![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, Jul 24, 2020, 6:30 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ಕಾಗದ ರಹಿತ ಟಿಕೆಟ್, ಆಸನದಲ್ಲಿ ಅಂತರ, ಪ್ರತ್ಯೇಕ ಇಂಟರ್ವಲ್‌ಗಳು…
ಮುಂದಿನ ತಿಂಗಳು 3ನೇ ಹಂತದ ಅನ್‌ಲಾಕ್ ಜಾರಿಯಾಗಲಿದ್ದು, ಕೇಂದ್ರ ಸರಕಾರವೇನಾದರೂ ಮಲ್ಟಿಪ್ಲೆಕ್ಸ್‌ಗಳನ್ನು ತೆರೆಯಲು ಅನುಮತಿ ನೀಡಿದರೆ, ವಿವಿಧ ಸುರಕ್ಷಾ ಕ್ರಮಗಳನ್ನು ಅನುಸರಿಸಲು ಮಲ್ಟಿಪ್ಲೆಕ್ಸ್‌ಗಳು ಸಿದ್ಧತೆ ನಡೆಸಿವೆ.
ಭಾರತೀಯ ಮಲ್ಟಿಪ್ಲೆಕ್ಸ್ ಸಂಘವು ಈಗಾಗಲೇ ಮಾರ್ಗಸೂಚಿಯನ್ನು ಸಿದ್ಧಪಡಿಸಿಕೊಂಡಿದ್ದು, ಅದನ್ನು ಕೇಂದ್ರದ ವಿವಿಧ ಸಚಿವಾಲಯಗಳು, ಪ್ರಧಾನಿ ಕಾರ್ಯಾಲಯ, ನೀತಿ ಆಯೋಗಕ್ಕೆ ಕಳುಹಿಸಲಾಗಿದೆ ಎಂದು ಐನಾಕ್ಸ್, ಪಿವಿಆರ್ ಪಿಕ್ಚರ್ಸ್ ಮತ್ತು ಸಿನೆಪೊಲಿಸ್ ಇಂಡಿಯಾದ ಪ್ರಮುಖರು ತಿಳಿಸಿದ್ದಾರೆ.
ಸುರಕ್ಷಾ ಕ್ರಮಗಳೇನು?
– ಕಾಗದ ರಹಿತ ಟಿಕೆಟ್ ವ್ಯವಸ್ಥೆ. ಮೊಬೈಲ್ ಫೋನ್‌ನಲ್ಲಿರುವ ಬಾರ್ ಕೋಡ್ ಸ್ಕ್ಯಾನರ್ ಲಿಂಕ್ ಸ್ಕ್ಯಾನ್ ಮಾಡಿ ಒಳಪ್ರವೇಶ
– ಆಲ್ ಇನ್ ಒನ್ ಎಸ್ಸೆಮ್ಮೆಸ್ ವ್ಯವಸ್ಥೆ. ಈ ಮೂಲಕ ಪ್ರವೇಶ ದ್ವಾರದಲ್ಲಿ ಕ್ಯೂಆರ್ ಕೋಡ್ ಸ್ಕ್ಯಾನ್ ಮಾಡಿಸಿಕೊಂಡು ಒಳಹೋಗುವ, ಆಸನದ ಲೊಕೇಷನ್ ಪತ್ತೆಹಚ್ಚುವ ಮತ್ತು ಆಹಾರವನ್ನು ಆರ್ಡರ್ ಮಾಡುವ ವ್ಯವಸ್ಥೆ
– ಆಟೋಮ್ಯಾಟಿಕ್ ಆಗಿ ಆಸನ ವ್ಯವಸ್ಥೆಯಲ್ಲಿ ಅಂತರ ಕಾಯ್ದುಕೊಳ್ಳುವಿಕೆ
– ಸಿನಿಮಾ ಥಿಯೇಟರ್‌ನ ಒಳಾಂಗಣ, ಹೊರಾಂಗಣ, ಬಾಗಿಲುಗಳು, ರೈಲಿಂಗ್‌ಗಳನ್ನು ನಿಯಮಿತವಾಗಿ ಸ್ಯಾನಿಟೈಸ್ ಮಾಡುವುದು
– ಒಳಬರುವವರ ದೇಹದ ಉಷ್ಣಾಂಶ ಪರೀಕ್ಷೆ, ಮಾಸ್ಕ್ ಕಡ್ಡಾಯ
– ಪ್ರತಿ ಶೋ ಮುಗಿದ ಕೂಡಲೇ ಸ್ವಚ್ಛಗೊಳಿಸುವ ಪ್ರಕ್ರಿಯೆ
– ಏಕಕಾಲಕ್ಕೆ ಎರಡು ಸ್ಕ್ರೀನ್‌ಗಳಲ್ಲಿ ಚಿತ್ರ ಪ್ರದರ್ಶನ ಇರುವುದಿಲ್ಲ
– ಇಂಟರ್ವಲ್ ಅವಧಿಯಲ್ಲಿಯೂ 15 ನಿಮಿಷಗಳಿಂದ ಅರ್ಧ ಗಂಟೆಯ ಅಂತರ
Stock market :ವಿದೇಶಿ ಬಂಡವಾಳ ಹಿಂತೆಗೆತ: ಸತತ 8ನೇ ದಿನವೂ ಸೆನ್ಸೆಕ್ಸ್ ಕುಸಿತ
New Income Tax Bill: ಹೊಸ ಆದಾಯ ತೆರಿಗೆ ಮಸೂದೆ ಮಂಡಿಸಿದ ಕೇಂದ್ರ ವಿತ್ತ ಸಚಿವೆ
Less Burden: ಆರ್‌ಬಿಐ ರೆಪೋ ದರ ಕಡಿತದ ಬೆನ್ನಲ್ಲೇ ಗೃಹ ಸಾಲಗಳಿಗೂ ರಿಲೀಫ್
Stock Market: ಷೇರುಪೇಟೆ ಸೂಚ್ಯಂಕ 448 ಅಂಕ ಏರಿಕೆ; ಜಿಗಿತಕ್ಕೆ ಈ 3 ಅಂಶಗಳು ಕಾರಣ!
Gold-Silver: ಬೆಂಗಳೂರಲ್ಲಿ 10 ಗ್ರಾಂ ಚಿನ್ನಕ್ಕೆ 710 ರೂ. ಇಳಿಕೆ, ಬೆಳ್ಳಿ ಏರಿಕೆ
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.