ಟಿಕ್ ಟಾಕ್ ರೆಸ್ಯೂಮ್ ನೀಡುತ್ತಿದೆ ಉದ್ಯೋಗವಕಾಶ..! ಏನಿದು..? ಮಾಹಿತಿ ಇಲ್ಲಿದೆ
Team Udayavani, Jul 14, 2021, 2:31 PM IST
ನವ ದೆಹಲಿ : ಯುವ ಜನಾಂಗದವರನ್ನು ಒಂದು ರೀತಿಯಲ್ಲಿ ವ್ಯಸನಕ್ಕೆ ಸಿಲುಕಿಸಿದ ಜನಪ್ರಿಯ ಟಿಕ್ ಟಾಕದ ಭಾರತದಲ್ಲಿ ರದ್ದಾಗಿದ್ದರೂ ಕೂಡ ವಿದೇಶಗಳಲ್ಲಿ ಟಿಕ್ ಟಾಕ್ ಬಳಕೆ ಇನ್ನೂ ಇದೆ. ಟಿಕ್ ಟಾಕ್ ನನ್ನು ಇನ್ನೂ ಹಲವರು ವಿದೇಶಗಳಲ್ಲಿ ಬಳಸುತ್ತಿದ್ದಾರೆ.
ಸದ್ಯ ಜನಪ್ರಿಯ ಟಿಕ್ ಟಾಕ್ ತನ್ನ ಬಳಕೆದಾರರನ್ನು ಸೆಳೆಯುವ ಉದ್ದೇಶದಿಂದ ಇತ್ತೀಚೆಗೆ ಟಿಕ್ ಟಾಕ್ ಪೈಲಟ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ. ಯುಎಸ್ ಮೂಲದ ಉದ್ಯೋಗಾಕಾಂಕ್ಷಿಗಳಿಗೆ ಮತ್ತು ಡಬ್ಲ್ಯುಡಬ್ಲ್ಯುಇ ಸೂಪರ್ ಸ್ಟಾರ್ ನಿಂದ ಹಿಡಿದು ಹಿರಿಯ ಡೇಟಾ ಎಂಜಿನಿಯರ್ ಅಥವಾ ಟಿಕ್ ಟಾಕ್ ಸೃಜನಶೀಲಾ ನಿರ್ಮಾಪಕರವರೆಗೆ ಉದ್ಯೋಗವಕಾಶವನ್ನು ನೀಡಲಿದೆ.
ಇದನ್ನೂ ಓದಿ : ಮೈಸೂರು : ಲಾಕ್ ಡೌನ್ ತೆರವು ಬಳಿಕ ಕ್ರೈಂ ರೇಟ್ ಜಾಸ್ತಿಯಾಗುತ್ತಿದೆ : ಬೊಮ್ಮಾಯಿ
ಆದರೇ, ಇದಕ್ಕಾಗಿ ವಿಡಿಯೋ ರೆಸ್ಯೂಮ್ ಸಲ್ಲಿಸಬೇಕಕು ಎಂದು ಟಿಕ್ ಟಾಕ್ ಸಂಸ್ಥೆ ಮಾಹಿತಿ ನೀಡಿದೆ.
ಇದೊಂದು ಟಿಕ್ ಟಾಕ್ ರೆಸ್ಯೂಮ್ ಕಾರ್ಯಕ್ರಮವಾಗಿದೆ. ಚಿಪಾಟ್ಲ್ ಮೆಕ್ಸಿಕನ್ ಗ್ರಿಲ್ ಮತ್ತು ಟಾರ್ಗೆಟ್ ಕಾರ್ಪ್ ಸೇರಿದಂತೆ ಅನೇಕ ಕಂಪನಿಗಳು ಈ ವಿಡಿಯೋ ರೆಸ್ಯೂಮ್ ನನ್ನು ಸ್ವೀಕರಿಸುತ್ತಿವೆ. ಜುಲೈ 7 ರಿಂದ ಪ್ರಾರಂಭವಾಗಿ ಜುಲೈ 31ರವರೆಗೆ ರೆಸ್ಯೂಮ್ ಸಲ್ಲಿಸಲು ಅವಕಾಶವನ್ನು ನೀಡಲಾಗಿದೆ.
