ಟ್ರಾನ್ಸಿಟ್ ಒನ್ ಬಾಟಿಕ್ ಹೈವೇ ಮಾಲ್ : ಉದ್ಘಾಟನೆಗೆ ಸಿದ್ಧ
Team Udayavani, Jan 25, 2019, 10:52 AM IST
ಮಂಗಳೂರು : ಮಂಗಳೂರಿನ ಜನರಿಗೆ ಈ ಹೊಸ ವರ್ಷದ ಮುಂಬರುವ ತಿಂಗಳಲ್ಲಿ ಅನೇಕ ರೋಮಾಂಚನಗಳು ಕಾದಿವೆ. ರಾಷ್ಟ್ರೀಯ ಹೆದ್ದಾರಿ 66ರಲ್ಲಿನ ತೊಕ್ಕೊಟ್ಟು ವಿನಲ್ಲಿ ಸದ್ಯದಲ್ಲೇ ಆರಂಭಗೊಳ್ಳುವ ‘ಟೀಮ್ ಇಕೊಲಾಜಿಕ್ ಹ್ಯಾಬಿಟ್ಯಾಟ್ಸ್’ ನ ‘ಟ್ರಾನ್ಸಿಟ್ ಒನ್ ಬಾಟಿಕ್ ಹೈವೇ ಮಾಲ್’ ಮಂಗಳೂರು ಜನರ ಸಂಚಲನ ಉಂಟು ಮಾಡಲಿದೆ.
ಇಕೋಲಾಜಿಕ್ ಹ್ಯಾಬಿಟ್ಯಾಟ್ಸ್ ಪರಿಕಲ್ಪನೆ ಆರಂಭವಾದದ್ದು ಎರಡೂವರೆ ವರ್ಷಗಳ ಹಿಂದೆ. ಹೆದ್ದಾರಿಯಲ್ಲಿ ಸಾಗುವ ಜನರಿಗೆ ವಿಶ್ವ ದರ್ಜೆಯ ಬಾಟಿಕ್ ಶಾಪಿಂಗ್ ಅನುಭವವನ್ನು ಒದಗಿಸಬೇಕು ಎಂಬ ಚಿಂತನೆಗೆ ಅಂದೇ ಸದೃಢ ಯೋಜನೆಗಳು ರೂಪುಗೊಂಡವು; ಕಾಲಬದ್ಧ ಗುರಿಗಳು ನಿಗದಿಗೊಂಡವು.
ಆ ನಿಟ್ಟಿನಲ್ಲಿ ಹಾಲಿ ನಿರ್ಮಾಣ ರಂಗದಲ್ಲಿರುವ ಆಕರ್ಷಕ ವಿನ್ಯಾಸ ರೂಪಣೆ, ವ್ಯವಸ್ಥಿತ ಅನುಷ್ಠಾನ ಪ್ರಕ್ರಿಯೆಗಳೇ ನೆರವಿಗೆ ಬಂದವು. ಪ್ರಕೃತ ಬಾಟಿಕ್ ಹೈವೇ ಮಾಲ್ ನ ಇಂಟೀರಿಯರ್ ಕೆಲಸಗಳು ಬಹತೇಕ ಮುಗಿತಾಯದ ಹಂತಕ್ಕೆ ಬಂದಿವೆ. ಹಾಗೆಯೇ ಈ ಹೊಸ ವರ್ಷದ ಮುಂಬರುವ ತಿಂಗಳಲ್ಲಿ ಬಾಟಿಕ್ ಮಾಲ್ ಪೂರ್ಣ ಪ್ರಮಾಣದಲ್ಲಿ ಕಾರ್ಯಾರಂಭಿಸಲಿದೆ ಮತ್ತು ಎಪ್ರಿಲ್ ತಿಂಗಳಲ್ಲಿ ಉದ್ಘಾಟನೆಗೆ ಸಿದ್ಧವಾಗಲಿದೆ.
