

ನಾಗೇಂದ್ರ ತ್ರಾಸಿ, Jan 30, 2025, 6:11 PM IST
ಹಣಕಾಸು ಸಚಿವೆ (Finance Minister) ನಿರ್ಮಲಾ ಸೀತಾರಾಮನ್ ಫೆ.01ರಂದು 8ನೇ ಬಾರಿಗೆ ದಾಖಲೆಯ ಬಜೆಟ್ ಅನ್ನು ಮಂಡಿಸಲಿದ್ದು, ಆರ್ಥಿಕ ಪ್ರಗತಿಗೆ ಕಠಿನ ಕ್ರಮ ಹಾಗೂ ಬೆಲೆ ಏರಿಕೆಯಿಂದ ಮಧ್ಯಮ ವರ್ಗದ ಮೇಲಿನ ಹೊರೆ ಇಳಿಸುವ ನಿರೀಕ್ಷೆ ಇದೆ.
ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರು ದಾಖಲೆಯ 10 ಬಜೆಟ್ ಅನ್ನು ಮಂಡಿಸಿದ್ದರು. ಮೊರಾರ್ಜಿ ದೇಸಾಯಿ ಅವರು 1959ರಿಂದ 1964ರವರೆಗೆ ವಿತ್ತ ಸಚಿವರಾಗಿದ್ದ ಸಂದರ್ಭದಲ್ಲಿ ಒಟ್ಟು ಆರು ಬಜೆಟ್ ಮಂಡಿಸಿದ್ದರು. ನಂತರ 1967ರಿಂದ 1969ರ ನಡುವೆ ನಾಲ್ಕು ಬಜೆಟ್ ಗಳನ್ನು ಮಂಡಿಸಿ, ದಾಖಲೆ ಬರೆದಿದ್ದರು.
ಮಾಜಿ ವಿತ್ತ ಸಚಿವ ಪಿ.ಚಿದಂಬರಂ ಅವರು 9 ಬಾರಿ ಬಜೆಟ್ ಮಂಡಿಸಿದ್ದು, ಪ್ರಣಬ್ ಮುಖರ್ಜಿ ಅವರು ಎಂಟು ಬಾರಿ ಕೇಂದ್ರದ ಬಜೆಟ್ ಮಂಡಿಸಿದ್ದರು. ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನಾಯಕತ್ವದಡಿ ಸಚಿವೆ ನಿರ್ಮಲಾ ಸೀತಾರಾಮನ್ ಸತತ 8ನೇ ಬಾರಿ ಬಜೆಟ್ ಮಂಡಿಸುವ ಮೂಲಕ ದಾಖಲೆಯನ್ನು ಮುಂದುವರಿಸಿದ್ದಾರೆ.
2019ರಲ್ಲಿ ನರೇಂದ್ರ ಮೋದಿ ಅವರು ಎರಡನೇ ಬಾರಿ ಪ್ರಧಾನಿಯಾದ ಸಂದರ್ಭದಲ್ಲಿ 2019ರಲ್ಲಿ ನಿರ್ಮಲಾ ಸೀತಾರಾಮನ್ ಅವರನ್ನು ದೇಶದ ಮೊದಲ ಪೂರ್ಣ ಪ್ರಮಾಣದ ಮಹಿಳಾ ವಿತ್ತ ಸಚಿವೆಯನ್ನಾಗಿ ನೇಮಕ ಮಾಡಿದ್ದರು. 2024ರಲ್ಲಿ ನರೇಂದ್ರ ಮೋದಿ ಅವರು 3ನೇ ಬಾರಿಗೆ ಅಧಿಕಾರದ ಗದ್ದುಗೆ ಏರಿದ ನಂತರವೂ ನಿರ್ಮಲಾ ಸೀತಾರಾಮನ್ ಹಣಕಾಸು ಸಚಿವೆಯಾಗಿ ಮುಂದುವರಿದಿದ್ದಾರೆ.
ನಿರ್ಮಲಾ ಸೀತಾರಾಮನ್ ಈವರೆಗೆ ಒಟ್ಟು 7 ಪೂರ್ಣಪ್ರಮಾಣದ ಬಜೆಟ್ ಮಂಡಿಸಿದ್ದು, 2024ರ ಫೆಬ್ರವರಿ 1ರಂದು ಮಧ್ಯಂತರ ಬಜೆಟ್ ಮಂಡಿಸಿದ್ದರು.
