ಅಮೆಜಾನ್ ಪೇ ಮೂಲಕ ಅಮೆಜಾನ್ ಗ್ರಾಹಕರಿಗೆ ವಿವಿಧ ಆಫರ್ ಗಳು
Team Udayavani, Oct 11, 2021, 2:03 PM IST
ಬೆಂಗಳೂರು: ಅಮೆಜಾನ್ ಆನ್ ಲೈನ್ ಸ್ಟೋರ್ ತನ್ನ ಗ್ರಾಹಕರ ಅನುಕೂಲಕ್ಕಾಗಿ ಒಂದು ತಿಂಗಳ ಅವಧಿಯ ಗ್ರೇಟ್ ಇಂಡಿಯನ್ ಫೆಸ್ಟಿವಲ್ ಅವಧಿಯಲ್ಲಿ ಅನೇಕ ಕೊಡುಗೆಗಳನ್ನು ಕಲ್ಪಿಸಿದೆ. ಅಮೆಜಾನ್ ಪೇ ಬಹುಮಾನ, ಕ್ಯಾಶ್‌ಬ್ಯಾಕ್ ನೀಡುತ್ತಿದೆ. ಗ್ರಾಹಕರು ಎಲೆಕ್ಟ್ರಾನಿಕ್ಸ್, ಗೃಹೋಪಯೋಗಿ ವಸ್ತುಗಳು, ಸೌಂದರ್ಯ ಮತ್ತು ಫ್ಯಾಷನ್, ಪ್ರಯಾಣದ ಟಿಕೆಟ್, ಡಿಜಿಟಲ್ ಚಿನ್ನ ಇತ್ಯಾದಿ ಖರೀದಿಸಲು ಇನ್ನಷ್ಟು ಅನುಕೂಲತೆಗಳನ್ನೊದಗಿಸಿದೆ.
ಅಮೆಜಾನ್ ಪೇನಲ್ಲಿ ವಿವಿಧ ಪಾವತಿ ವಿಧಾನಗಳನ್ನು ಬಳಸಬಹುದು, ಇದರಲ್ಲಿ ಅಮೆಜಾನ್ ಪೇ ಲೇಟರ್, ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಮತ್ತು ಅಮೆಜಾನ್ ಪೇ ಯುಪಿಐ ಮೂಲಕ ಶಾಪಿಂಗ್ ಮಾಡಬಹುದು.
ಅಮೆಜಾನ್ ಪೇ ಮೂಲಕ ಗ್ರಾಹಕರು ಹಬ್ಬದ ಅವಧಿಯಲ್ಲಿ 5000 ರೂ.ಗಳವರೆಗೆ ಹಣವನ್ನು ಉಳಿಸಬಹುದು, ಹಣವನ್ನು ಕಳುಹಿಸುವುದು, ಬಿಲ್‌ಗಳನ್ನು ಪಾವತಿಸುವುದು, ಟಿಕೆಟ್ ಕಾಯ್ದಿರಿಸುವುದು ಇತ್ಯಾದಿ ಮೂಲಕ ರಿವಾರ್ಡ್ ಹಾಗೂ ಬಹುಮಾನ ಪಡೆಯಬಹುದು. ಪ್ರಮುಖ ಪಾಲುದಾರ ಬ್ಯಾಂಕುಗಳಿಂದ ಅತ್ಯಾಕರ್ಷಕ ಕೊಡುಗೆಗಳನ್ನು ಎದುರು ನೋಡಬಹುದು; ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್‌ಗಳ ಮೇಲೆ ನೋ ಕಾಸ್ಟ್ EMI, ಬಜಾಜ್ ಫಿನ್‌ಸರ್ವ್ ಮತ್ತು ಅಮೆಜಾನ್ ಪೇ ಲೇಟರ್ ಮತ್ತು ಇತರ ಪ್ರಮುಖ ಕ್ರೆಡಿಟ್/ಡೆಬಿಟ್ ಕಾರ್ಡ್‌ಗಳಿಂದ ತಕ್ಷಣದ ಕ್ಯಾಶ್ ಬ್ಯಾಕ್ ಪಡೆಯಬಹುದು.
ಗ್ರಾಹಕರು ಅಮೆಜಾನ್ ಪೇ ಐಸಿಐಸಿಐ ಬ್ಯಾಂಕ್ ಕ್ರೆಡಿಟ್ ಕಾರ್ಡ್ ಬಳಸಿ 5% ರಿವಾರ್ಡ್ ಪಾಯಿಂಟ್‌ಗಳನ್ನು ಮತ್ತು ರೂ 750 ಅನ್ನು ಜಾಯ್ನಿಂಗ್ ಬೋನಸ್ ಆಗಿ ಖರೀದಿಸಬಹುದು.