ಈ ಬಾಟಿಕ್ ಮಾಲ್ ನ ಅತ್ಯಾಕರ್ಷಕ ವಿನ್ಯಾಸ್ ಮತ್ತು ಗುಣಮಟ್ಟದ ಸಂರಚನೆಗಾಗಿ ಇಲ್ಲಿ ಪ್ರತಿಷ್ಠಿತ ಹಂಟರ್ ಡಗ್ಲಾಸ್ ಸೀಲಿಂಗ್‌ಗಳು, ಗ್ರೋಹೆ ಸ್ಯಾನಿಟರ್ ಉಪಕರಣಗಳು, ಶಿಂಡ್ಲರ್ ಲಿಫ್ಟ್ ಗಳು, ಪಾಂಜೇರಿ ಇಟಲಿಯ ಲೈಟ್ ಫಿಟ್ಟಿಂಗ್ ಗಳು ಮತ್ತು ಇತರ ಐರೋಪ್ಯ ಬ್ರಾಂಡ್ ಉತ್ಪನ್ನಗಳು ಗ್ರಾಹಕರಿಗೆ ದೊರಕಲಿವೆ.
ಮಾತ್ರವಲ್ಲದೆ ಕಾರ್ಟನ್ ಸ್ಟೀಲ್ ಹೊದಿಕೆ ಇರುವ ಬಾಹ್ಯ ಜಲೋಪಕರಣಗಳು, ಬಸಂತ್ ಬೇಟನ್ ನ ಬಾಹ್ಯ ಪೇವರ್ ಗಳು, ನೆಲ ಅಂತಸ್ತಿನ ಇಟಾಲಿಯನ್ ಮಾರ್ಬಲ್ ಇತ್ಯಾದಿ ಅತ್ಯುನ್ನತ ಮಟ್ಟದ ಉತ್ಪನ್ನಗಳನ್ನು ಬಳಸಲಾಗುತ್ತಿದೆ.
ಇಂದು ಬಹುತೇಕ ಎಲ್ಲ ಶಾಪ್ ಗಳ ಫ್ಲೋರಿಂಗ್, ಕಾಮನ್ ಏರಿಯಾ ಫ್ಲೋರಿಂಗ್, ಶಾಪ್ ನ ಎದುರು ಭಾಗದ ಗಾಜು, ಕಾರ್ಪೆಂಟರಿ, ಮೆಟ್ಟಲು ಸಂರಚನೆ, ಆ್ಯಟ್ರಿಯಂ ರೇಲಿಂಗ್ ಗಳು, ಸೆಪ್ಟಿಕ್ ಟ್ಯಾಂಕ್, ಪ್ಲಂಬಿಂಗ್ ಲೈನ್ ಗಳು, ಪ್ರೈಮರ್ ಪೇಂಟಿಂಗ್, ಬೆಂಕಿ ಮತ್ತು ಇತರ ಸುರಕ್ಷಾ ಕಾಮಗಾರಿಗಳು ಮುಗಿದಿವೆ.
ಪ್ಯಾಸೆಂಜರ್ ಮತ್ತು ಸರ್ವಿಸ್ ಇಲವೇಟರ್‌ಗಳು, ಎಸ್ಕಲೇಟರ್‌ಗಳು ಈಗಾಗಲೇ ಕಟ್ಟಡ ನಿರ್ಮಾಣ ತಾಣಕ್ಕೆ ಬಂದಿದ್ದು ಇವುಗಳನ್ನು ಅಳವಡಿಸುವ ಕಾರ್ಯ ಭರದಿಂದ ನಡೆಯುತ್ತಿದೆ. ಹೊರಗಿನ ಪ್ರಾಕೃತಿಕ ಸ್ವರೂಪ ರಚನೆ, ಪೇವಿಂಗ್ ಕೆಲಸ, ವಿದ್ಯುದೀಕರಣ ಮತ್ತು ಸಿಸಿಟಿವಿ ಭದ್ರತೆ ಹಾಗೂ ನೆಟ್ ವರ್ಕಿಂಗ್ ಸಿಸ್ಟಮ್ ಕೆಲಸಗಳು ಮತ್ತು ಎಚ್‌ವಿಎಸಿ ಡಕ್ಟಿಂಗ್ ಮತ್ತು ಪರೀಕ್ಷಾ ಕೆಲಸಗಳು ಭರದಿಂದ ಸಾಗುತ್ತಿವೆ. ಇದರ ಜತೆಗೆ ಫಿನಿಶಿಂಗ್ ಮತ್ತು ಟೆಸ್ಟಿಂಗ್ ಕಾಮಗಾರಿಗಳು ಕೂಡ ನಡೆಯುತ್ತಿದ್ದು ಮುಂದಿನ ಕೆಲವೇ ತಿಂಗಳಲ್ಲಿ ಬಾಟಿಕ್ ಮಾಲ್ ಸುಲಲಿತ ಕಾರ್ಯಾರಂಭ ಮಾಡಲಿದೆ.