ಬಜೆಟ್ ಕುರಿತ ಕುತೂಹಲಕಾರಿ ಹೈಲೈಟ್ಸ್:
1)ಸ್ವಾತಂತ್ರ್ಯ ನಂತರ ಭಾರತದಲ್ಲಿ ಮೊದಲ ಬಜೆಟ್ ಮಂಡನೆಯಾಗಿದ್ದು, 1947ರ ನವೆಂಬರ್ 26ರಂದು. ದೇಶದ ಪ್ರಥಮ ವಿತ್ತ ಸಚಿವ ಆರ್.ಕೆ.ಷಣ್ಮುಖಂ ಚೆಟ್ಟಿ ಅಂದು ಬಜೆಟ್ ಮಂಡಿಸಿದ್ದರು.
2)ಅತೀ ಹೆಚ್ಚು ಬಜೆಟ್ ಮಂಡನೆ:
ದೇಶದಲ್ಲಿ ಅತೀ ಹೆಚ್ಚು ಬಜೆಟ್ ಗಳನ್ನು ಮಂಡಿಸಿದ ದಾಖಲೆ ಮಾಜಿ ಪ್ರಧಾನಿ ಮೊರಾರ್ಜಿ ದೇಸಾಯಿ ಅವರ ಹೆಸರಿನಲ್ಲಿದೆ. ಅವರು ಪ್ರಧಾನಿ ಜವಾಹರಲಾಲ್ ನೆಹರು ಮತ್ತು ಪ್ರಧಾನಿ ಲಾಲ್ ಬಹದ್ದೂರ್ ಶಾಸ್ತ್ರಿ ಸಂಪುಟದಲ್ಲಿ ವಿತ್ತ ಸಚಿವರಾಗಿದ್ದಾಗ ಒಟ್ಟು 10 ಬಜೆಟ್ ಗಳನ್ನು ಮಂಡಿಸಿದ್ದರು. ಮೊರಾರ್ಜಿ ದೇಸಾಯಿ ಅವರು 1959 ಫೆ.28ರಂದು ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದ್ದರು.
3)2ನೇ ಅತೀ ಹೆಚ್ಚು ಬಜೆಟ್ ಮಂಡನೆ:
ಮೊರಾರ್ಜಿ ದೇಸಾಯಿ ಅತೀ ಹೆಚ್ಚು ಬಜೆಟ್ ಮಂಡಿಸಿದ ಮೊದಲ ಮಾಜಿ ವಿತ್ತ ಸಚಿವರಾಗಿದ್ದು, ಮಾಜಿ ಹಣಕಾಸು ಸಚಿವ ಪಿ.ಚಿದಂಬರಂ 9 ಬಜೆಟ್ ಗಳನ್ನು ಮಂಡಿಸಿದ್ದು, ಅತೀ ಹೆಚ್ಚು ಬಜೆಟ್ ಮಂಡಿಸಿದ 2ನೇ ವ್ಯಕ್ತಿಯಾಗಿದ್ದಾರೆ. 1996ರ ಮಾರ್ಚ್ 19ರಂದು ಪ್ರಧಾನಿ ಎಚ್.ಡಿ.ದೇವೇಗೌಡ ನೇತೃತ್ವದ ಸಂಪುಟದಲ್ಲಿದ್ದ ಪಿ.ಚಿದಂಬರಂ ತಮ್ಮ ಮೊದಲ ಬಜೆಟ್ ಅನ್ನು ಮಂಡಿಸಿದ್ದರು. ನಂತರ ಕಾಂಗ್ರೆಸ್ ಮೈತ್ರಿಯ ಯುಪಿಎ ಸರ್ಕಾರದಲ್ಲಿ ಉಳಿದ ಬಜೆಟ್ ಗಳನ್ನು ಮಂಡಿಸಿದ್ದರು.
4)ಪ್ರಣಬ್ ಮುಖರ್ಜಿ:
ಮಾಜಿ ವಿತ್ತ ಸಚಿವ ಪ್ರಣಬ್ ಮುಖರ್ಜಿ ಅವರು ತಮ್ಮ ಅಧಿಕಾರಾವಧಿಯಲ್ಲಿ ಎಂಟು ಬಾರಿ ಬಜೆಟ್ ಮಂಡಿಸಿದ್ದರು. 1982, 1983 ಮತ್ತು 1984ರಲ್ಲಿ ಐದು ಪೂರ್ಣಾವಧಿ ಬಜೆಟ್ ಮಂಡಿಸಿದ್ದು, 2009ರ ಫೆಬ್ರವರಿ ಮತ್ತು 2012ರ ಮಾರ್ಚ್ ನಲ್ಲಿ ಯುಪಿಎ ಸರ್ಕಾರದಲ್ಲಿ ಸಚಿವರಾಗಿದ್ದಾಗ ಎರಡು ಬಾರಿ ಬಜೆಟ್ ಮಂಡಿಸಿದ್ದರು.
