ಬ್ಯಾಂಕಿಂಗ್ ವಂಚನೆ : ತನ್ನ ಗ್ರಾಹಕರನ್ನು ಮತ್ತೆ ಎಚ್ಚರಿಸಿದ ಎಸ್ ಬಿ ಐ
Team Udayavani, Jul 7, 2021, 9:21 PM IST
ನವ ದೆಹಲಿ : ಇತ್ತೀಚೆಗಿನ ದಿನಗಳಲ್ಲಿ ಬ್ಯಾಂಕಿಂಗ್ ವಂಚನೆಗಳು ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮತ್ತೆ ದೇಶದ ಅತಿ ದೊಡ್ಡ ನಾಗರಿಕ ಬ್ಯಾಂಕ್ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಅಥವಾ ಎಸ್ ಬಿ ಐ ಮತ್ತೆ ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ನೀಡಿದೆ.
ಗ್ರಾಹಕರಿಂದ ನಿರಂತರವಾಗಿ ಬ್ಯಾಂಕಿಂಗ್ ವಂಚನೆಗಳ ಬಗ್ಗೆ ದೂರುಗಳು ಬರುತ್ತಿರುವ ಹಿನ್ನೆಲೆಯಲ್ಲಿ ಎಸ್ ಬಿ ಐ ಮತ್ತೆ ತನ್ನ ಗ್ರಾಹಕರಿಗೆ ಎಚ್ಚರಿಕೆಯನ್ನು ಹೇಳಿದೆ.
ನಿಮ್ಮ ಒಂದು ಸಣ್ಣ ತಪ್ಪು ನಿಮ್ಮನ್ನು ದೊಡ್ಡ ನಷ್ಟಕ್ಕೆ ತಳ್ಳಬಹುದು. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ನನ್ನು ಕೆಲವೇ ಸೆಕೆಂಡುಗಳಲ್ಲಿ ಖಾಲಿಯಾಗಿಸುವ ಸೈಬರ್ ವಂಚಕರ ಜಾಲ ಹೆಚ್ಚಳವಾಗುತ್ತಿದ್ದು. ಇಂತಹ ಪ್ರಕರಣಗಳ ದೃಷ್ಟಿಯಿಂದ, ವಂಚಕರನ್ನು ತಪ್ಪಿಸಲು ಎಸ್ ಬಿಐ ತನ್ನ ಗ್ರಾಹಕರಿಗೆ ಅನೇಕ ಪ್ರಮುಖ ಸಲಹೆಗಳನ್ನು ನೀಡಿದೆ.
ಇದನ್ನೂ ಓದಿ : ಮಾಜಿ ಸಂಸದ ಜಿ.ಮಾದೇಗೌಡರ ಆರೋಗ್ಯ ವಿಚಾರಿಸಿದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ
ಇನ್ನು, ಗ್ರಾಹಕರೊಬ್ಬರು ಬ್ಯಾಂಕನ್ನು ಟ್ಯಾಗ್ ಮಾಡಿ ಸೋಷಿಯಲ್ ಮೀಡಿಯಾದಲ್ಲಿ ಈ ಬಗ್ಗೆ ದೂರು ನೀಡಿದ್ದಾರೆ. ಈ ಗ್ರಾಹಕರು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದೊಂದಿಗೆ ನಕಲಿ ಸಂದೇಶಗಳನ್ನು ಟ್ಯಾಗ್@TheOfficialSBI ಮತ್ತು @Cybercellindia. ಮಾಡುವ ಮೂಲಕ ವಿವರವಾಗಿ ಹೇಳಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿನ ದೂರುಗಳಿಗೆ ಸಂಬಂಧಪಟ್ಟ ಹಾಗೆ ಪ್ರತಿಕ್ರಿಯಿಸಿದ ಎಸ್ ಬಿ ಐ, ಯಾವುದೇ ಇಮೇಲ್, ಎಸ್‌ಎಂಎಸ್, ಕರೆ ಅಥವಾ ಎಂಬೆಡೆಡ್ ಲಿಂಕ್ ಅನ್ನು ಗ್ರಾಹಕರು ನಿರ್ಲಕ್ಷಿಸಬೇಕು ಎಂದು ಬ್ಯಾಂಕ್ ಹೇಳಿದೆ. ಸೈಬರ್ ಖದೀಮರ ಬಗ್ಗೆ ಗ್ರಾಹಕರು ಎಚ್ಚರದಿಂದಿರಬೇಕು. ಬ್ಯಾಂಕಿಗೆ ಸಂಬಂಧಿಸಿದ ನಿಮ್ಮ ವೈಯಕ್ತಿಕ ಮಾಹಿತಿಯನ್ನು ಯಾರೊಂದಿಗೂ ಹಂಚಿಕೊಳ್ಳಬೇಡಿ. ಅಂತಹ ವೈಯಕ್ತಿಕ ಮಾಹಿತಿಯನ್ನು ಬ್ಯಾಂಕ್ ಎಂದಿಗೂ ಫೋನ್ ನಲ್ಲಿ ಕೇಳುವುದಿಲ್ಲ. ನಿಮ್ಮ ಖಾತೆಯ ಮೇಲಿನ ನಿಮ್ಮ ಬೇಜವಾಬ್ದಾರಿತನ ನಿಮ್ಮ ಖಾತೆಯಲ್ಲಿನ ಪೂರ್ತಿ ಹಣ ಖಾಲಿಯಾಗುವಂತೆ ಮಾಡಬಹುದು ಎಂದು ಬ್ಯಾಂಕ್ ಎಚ್ಚರಿಸಿದೆ.
ಇದನ್ನೂ ಓದಿ : ಕರ್ನಾಟಕದಿಂದ ಗೋವಾಕ್ಕೆ ಕೆ.ಎಸ್.ಆರ್.ಟಿ.ಸಿ ಬಸ್ ನಲ್ಲಿ ಬರುವವರ ಸಂಖ್ಯೆ ಇಳಿಮುಖ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Surat; ವಂಚಿಸಿ ಸಂಗ್ರಹಿಸಿಟ್ಟಿದ್ದ 6 ಲಕ್ಷ ಮೌಲ್ಯದ ಒಣಮೆಣಸಿನಕಾಯಿ ಪತ್ತೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.