ಇದೇ ವೇಳೆ ಇಕೋಲಾಜಿಕ್ ಹ್ಯಾಬಿಟ್ಯಾಟ್ಸ್, ದೇಶದ ನಿರ್ಮಾಣ ಕ್ಷೇತ್ರದಲ್ಲಿನ ಸುಪ್ರಸಿದ್ಧ ಸಲಹೆಗಾರರು ಮತ್ತು ವೃತ್ತಿಪರರಿಗೆ ಅತ್ಯುತ್ಕೃಷ್ಟ ಸಿದ್ಧ ಉತ್ಪನ್ನ ರೂಪಿಸುವ ನಿಟ್ಟಿನಲ್ಲಿ ಶ್ರೇಷ್ಠ ದರ್ಜೆಯ ತಾಂತ್ರಿಕತೆಯನ್ನು ಒದಗಿಸುವಂತೆ ಕೋರಲಾಗಿದೆ.
ಇದೇ ರಂಗದಲ್ಲಿ ಇತರ ಪ್ರಾಜೆಕ್ಟ್ ಗಳಿಗಿಂತ ಟ್ರಾನ್ಸಿಟ್ ಒನ್ ಯೋಜನೆಯನ್ನು ವಿಭಿನ್ನವೂ ವಿನೂತನವೂ ಆಗಿರಿಸುವಲ್ಲಿ ಅಭಿವೃದ್ದಿ, ಆರ್ ಆ್ಯಂಡ್ ಡಿ, ವಿನ್ಯಾಸ, ನಿರ್ಮಾಣ, ಬ್ರಾಂಡಿಂಗ್, ಉದ್ಯಮ ಅಭಿವೃದ್ಧಿ, ಮಾರ್ಕೆಟಿಂಗ್ ಮತ್ತು ಮಾರುಕಟ್ಟೆಯಲ್ಲಿ ಉನ್ನತ ಸ್ಥಾನಮಾನ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಅತ್ಯಂತ ಕೂಲಂಕಷ ಗಮನವನ್ನು ನೀಡಲಾಗಿದೆ.
ಇಕೋಲಾಜಿಕ್ ಹ್ಯಾಬಿಟ್ಯಾಟ್, ಮಾರುಕಟ್ಟೆಯಲ್ಲಿನ ತನ್ನ ಛಾಪನ್ನು ಕಾಣಿಸುವ ನಿಟ್ಟಿನಲ್ಲಿ ಮಾರುಕಟ್ಟೆ ಸಂಶೋಧನೆಗೆ ಮತ್ತು ಉತ್ಪನ್ನ ವಿನ್ಯಾಸಕ್ಕೆ ಅತ್ಯಧಿಕ ಮಹತ್ವ ನೀಡುತ್ತಿದೆ ಮತ್ತು ತನ್ನ ಗ್ರಾಹಕರ ಹೂಡಿಕೆಗೆ ವಿಶೇಷವಾದ ಘನತೆ ಗೌರವವನ್ನು ನೀಡುತ್ತಿದೆ.
ಇಕೊಲಾಜಿಕ್ ಹ್ಯಾಬಿಟ್ಯಾಟ್ ತನ್ನ ಗ್ರಾಹಕರ ಹೂಡಿಕೆಗೆ ಅತ್ಯುತ್ತಮ ಲಾಭ ದೊರಕಿಸುವಲ್ಲಿ ವಿನ್-ವಿನ್ ಡೀಲ್‌ಗೆ ಮಾನ್ಯತೆ ಮತ್ತು ಮಹತ್ವವನ್ನು ಸದಾ ನೀಡುತ್ತದೆ.
ಬಾಟಿಕ್ ಮಾಲ್ ನಲ್ಲೀಗ ಅಣಕು ಮಳಿಗೆಗೆಳು ಸಿದ್ಧವಾಗಿವೆ; ಬನ್ನಿ, ಟ್ರಾನ್ಸಿಟ್ ಪೂರ್ವನೋಟದ ಆಹ್ಲಾದಕರ ಅನುಭವವನ್ನು ಪಡೆಯಿರಿ.ಟ್ರಾನ್ಸಿಟ್ ಒನ್ ಪೂರ್ಣತೆಯತ್ತ ಸಾಗುತ್ತಿದೆ.
