UPI: ವಹಿವಾಟು ಮಿತಿ ಏರಿಕೆಗೆ ಆರ್‌ಬಿಐ ನಿರ್ಧಾರ.. ಮಿತಿ 2,000ರೂ.ನಿಂದ 5,000ರೂ.ಗೆ ಏರಿಕೆ
Team Udayavani, Oct 9, 2024, 11:09 PM IST
ಮುಂಬೈ: ಯುಪಿಐ ಲೈಟ್, ಯುಐಪಿ 123 ಪೇ ಬಳಕೆದಾರರಿಗೆ ಭಾರತೀಯ ರಿಸರ್ವ್ ಬ್ಯಾಂಕ್ ಸಿಹಿಸುದ್ದಿ ನೀಡಿದೆ. ಈ ಬಳಕೆದಾರರ ದೈನಂದಿನ ವಹಿವಾಟು ಮಿತಿ ಹೆಚ್ಚಿಸಲು ನಿರ್ಧರಿಸಲಾಗಿದೆ. ಯುಪಿಐ ಲೈಟ್ ವ್ಯಾಲೆಟ್ ಮಿತಿ 2,000 ರೂ.ನಿಂದ 5000 ರೂ.ಗೆ ಮತ್ತು ಯುಪಿಐ123 ಬಳಕೆದಾರರ ದೈನಂದಿನ ಮಿತಿಯನ್ನು 500ರೂ.ನಿಂದ 10000 ರೂ.ಗೆ ಹೆಚ್ಚಿಸಲಾಗಿದೆ.
ಯುಪಿಐ ಮಾದರಿ ವ್ಯವಸ್ಥೆ: ಇದೇ ವೇಳೆ, ಆರ್‌ಟಿಜಿಎಸ್ ಮತ್ತು ನೆಫ್ಟ್ ವಹಿವಾಟು ನಡೆಸುವಾಗ ಈವರೆಗೆ ಬ್ಯಾಂಕ್ ಖಾತೆ ಸಂಖ್ಯೆ, ಐಎಫ್ಎಸ್‌ಸಿ ಕೋಡ್ ಮಾತ್ರ ನೀಡಲಾಗುತ್ತಿತ್ತು. ಆದರೆ, ಇನ್ನು ಮುಂದೆ ಯುಪಿಐ ಮಾದರಿಯಲ್ಲೇ ನೀವು ಖಾತೆ ಸಂಖ್ಯೆ, ಐಎಫ್ಎಸ್‌ಸಿ ಕೋಡ್ ನಮೂದಿಸಿದ ಕೂಡಲೇ ಹಣ ಸ್ವೀಕರಿಸುವ ವ್ಯಕ್ತಿಯ(ಖಾತೆದಾರ) ಹೆಸರು ಕಾಣಿಸಲಿದೆ.
ಶುಲ್ಕ ವಿನಾಯ್ತಿ ವಿಸ್ತರಣೆ: ಅವಧಿಗೆ ಮುಂಚಿತವಾಗಿ ಸಾಲ ಮರುಪಾವತಿಸಿದರೆ ವಿಧಿಸುವ ಶುಲ್ಕದಿಂದ ಇನ್ನು ಸಣ್ಣ ಮತ್ತು ಕಿರು ಉದ್ದಿಮೆಗಳಿಗೂ
(ಎಂಎಸ್‌ಎಂಇ) ವಿನಾಯ್ತಿ ಸಿಗಲಿದೆ.
ಬಡ್ಡಿ ದರ ಬದಲಿಲ್ಲ
ಆರ್‌ಬಿಐ ಸತತ 10ನೇ ಬಾರಿಗೆ ಬಡ್ಡಿ ದರವನ್ನು ಯಥಾಸ್ಥಿತಿಯಲ್ಲಿ(ಶೇ.6.5) ಮುಂದುವರಿಸಿದೆ. ಹೀಗಾಗಿ ಗೃಹ, ವಾಹನ ಸಾಲಗಳ ಬಡ್ಡಿದರಗಳಲ್ಲಿ ಬದಲಾವಣೆ ಆಗಲ್ಲ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Bengaluru: ಇ-ಖಾತಾ ಗೊಂದಲದಿಂದ ಲಂಚಕ್ಕೆ ದಾರಿ: ಆರ್. ಅಶೋಕ್
Pollution: ದಿಲ್ಲಿಯಲ್ಲಿ ಈಗ ನಿರ್ಮಾಣಕ್ಕೆ ಬ್ರೇಕ್, ಬಸ್‌ಗಳಿಗೆ ನಿರ್ಬಂಧ
Subramanya: ಕಸ್ತೂರಿ ರಂಗನ್ ವರದಿ ವಿರುದ್ಧ ಗುಂಡ್ಯದಲ್ಲಿ ಬೃಹತ್ ಪ್ರಭಟನಾ ಸಭೆ ಆರಂಭ
Sri Lanka Election Result:ಸಂಸತ್ ಚುನಾವಣೆ-ಅಧ್ಯಕ್ಷ ಅನುರಾ ದಿಸ್ಸಾನಾಯಕೆ ಪಕ್ಷ ಜಯಭೇರಿ
India Vs India A ಅಭ್ಯಾಸ ಪಂದ್ಯ: ಅಗ್ಗಕ್ಕೆ ಔಟಾದ ಕೊಹ್ಲಿ, ಪಂತ್; ಗಾಯಗೊಂಡ ರಾಹುಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.