ತನ್ನ ಎಲ್ಲಾ ಚಾಲಕರಿಗೆ ಲಸಿಕೆಗಾಗಿ ಪ್ರೋತ್ಸಾಹ ಧನ ನೀಡಲು ಮುಂದಾದ ಉಬರ್ !
Team Udayavani, May 6, 2021, 4:53 PM IST
ನವ ದೆಹಲಿ : ದೇಶದಲ್ಲಿ ಕೋವಿಡ್ ಸೋಂಕುನ ಅಲೆ ಇಡೀ ದೇಶವನ್ನು ಆತಂಕಕ್ಕೆ ಒಳಪಡಿಸಿದೆ. ದೇಶದಾದ್ಯಂತ ಕೋವಿಡ್ ಲಸಿಕೆ ಅಭಿಯಾಣ ಆಗುತ್ತಿದೆ. ಕೋವಿಡ್ ಸೋಂಕನ್ನು ಕಟ್ಟಿ ಹಾಕುವ ಕಾರಣದಿಂದ ಲಸಿಕೆ ಸ್ವೀಕರಿಸಿ ಎಂದು ಸರ್ಕಾರ ಮನವಿ ಮಾಡಿಕೊಂಡಿದೆ.
ಎಲ್ಲಾ ಉದ್ಯಮ ಕ್ಷೇತ್ರಗಳು ತನ್ನ ಉದ್ಯೋಗಿಗಳಿಗೆ ಲಸಿಕೆಯನ್ನು ಹಾಕಿಸಿಕೊಳ್ಲುವಂತೆ ಕೇಳಿಕೊಳ್ಳುತ್ತಿದ್ದು ಮತ್ತು ಎಷ್ಡೋ ಖಾಸಗಿ ಕಂಪೆನಿಗಳು ತನ್ನ ಉದ್ಯೋಗಿಗಳಿಗೆ ಲಸಿಕೆ ಹಾಕಿಸಿಕೊಳ್ಳುವಂತೆ ಮನವಿ ಮಾಡಿಕೊಳ್ಳುತ್ತಿವೆ, ಮಾತ್ರವಲ್ಲದೇ, ಕೆಲವೊಂದು ಕಂಪೆನಿಗಳು ಲಸಿಕೆಯ ವೆಚ್ಚವನ್ನೂ ಕೂಡ ಭರಿಸುತ್ತಿವೆ. ಅಂತಹ ಕಂಪೆನಿಗಳ ಸಾಲಿಗೆ ಈಗ ಉಬರ್ ಸಂಸ್ಥೆ ಕೂಡ ಸೇರ್ಪಡೆಯಾಗಿದೆ.
ಓದಿ : ನಾಳೆಯಿಂದ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಟ್ಟುನಿಟ್ಟಿನ ಕ್ರಮ ಸಾಧ್ಯತೆ ?
ಮುಂದಿನ ಆರು ತಿಂಗಳಲ್ಲಿ ತನ್ನ ಒಂದೂವರೆ ಲಕ್ಷ ಚಾಲಕರು ಕೋವಿಡ್-19 ಲಸಿಕೆ ಪಡೆಯಲು 18.5 ಕೋಟಿ ಪ್ರೋತ್ಸಾಹಕ ಧನವನ್ನು ನೀಡುವುದಾಗಿ ಉಬರ್ ಕಂಪನಿ ತಿಳಿಸಿದೆ.
ಎರಡು ಬಾರಿ ಕೋವಿಡ್ ಲಸಿಕೆ ಹಾಕಿಸಿಕೊಂಡ ಕಾರು, ಆಟೋ ಮತ್ತು ಮೋಟೋ ಚಾಲಕರು ಮಾನ್ಯಗೊಂಡ ಡಿಜಿಟಲ್ ಲಸಿಕಾ ಸ್ವೀಕಾರ ಪ್ರಮಾಣಪತ್ರಗಳನ್ನು ತೋರಿಸಿದರೆ 400 ರೂ. ಪಡೆಯಲು ಅರ್ಹರಾಗಿರುತ್ತಾರೆ ಎಂದು ತನ್ನ ಕಂಪನಿ ಹೇಳಿಕೆಯಲ್ಲಿ ತಿಳಿಸಿದೆ.
ಈ ಬಗ್ಗೆ ಪ್ರತಿಕ್ರಿಯಿಸಿದ ಉಬರ್ ಇಂಡಿಯಾ ದಕ್ಷಿಣ ಏಷ್ಯಾ ಡ್ರೈವರ್ ಆಫರೇಷನ್ ಮತ್ತು ಸಪ್ಲೈ ಮುಖ್ಯಸ್ಥ ಪವನ್ ವೈಶ್, ನಮ್ಮ ಎಲ್ಲಾ ಉತ್ಪನ್ನಗಳ ಮಾರ್ಗಗಳಲ್ಲಿನ ಚಾಲಕರಿಗೆ ಈ ಕಾರ್ಯಕ್ರಮದ ಬಗ್ಗೆ ತಿಳಿಸಲು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಮತ್ತು ಲಸಿಕೆಯನ್ನು ಪಡೆಯುವಂತೆ ಪ್ರೋತ್ಸಾಹಿಸಲಾಗುವುದು ಎಂದು ಹೇಳಿದ್ದಾರೆ.
ಓದಿ : ಬಯೋ ಬಬಲ್ ಒಳಗೆ ಕೋವಿಡ್ ಹೇಗೆ ಬಂತೆನ್ನುವುದೇ ಆಶ್ಚರ್ಯ: ಸೌರವ್ ಗಂಗೂಲಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.