5)ಮನಮೋಹನ್ ಸಿಂಗ್:
ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು 1991 ಮತ್ತು 1995ರ ನಡುವೆ ಐದು ಬಾರಿ ಬಜೆಟ್ ಮಂಡಿಸಿದ್ದರು. ಪ್ರಧಾನಿ ನರಸಿಂಹ ರಾವ್ ನೇತೃತ್ವದ ಸರ್ಕಾರದಲ್ಲಿ ವಿತ್ತ ಸಚಿವರಾಗಿದ್ದ ವೇಳೆ ಸಿಂಗ್ ಬಜೆಟ್ ಮಂಡಿಸಿದ್ದರು.
6)ಬಜೆಟ್ ನ ದೀರ್ಘ ಭಾಷಣ:
2020ರ ಫೆಬ್ರವರಿ 1ರಂದು 2ಗಂಟೆ 40 ನಿಮಿಷಗಳ ಕಾಲ ದೀರ್ಘಾವಧಿಯ ಬಜೆಟ್ ಭಾಷಣ ಮಾಡುವ ಮೂಲಕ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ದಾಖಲೆ ಬರೆದಿದ್ದರು. ಭಾಷಣ ಅರ್ಧಕ್ಕೆ ನಿಲ್ಲಿಸುವ ಮೊದಲು ಇನ್ನೂ ಎರಡು ಪುಟಗಳಷ್ಟು ಭಾಷಣ ಬಾಕಿ ಉಳಿದಿತ್ತು.
7)ಅತೀ ಚಿಕ್ಕ ಬಜೆಟ್ ಭಾಷಣ:
1977ರಲ್ಲಿ ಹಿರುಭಾಯ್ ಮುಲ್ಜಿಭಾಯ್ ಪಟೇಲ್ ಅವರು ಮಂಡಿಸಿದ್ದ ಮಧ್ಯಂತರ ಬಜೆಟ್ ಭಾಷಣ ಕೇವಲ 800 ಶಬ್ದ ಮಾತ್ರ. ಇದು ಅತ್ಯಂತ ಚಿಕ್ಕ ಬಜೆಟ್ ಭಾಷಣವಾಗಿದೆ.
Tesla: ಭಾರತದಲ್ಲಿ ಟೆಸ್ಲಾ ನೇಮಕಾತಿ ಶುರು: ಶೀಘ್ರ ಮಾರುಕಟ್ಟೆಗೆ?
Stock Market: ಕಾರ್ಪೋರೇಟ್ ಆದಾಯ ಕುಸಿತ ಪರಿಣಾಮ; ಷೇರುಪೇಟೆ ಸೂಚ್ಯಂಕ 600 ಅಂಕ ಇಳಿಕೆ
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Champions Trophy: ಭಾರತದ ಆಟ ಆರಂಭ; ದುಬೈನಲ್ಲಿ ಟಾಸ್ ಗೆದ್ದ ಬಾಂಗ್ಲಾದೇಶ
Guttigaru: ವೋಲ್ಟೇಜ್ ಸಮಸ್ಯೆಗೆ ಕೃಷಿಕರು ಕಂಗಾಲು
Davanagere: ಹೆಬ್ಬಾಳ್ಕರ್- ರವಿ ಪ್ರಕರಣದ ಬಗ್ಗೆ ನಾನೇನು ಹೇಳಲಾರೆ: ಸ್ಪೀಕರ್ ಖಾದರ್
ಸಿನಿಮಾ ಪ್ರಚಾರಕ್ಕೆ ತೆರಳುತ್ತಿದ್ದ ವೇಳೆ ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್ ಕಾರು ಅಪಘಾತ
Delhi CM Rekha Gupta: ದೆಹಲಿ ನೂತನ ಸಿಎಂ ಆಗಿ ರೇಖಾ ಗುಪ್ತಾ ಪ್ರಮಾಣವಚನ ಸ್ವೀಕಾರ
You seem to have an Ad Blocker on.
To continue reading, please turn it off or whitelist Udayavani.