ನಿಮಗಿದೋ ಇಲ್ಲಿದೆ ಹೊಸ ವರ್ಷದ ರೋಮಾಂಚನ : ಇಂದೇ ನೀವು ನಿಮ್ಮ ಮಳಿಗೆಯ ಮಾಲಕರಾಗಿ; ಆರೇ ವರ್ಷಗಳಲ್ಲಿ ನಿಮ್ಮ ಹೂಡಿಕೆಯ ಅರ್ಧಾಂಶವನ್ನು ಮರಳಿ ಪಡೆಯಿರಿ.
ಅತ್ಯುತ್ತಮ ಮತ್ತು ಕ್ರಮಬದ್ದ ಬಾಡಿಗೆ ಆದಾಯ ಬಯಸುವ ಹೂಡಿಕೆದಾರರಿಗೆ ಟ್ರಾನ್ಸಿಟ್ ಒನ್ ಅತ್ಯಾಕರ್ಷಕ ಕೊಡುಗೆಗಳನ್ನು ನೀಡುತ್ತಿದೆ.
ನಿಗದಿತ ಅವಧಿಗೆ, ಆಯ್ದ ಮಳಿಗೆಗಳಿಗೆ ಶೇ.8ರ ವರೆಗಿನ ಖಚಿತ ಬಾಡಿಗೆ ಆದಾಯದ ಕೊಡುಗೆ ಇಲ್ಲಿದೆ.
ಶೇ.100 ಪಾವತಿಯ ಮೇಲೆ ಭಾರೀ ಡಿಸ್‌ಕೌಂಟ್ (ರಿಯಾಯಿತಿ) ಪಡೆಯಿರಿ.
ಹೂಡಿಕೆ ಮೌಲ್ಯ ವೃದ್ಧಿ, ಆರು ತಿಂಗಳ ಉಚಿತ ನಿರ್ವಹಣೆ; ಬೈ ಬ್ಯಾಕ್ ಕೊಡುಗೆಗಳು; ಸಾಲ ಸೌಲಭ್ಯ.
ಕಾಲ ಮಿಂಚಿ ಹೋಗುವ ಮುನ್ನ ಆದಷ್ಟು ಬೇಗನೆ ಈ ಅವಕಾಶಕ್ಕೆ ತ್ವರೆ ಮಾಡಿ; ಸ್ಟಾಕ್ ಮುಗಿಯುವ ವರೆಗ ಮಾತ್ರವೇ ಕೊಡುಗೆಗಳು ಇರುತ್ತವೆ.
ನಿಮ್ಮ ಎಲ್ಲ ರಿಯಲ್ ಎಸ್ಟೇಟ್ ಆವಶ್ಯಕತೆಗಳನ್ನು ನಿಮಗೆ ಬೇಕಾದ ರೀತಿಯಲ್ಲಿ ಪೂರೈಸಿಕೊಳ್ಳುವುದಕ್ಕೆ ಇರುವ ಈ ಅತ್ಯುತ್ತಮ ಕೊಡುಗೆಯನ್ನು ಆದಷ್ಟು ಬೇಗನೆ ಪಡೆಯುವುದಕ್ಕೆ ಈ ಕೆಳಗಿನ ವಿಳಾಸವನ್ನು ಸಂಪರ್ಕಿಸಿ :
‘ಟ್ರಾನ್ಸಿಟ್ ಒನ್ ಬಾಟಿಕ್ ಹೈವೇ ಮಾಲ್’, ತೊಕ್ಕೊಟ್ಟು, ಮಂಗಳೂರು.
ಗುಣ ಮಟ್ಟ ಎಂದೂ ಆಕಸ್ಮಿಕ ಅಲ್ಲ; ಅದು ಯಾವತ್ತೂ ಶ್ರೇಷ್ಠ ಬುದ್ಧಿಮತ್ತೆಯ ಪ್ರಯತ್ನಕ್ಕೆ ಸಿಗುವ ಫಲ – ಜಾನ್ ರಸ್ಕಿನ್
ಟ್ರಾನ್ಸಿಟ್ ಒನ್ ನಲ್ಲಿ ಹೂಡಿಕೆ ಮಾಡಿ – ಸರಿಯಾದುದನ್ನೇ ಆಯ್ಕೆ ಮಾಡಿ !
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್‌ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.