Vodafone Super Hour Offer: 16 ರೂಗೆ ಅನ್‌ಲಿಮಿಟೆಡ್‌ 3/4ಜಿ ಡಾಟಾ


Team Udayavani, Jan 7, 2017, 4:40 PM IST

Vodafone-600.jpg

ಹೊಸದಿಲ್ಲಿ : ಟೆಲಿಕಾಂ ಸಂಸ್ಥೆ ವೋಡಾಫೋನ್‌ ಇಂದು ಶುಕ್ರವಾರ SuperHour scheme (ಸೂಪರ್‌ ಅವರ್‌ ಸ್ಕೀಮ್‌) ಪ್ರಟಿಸಿದೆ. ಈ ಯೋಜನೆಯಡಿ ಅದು  ತನ್ನ  ಪ್ರೀಪೇಡ್‌ ಗ್ರಾಹಕರಿಗೆ 16ರೂ.ಗಳ ಒಂದು ತಾಸಿನ ಆರಂಭದ ದರದಲ್ಲಿ ಅನ್‌ಲಿಮಿಟೆಡ್‌ 3ಜಿ ಅಥವಾ 4ಜಿ ಡಾಟಾವನ್ನು ನೀಡಲಿದೆ. ಮಾತ್ರವಲ್ಲದೆ ಅದು ತನ್ನ ಜಾಲದೊಳಗೆ ಗ್ರಾಹಕರಿಗೆ ಅನ್‌ಲಿಮಿಟೆಡ್‌ ಲೋಕಲ್‌ ವಾಯ್ಸ್  ಕಾಲ್‌ಗ‌ಳನ್ನು 7 ರೂ.ಗೆ ಒಂದು ತಾಸಿನ ವ್ಯಾಲಿಡಿಟಿಯೊಂದಿಗೆ ನೀಡಲಿದೆ.

SuperHour schemeನಡಿ ಗ್ರಾಹಕರು ಸಾಮಾನ್ಯ ನಿಗದಿತ ದರದಲ್ಲಿ ಒಂದು ತಾಸಿನ ಮಟ್ಟಿಗೆ ತಮಗೆ ಬೇಕೆನಿಸುವಷ್ಟು ಡಾಟಾವನ್ನು ಬಳಸಿಕೊಳ್ಳಬಹುದು ಮತ್ತು ಡೌನ್‌ಲೋಡ್‌ ಮಾಡಿಕೊಳ್ಳಬಹುದು. ಮಾತ್ರವಲ್ಲದೆ ಅನಿರ್ಬಂಧಿತ ಮರಳಿ ಖರೀದಿಯೊಂದಿಗೆ (repeat purchase) ಗ್ರಾಹಕರು ಪ್ರತೀ ತಾಸನ್ನು SuperHour ಆಗಿ ಮಾಡಿಕೊಳ್ಳಬಹುದು ಎಂದು ವೋಡಾಫೋನ್‌ ಇಂಡಿಯಾ ಇದರ ಚೀಫ್ ಕಮರ್ಷಿಯಲ್‌ ಆಫೀಸರ್‌ ಸಂದೀಪ್‌ ಕಟಾರಿಯಾ ಹೇಳಿದ್ದಾರೆ.

ಗ್ರಾಹಕರು ಕೇವಲ 7 ರೂ.ಗೆ ವೋಡಾಫೋನ್‌ನಿಂದ ವೋಡಾಫೋನಿಗೆ ಅನ್‌ಲಿಮಿಟೆಡ್‌ ಲೋಕಲ್‌ ಕಾಲ್‌ಗ‌ಳನ್ನು ಮಾಡಲು ಸೂಪರ್‌ ಅವರ್‌ ಪ್ಯಾಕ್‌ ಅನ್ನು ಖರೀದಿಸಬಹುದಾಗಿದೆ ಎಂದವರು ಹೇಳಿದ್ದಾರೆ.

