಲಿ ಜಯ ಗಳಿಸಿದ್ದೀರಿ’ ಎಂಬ ಸಂದೇಶವನ್ನು ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್‌ಬಿಐ) ಹೆಸರಿನಲ್ಲಿ ವ್ಯಾಟ್ಸ್ ಆ್ಯಪ್ ಮೂಲಕ ಕಳುಹಿಸುವ ಅಥವಾ ಕರೆ ಮಾಡಿ ತಿಳಿಸುವ ಜಾಲವೊಂದು ಸಕ್ರಿಯವಾಗಿದೆ. ಇಂಥ ಸಂದೇಶಗಳ ಬಗ್ಗೆ ಗ್ರಾಹಕರು ಎಚ್ಚರಿಕೆಯಿಂದ ಇರಬೇಕು ಎಂದು ಎಸ್‌ಬಿಐ ಸೋಮವಾರ ಹೇಳಿದೆ.
ವಂಚಕರು ಗ್ರಾಹಕರ ವಾಟ್ಸ್‌ಆ್ಯಪ್‌ಗೆ ಕರೆ ಮಾಡಿ ಬ್ಯಾಂಕ್ ವತಿಯಿಂದ ಲಕ್ಕಿ ಡ್ರಾ ನಡೆದು ಬಹುಮಾನ ಬಂದಿದೆ ಎಂದು ಮಾಹಿತಿ ನೀಡಿ ವಂಚಿಸುವ ಸಾಧ್ಯತೆ ಇದೆ. ಬ್ಯಾಂಕ್ ವತಿ ಯಿಂದ ಸದ್ಯ ಯಾವುದೇ ರೀತಿಯ ಲಾಟರಿ ಅಥವಾ ಲಕ್ಕಿ ಡ್ರಾ ಯೋಜನೆಯೇ ಇಲ್ಲ ಎಂದು ಬ್ಯಾಂಕ್ ಟ್ವೀಟ್ ಮಾಡಿದೆ.
ಇ-ಮೇಲ್, ಎಸ್‌ಎಂಎಸ್, ಫೋನ್, ವಾಟ್ಸ್ ಆ್ಯಪ್ ಮೂಲಕ ಗ್ರಾಹಕರ ಬ್ಯಾಂಕ್ ಖಾತೆ ಮತ್ತು ಇತರ ವೈಯಕ್ತಿಕ ವಿವರಗಳನ್ನು ನಾವು ಕೇಳುವು ದಿಲ್ಲ. ಹೀಗಾಗಿ, ಗ್ರಾಹಕರು ವಂಚಕರ ಮಾತು ಗಳಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದೆ. ಇತ್ತೀಚೆಗಷ್ಟೇ ಪುಣೆಯಲ್ಲಿ ಎಸ್‌ಬಿಐ ಗ್ರಾಹಕರೊಬ್ಬರಿಗೆ ಇದೇ ಮಾದರಿಯಲ್ಲಿ ಮರುಳು ಮಾಡಿ 2.2 ಲಕ್ಷ ರೂ. ಲಪಟಾಯಿಸಲಾಗಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.