ವಂದೇ ಭಾರತ ರೈಲಿಗೆ ವರ್ಷ ಪೂರ್ಣ; 92 ಕೋಟಿ ರೂ. ಗಳಿಕೆ
Team Udayavani, Feb 19, 2020, 9:54 PM IST
ಹೊಸದಿಲ್ಲಿ: ಮೇಕ್ ಇನ್ ಯೋಜನೆ ಅಡಿಯಲ್ಲಿ ನಿರ್ಮಿಸಲಾಗಿರುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸೇವೆಗೆ ಒಂದು ವರ್ಷ ಸಂದಿವೆ. ಸಂಪೂರ್ಣ ಸ್ವದೇಶಿ ಖ್ಯಾತಿಯ ಈ ರೈಲು ದಿಲ್ಲಿ-ವಾರಣಾಸಿ ನಡುವೆ ಸಂಚರಿಸುತ್ತಿದೆ. ಶತಾಬ್ಧಿ ಎಕ್ಸ್‌ಪ್ರೆಸ್ ಬದಲು ಹಳಿಗೆ ಇಳಿದಿದ್ದ ವಂದೇ ಭಾರತ್ ಎಕ್ಸ್‌ಪ್ರೆಸ್ ಈಗಾಗಲೇ 3.8 ಲಕ್ಷ ಕಿ.ಮೀ. ಸಂಚಾರ ನಡೆಸಿದೆ. ಇದರಿಂದ 92.29 ಕೋಟಿ ರೂ. ಸಂಪಾದಿಸಿದೆ.
ಈ ರೈಲು ಸೋಮವಾರ ಮತ್ತು ಗುರುವಾರ ಹೊರತುಪಡಿಸಿ ಇತರ ದಿನಗಳಲ್ಲಿ ಓಡಾಡುತ್ತಿದ್ದು, ದಿಲ್ಲಿಯಿಂದ ವಾರಾಣಸಿಗೆ 8 ಗಂಟೆಯ ಪ್ರಯಾಣಾವಧಿ ಹೊಂದಿದೆ. ಇದು 16 ಎಸಿ ಬೋಗಿಗಳನ್ನು ಹೊಂದಿದ್ದು, ಅಟೋಮೆಟಿಕ್ ಡೋರ್‌ಗಳು, ಸ್ಲೈಡಿಂಗ್ ಡೋರ್‌ಗಳನ್ನು ಹೊಂದಿದೆ. ಈ ರೈಲಿನಲ್ಲಿ ಅತ್ಯಾಧುನಿಕ ಸೌಲಭ್ಯಗಳನ್ನು ಕಲ್ಪಿಸಲಾಗಿದೆ.
ಪ್ರತಿ ಕೋಚ್‌ನಲ್ಲಿ ಜಿಪಿಎಸ್ ತಂತ್ರಜ್ಞಾನ, ಪ್ರತಿಯೊಂದು ಬೋಗಿಗಳಲ್ಲೂ ಸಿಸಿಟಿವಿ ಕ್ಯಾಮೆರಾಗಳು, ವೈಫೈ ಸೌಲಭ್ಯ ನೀಡಲಾಗಿದೆ. ಇದರೊಂದಿಗೆ ಮನರಂಜನೆಗೆ ಬೇಕಾದ ವ್ಯವಸ್ಥೆ, ಹೊಸ ತಂತ್ರಜ್ಞಾನದ ಮೊಬೈಲ್ ಚಾರ್ಜಿಂಗ್ ಆಯ್ಕೆಗಳು ಇದರಲ್ಲಿದೆ.
ಸಾಮಾನ್ಯ ರೈಲಿನ ಒಂದು ಬೋಗಿಗಳಲ್ಲಿ 78 ಆಸನಗಳ ವ್ಯಸಸ್ಥೆಗಳಿದ್ದರೆ, ವಂದೇ ಭಾರತ್ ಎಕ್ಸ್‌ಪ್ರೆಸ್‌ನಲ್ಲಿ 52 ಸುಖಾಸನ ಸೀಟುಗಳನ್ನು ನೀಡಲಾಗಿದೆ. ಅದೇ ರೀತಿ ಟ್ರೈನ್‌ನ ನಡುವೆ ಎರಡು ಎಕ್ಸಿಕ್ಯೂಟಿವ್ ಕಂಪಾರ್ಟ್ಮೆಂಟ್ ಇದೆ.
ಭಾರತದಲ್ಲಿ ನಿರ್ಮಾಣವಾಗಿರುವ ಅತ್ಯಾಧುನಿಕ ಸೌಲಭ್ಯಗಳನ್ನು ಒಳಗೊಂಡಿರುವ ಈ ಟ್ರೈನ್ ಅನ್ನು ಖರೀದಿಸಲು ಪೆರು, ಇಂಡೋನೇಷ್ಯಾ, ಸಿಂಗಾಪುರ್, ಮಲೇಷ್ಯಾ ಮತ್ತು ಮಧ್ಯಪ್ರಾಚ್ಯದ ಕೆಲವು ರಾಷ್ಟ್ರಗಳು ಆಸಕ್ತಿವಹಿಸಿದೆ ಎಂದು ರೈಲ್ವೇ ಮಂಡಳಿ ಹೇಳಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Bengaluru: ಬೀದಿ ನಾಯಿಗೆ ಊಟ ಹಾಕಿದ ಮಹಿಳೆ ಮೇಲೆ ಹಲ್ಲೆ ಯತ್ನ
Rakesh Adiga: ನಾನು ಮಿಡಲ್ ಕ್ಲಾಸ್ ಹುಡುಗ ಮರ್ಯಾದೆ ಉಳಿಸಿ!
Thekkatte: ಗ್ರಾಮೀಣ ಭಾಗದಲ್ಲಿ ಹೆಚ್ಚುತ್ತಿದೆ ಗೋ ಕಳವು ಪ್ರಕರಣ
Bengaluru: 19 ಕಡೆ ಫ್ಲಿಪ್ ಕಾರ್ಟ್, ಅಮೆಜಾನ್ ವ್ಯಾಪಾರಸ್ಥರಿಗೆ ಇ.ಡಿ. ದಾಳಿ ಬಿಸಿ
Waqf issue: ಉಪಚುನಾವಣೆಯಲ್ಲಿ ನಾಟಕ ಮಾಡಲು ಜೆಪಿಸಿ ದುರ್ಬಳಕೆ: ಎಚ್.ಕೆ.ಪಾಟೀಲ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.