ಇದನ್ನೂ ಓದಿ:MAA ಚುನಾವಣೆಯಲ್ಲಿ ಬಹುಭಾಷಾ ನಟ ಪ್ರಕಾಶ್ ರಾಜ್‍ಗೆ ಸೋಲು
60,000 ರೂ. ವರೆಗಿನ ತ್ವರಿತ ಸಾಲದ ಜೊತೆಗೆ 150 ರೂ. ಅನ್ನು ಮರಳಿ ಪಡೆಯಬಹುದು. ಅಮೆಜಾನ್ ಪೇ ಬ್ಯಾಲೆನ್ಸ್‌ಗೆ ಹಣವನ್ನು ಸೇರಿಸುವ ಮೂಲಕ ರೂ. 200 ಮೌಲ್ಯದ ಬಹುಮಾನಗಳನ್ನು ಪಡೆಯಬಹುದು. ಅಮೆಜಾನ್ ಪೇ ಯುಪಿಐ ಬಳಸುವಾಗ ಶಾಪಿಂಗ್‌ನಲ್ಲಿ 10% ವರೆಗೆ 100 ರೂ. ವಾಪಸ್ ಪಡೆಯುತ್ತಾರೆ.
ಅಮೆಜಾನ್ ಪೇ ಅತ್ಯುನ್ನತ ಮಟ್ಟದ ಸುರಕ್ಷತಾ ಮಾನದಂಡ ಒಳಗೊಂಡಿದೆ. ಹೀಗಾಗಿ ಡಿಜಿಟಲ್ ವಹಿವಾಟುಗಳನ್ನು ಸುರಕ್ಷಿತವಾಗಿ ಮಾಡಬಹುದು. ಎರಡು ಹಂತದ ಪರಿಶೀಲನೆಯನ್ನು (2SV) ಆರಿಸಿಕೊಂಡರೆ ಖಾತೆಯ ಸೈನ್-ಇನ್ ಹಂತದಲ್ಲಿ ಹೆಚ್ಚುವರಿ ಭದ್ರತೆ ನೀಡುತ್ತದೆ.
ಇದಲ್ಲದೆ, ಅವರು ಅಮೆಜಾನ್ ಪೇ ಯುಪಿಐ ಮೂಲಕ ಪಾವತಿ ಆಯ್ಕೆ ಮಾಡಬಹುದು ಅದು ಸುಲಭವಾದ ಸೆಟಪ್ ಪ್ರಕ್ರಿಯೆಯೊಂದಿಗೆ ತಮ್ಮ ನೋಂದಾಯಿತ ಬ್ಯಾಂಕ್ ಖಾತೆಯಿಂದ ತಕ್ಷಣವೇ ಪಾವತಿಸಲು ಸಹಾಯ ಮಾಡುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Google Layoffs: ಉನ್ನತ ಹುದ್ದೆಯ ಉದ್ಯೋಗಿಗಳ ವಜಾ: ಗೂಗಲ್ ಸಿಇಒ ಸುಂದರ್ ಪಿಚೈ
RBI:ಸಾಲ ಮನ್ನಾ ಸೇರಿ ಉಚಿತ ಕೊಡುಗೆ ಆತಂಕಕಾರಿ- ಆರ್ಬಿಐ
Starbucks ಕಾಫಿ ಸಂಸ್ಥೆ ಭಾರತದಿಂದ ನಿರ್ಗಮಿಸಲಿದೆಯಾ?Tata Consumer Products ಹೇಳಿದ್ದೇನು
Nita Ambani: ಬೆಂಗಳೂರಿನ ಪ್ರತಿಷ್ಠಿತ ಕೈಮಗ್ಗ ಮಳಿಗೆಗೆ ಭೇಟಿ ನೀಡಿದ ನೀತಾ ಅಂಬಾನಿ
ರಾಷ್ಟ್ರಾದ್ಯಂತ ಶೈಕ್ಷಣಿಕ ಪಠ್ಯಗಳ ಪೂರೈಕೆಗೆ ಫ್ಲಿಪ್ ಕಾರ್ಟ್ ಮತ್ತು NCERT ಒಪ್ಪಂದ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.