ಈತ ದೇಶದ ಪ್ರಸಿದ್ಧ ಬಿಲಿಯಾಧಿಪತಿಗಳಿಗಿಂತಲೂ ಶ್ರೀಮಂತ; ಯಾರೀತ ?
Team Udayavani, Mar 22, 2017, 5:23 PM IST
ಹೊಸದಿಲ್ಲಿ : 2017ರ ಫೋರ್‌ಬ್ಸ್ ಬಿಲಿಯಾಧಿಪತಿಗಳ ಪಟ್ಟಿಗೆ ಸೇರಿದ ಮುಂಬಯಿಯ ಹಿರಿಯ ಹೂಡಿಕೆದಾರ ರಾಧಾಕಿಷನ್ ದಮಾನಿ ಅವರು ಅನಿಲ್ ಅಂಬಾನಿ, ಅಜಯ್ ಪಿರಮಲ್, ರಾಹುಲ್ ಬಜಾಜ್ ಮತ್ತು ಅನಿಲ್ ಅಗ್ರವಾಲ್‌ಸೇರಿದಂತೆ ಹಲವು ಪ್ರಸಿದ್ಧ ಭಾರತೀಯ ಬಿಲಿಯಾಧಿಪತಿಗಳಿಗಿಂತಲೂ ಶ್ರೀಮಂತ ವ್ಯಕ್ತಿ ಎಂಬುದು ಹೆಚ್ಚಿನವರಿಗೆ ಗೊತ್ತಿಲ್ಲ.
ಯಾವತ್ತೂ ಶ್ವೇತವರ್ಣದ ಉಡುಗೆಗಳಲ್ಲಿ ಕಾಣಿಸಿಕೊಳ್ಳುವ ದಮಾನಿ ಮಿತಭಾಷಿ, ಮಾಧ್ಯಮದಿಂದ ಸದಾ ದೂರ, ಕಾರ್ಯಕ್ರಮಗಳಲ್ಲಿ ಕಾಣಿಸಿಕೊಳ್ಳುವುದು ತೀರ ಅಪರೂಪ. ಡಿ ಮಾರ್ಟ್ ಕಂಪೆನಿಯ ಒಡೆಯರಾಗಿರುವ ದಮಾನಿ, ವಾರದ ಹಿಂದಷ್ಟೇ ತಮ್ಮ ಕಂಪೆನಿಯ ಐಪಿಓ (ಸಾರ್ವಜನಿಕ ಶೇರು ನೀಡಿಕೆ) ನಡೆಸಿದ್ದರು. ಇದು ಶೇ.104ರ ಅಭೂತಪೂರ್ವ ಮತ್ತು ಅಮೋಘ ಲಿಸ್ಟಿಂಗ್ ಲಾಭವನ್ನು ಶೇರುದಾರರಿಗೆ ಒದಗಿಸಿಕೊಟ್ಟಿರುವುದು ಶೇರು ಮಾರುಕಟ್ಟೆಯಲ್ಲಿ ಭಾರೀ ದೊಡ್ಡ ಸಂಗತಿ ಎನಿಸಿತು.
ರಾಧಾಕಿಷನ್ ದಮಾನಿ ಅವರ ಬಗ್ಗೆ ಹೆಚ್ಚು ಜನರಿಗೆ ಗೊತ್ತಿಲ್ಲದ ಕೆಲವು ವಿಷಯಗಳು ಇಂತಿವೆ :
* ಫೋರ್‌ಬ್ಸ್ ಲೆಕ್ಕ ಹಾಕಿರುವ ಪ್ರಕಾರ ದಮಾನಿ ಅವರ ಕುಟುಂಬದ ನಿವ್ವಳ ಆಸ್ತಿ ಮೌಲ್ಯ 2.3 ಬಿಲಿಯ ಡಾಲರ್
* ದಮಾನಿ ಅವರು ಡಿ-ಮಾರ್ಟ್ ಸೂಪರ್‌ಮಾರ್ಕೆಟ್ ಚೇನ್‌ನ ಒಡೆಯರು.
* ಡಿ-ಮಾರ್ಟ್ ಕಂಪೆನಿಯ ಮಾರುಕಟ್ಟೆ ಬಂಡವಾಳ ಮೌಲ್ಯ ಬಿಎಸ್‌ಇಯಲ್ಲಿ 36,758 ಕೋಟಿ ರೂ.ಗೆ ಏರಿದೆ.