ಇನ್ನು, ಈ ಬಗ್ಗೆ ಬ್ಲಾಗ್ ಪೋಸ್ಟ್ ನಲ್ಲಿ, ಝೆನ್ ಝೆಡ್ ಮತ್ತು ಮಿಲೇನಿಯಲ್ಸ್ ಟಿಕ್ ಟಾಕ್ ಪ್ಲಾಟ್ ಫಾರ್ಮ್ ಮೂಲಕ ತನ್ನ ಬಳಕೆದಾರರಿಗೆ ಅನುಭವಿ ಮಟ್ಟದ ಮತ್ತು ಪ್ರವೇಶ ಮಟ್ಟದ ಉದ್ಯೋಗಕ್ಕಾಗಿ ಅರ್ಜಿ ಸಲ್ಲಿಸುವ ಅವಕಾಶ ನೀಡುತ್ತಿದೆ ಎಂದು ತಿಳಿಸಿದೆ.
ಸಾಮಾಜಿಕ ಜಾಲ ತಾಣಗಳಲ್ಲಿ ಬಾರಿ ಪ್ರಮಾಣದಲ್ಲಿ ಟ್ರೆಂಡ್ ಸೆಟ್ಟಿಂಗ್ ಡ್ಯಾನ್ಸ್ ವಿಡೀಯೋಗಳಿಗೆ ಪ್ರಸಿದ್ಧಿಯನ್ನು ಪಡೆದ ಟಿಕ್ ಟಾಕ್ #CareerTok ಅಡಿಯಲ್ಲಿ ವೃತ್ತಿ ಜೀವನ ಮತ್ತು ಉದ್ಯೋಗವನ್ನು ಸೃಷ್ಟಿಸಿಕೊಳ್ಳುವ ಅವಕಾಶ ಒದಗಿಸುತ್ತಿದೆ.
ಡೇಟಿಂಗ್ ಅಪ್ಲಿಕೇಶನ್ ಜಂಬಲ್ ಇಂಕ್ ಮತ್ತು ಫೇಸ್ ಬುಕ್ ಸೇರಿದಂತೆ ಕಂಪನಿಗಳು ಬಳಕೆದಾರರಿಗೆ ಉದ್ಯೋಗ ಹುಡುಕುವ ಅವಕಾಶ ಮಾಡಿಕೊಟ್ಟಿದೆ ಎನ್ನುವುದು ವಿಶೇಷ.
ಇದನ್ನೂ ಓದಿ : ಬೆಳಗಾವಿಯಲ್ಲಿ ಕೂಡಲೇ ವಿಧಾನಮಂಡಲ ಅಧಿವೇಶನ ಕರೆಯುವಂತೆ ಸರ್ಕಾರಕ್ಕೆ ಸಿದ್ದು ಒತ್ತಾಯ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಿಲಯನ್ಸ್‌ನಿಂದ ‘ರಸ್‌ಕಿಕ್’ ಎನರ್ಜಿ ಡ್ರಿಂಕ್ ಬಿಡುಗಡೆ
Table Space: ಟೇಬಲ್ ಸ್ಪೇಸ್ ಸ್ಥಾಪಕ ಅಮಿತ್ ಬ್ಯಾನರ್ಜಿ ಹೃದಯಾಘಾತದಿಂದ ನಿಧನ
Stock Market: HMPV ಎಫೆಕ್ಟ್ – ಷೇರುಪೇಟೆ ಸೆನ್ಸೆ*ಕ್ಸ್ 1,000ಕ್ಕೂ ಅಧಿಕ ಅಂಕ ಕುಸಿತ!
2024ರಲ್ಲಿ ಆಟೋ ಮೊಬೈಲ್ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ
Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.