* ದಮಾನಿ ಅವರು ಭಾರತದ ಪ್ರಖ್ಯಾತ ಬಿಲಿಯಾಧಿಪತಿ ಹೂಡಿಕೆದಾರ ರಾಕೇಶ್ ಝಂಝನ್‌ವಾಲಾ ಅವರ ಮಾರ್ಗದರ್ಶಕರು.
* ವಿಎಸ್‌ಟಿ ಇಂಡಸ್ಟ್ರೀಸ್, ಇಂಡಿಯಾ ಸಿಮೆಂಟ್ಸ್, ಜಿಲೆಟ್, ಕ್ರೈಸಿಲ್, 3ಎಂ ಇಂಡಿಯಾ, ರ್ಯಾಡಿಸನ್ ಬ್ಲೂ ರಿಸಾರ್ಟ್, ಬ್ಲೂ ಡಾರ್ಟ್ ಎಕ್ಸ್‌ಪ್ರೆಸ್ ಮುಂತಾದ ಕಂಪೆನಿಗಳಲ್ಲಿ ದಮಾನಿ ಅವರ ದೊಡ್ಡ ಮಟ್ಟದ ಹೂಡಿಕೆ ಇದೆ.
* ದಮಾನಿ ಅವರು ಮಿಸ್ಟರ್ ವೈಟ್ ಆ್ಯಂಡ್ ವೈಟ್ ಎಂದೇ ಕರೆಯಲ್ಪಡುವುದು ಅವರು ಸದಾ ತೊಡುವ ಶ್ವೇತವರ್ಣದ ಉಡುಗೆ-ತೊಡುಗೆಗಳಿಂದಾಗಿ.
*ದಮಾನಿ ಅವರ ಕುಟುಂಬದ ಉದ್ಯಮ ಬಾಲ್ ಬ್ಯಾರಿಂಗ್ ಉತ್ಪಾದನೆ. 1980ರಲ್ಲಿ ತಂದೆಯ ನಿಧನಾನಂತರ ಇವರು ಒಲ್ಲದ ಮನಸ್ಸಿನಿಂದ ಶೇರ್ ಬ್ರೋಕರ್ ಮತ್ತು ಟ್ರೇಡರ್ ಆದರು. ಆದರೆ ಅತೀ ಶೀಘ್ರದಲ್ಲೇ ಅವರು ದೇಶದ ಶೇರು ಮಾರುಕಟ್ಟೆಗಳಲ್ಲಿ ಓರ್ವ ಅತ್ಯುತ್ತಮ ಮೌಲ್ಯದ ಹೂಡಿಕೆದಾರರು ಎನಿಸಿಕೊಂಡರು.
* ದಮಾನಿ ಅವರು ಬಿಕಾಂ ಮೊದಲನೇ ವರ್ಷದ ಶಿಕ್ಷಣದ ಬಳಿಕ ಕಾಲೇಜಿನಿಂದ ಡ್ರಾಪ್ ಔಟ್ ಆದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ಹೊಸ ಸೇರ್ಪಡೆ
Naxal Activity Calm: ಪಶ್ಚಿಮ ಘಟ್ಟದ ಕಾನನದಲ್ಲಿ ನಕ್ಸಲ್ ನಿಶ್ಶಬ್ದ
Language Development: ಕನ್ನಡ ಕೆಲಸಕ್ಕೆ ಅಭಿವೃದ್ಧಿ ಪ್ರಾಧಿಕಾರದಲ್ಲಿ ಹಣವೇ ಇಲ್ಲ!
Sullia: ಮಗುವಿಗೆ ಸುಟ್ಟು ಗಾಯ ಮಾಡಿದ್ದ ತಾಯಿ; ಆರೋಪ ಸಾಬೀತು; ಶಿಕ್ಷೆ ಪ್ರಕಟ
Naxals Surrender: ಶರಣಾದ ನಕ್ಸಲರ ಪ್ರಕರಣಗಳಿಗೆ ತ್ವರಿತ ನ್ಯಾಯಾಲಯ: ಸಿಎಂ ಸಿದ್ದರಾಮಯ್ಯ
Dinner Politics: ಊಟ, ಅಜೆಂಡಾ ನಮ್ಮದು, ಬೇರೆಯವರಿಗೆ ಆತಂಕ ಏಕೆ?: ಸತೀಶ್ ಜಾರಕಿಹೊಳಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.