16 ರೂ.ಗಳ ಆರಂಭಿಕ ದರದೊಂದಿಗೆ ಒಂದು ತಾಸಿನ 4ಜಿ/3ಜಿ ಅನ್‌ಲಿಮಿಟೆಡ್‌ ಡಾಟಾ ಬಳಕೆಯನ್ನು ಪ್ರೀಪೇಡ್‌ ಗ್ರಾಹಕರು ಜನವರಿ 9ರ ಸೋಮವಾರದಿಂದ ಎಲ್ಲ ಸರ್ಕಲ್‌ಗ‌ಳಲ್ಲಿ  ಪಡೆಯಬಹುದಾಗಿದೆ. ಇಂದು ಶನಿವಾರ ಜ.7ರಂದು ಈ ಯೋಜನೆಯನ್ನು ಆರಂಭಿಸಲಾಗುತ್ತಿದೆ. ಆದರೆ ದರಗಳು ವಲಯದಿಂದ ವಲಯಕ್ಕೆ ಸ್ವಲ್ಪ ಮಟ್ಟಿನ ವ್ಯತ್ಯಾಸ ಹೊಂದಿರುತ್ತವೆ ಎಂದು ಸಂದೀಪ್‌ ಹೇಳಿದ್ದಾರೆ.

ಹಾಗಿದ್ದರೂ ಈ ಕೊಡುಗೆ ಬಿಹಾರ-ಜಾರ್ಖಂಡ್‌, ಮಧ್ಯಪ್ರದೇಶ-ಛತ್ತೀಸ್‌ಗಢ, ಪಂಜಾಬ್‌, ಹಿಮಾಚಲ ಪ್ರದೇಶ, ಜಮ್ಮು ಮತ್ತು ಕಾಶ್ಮೀರ ಹಾಗೂ ಆಂಧ್ರಪ್ರದೇಶ-ತೆಲಂಗಾಣಗಳಲ್ಲಿ ಲಭ್ಯವಿರುವುದಿಲ್ಲ. 

ಈ ಯೋಜನೆಯಡಿ 2ಜಿ ಗ್ರಾಹಕರು ಕೇವಲ 5 ರೂ.ಗೆ ಅನ್‌ಲಿಮಿಟೆಡ್‌ ಡಾಟಾ ಪಡೆಯಬಹುದಾಗಿದೆ. ಅಂತೆಯೇ ಗ್ರಾಹಕರು ವಾಯ್ಸ ಮತ್ತು ಡಾಟಾ ಪ್ಯಾಕ್‌ಗಳ ಅಪರಿಮಿತ ಮರು ಖರೀದಿಯನ್ನು ಮಾಡಬಹುದಾಗಿದೆ. 

ಅನ್‌ಲಿಮಿಟೆಡ್‌ ಡಾಟಾ ಆಫ‌ರನ್ನು ಗ್ರಾಹಕರು ವೈವಿಧ್ಯಮ ವಿಡಿಯೋಗಳು ಹಾಗೂ ಸಿನೇಮಾಗಳನ್ನು ವೋಡಾಫೋನ್‌ ಪ್ಲೇಯಲ್ಲಿ ವೀಕ್ಷಿಸಲು ಬಳಸಬಹುದಾಗಿದೆ. ಇದರ ಸಬ್‌ಸ್ಕ್ರಿಪ್‌ಶನ್‌ 2017ರ ಮಾರ್ಚ್‌ 31ರ ವರೆಗೆ ಉಚಿತವಾಗಿರುತ್ತದೆ ಎಂದು ಸಂದೀಪ್‌ ಹೇಳಿದರು. 

ಟಾಪ್ ನ್ಯೂಸ್

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

10

Mangaluru: ಗುತ್ತಿಗೆದಾರ ಸಚಿನ್‌ ಪ್ರಕರಣ; ಪ್ರಿಯಾಂಕ್‌ ಖರ್ಗೆ ರಾಜೀನಾಮೆಗೆ ಬಿಜೆಪಿ ಆಗ್ರಹ

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Court Notice: 2002ರ ಹ*ತ್ಯೆ ಪ್ರಕರಣ: ಡೇರಾ ಸೌಧ ಮುಖ್ಯಸ್ಥ ಗುರ್ಮೀತ್‌ಗೆ ನೋಟಿಸ್‌

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

Madikeri: ಬೈಕ್‍ನಲ್ಲಿ ತೆರಳುತ್ತಿದ್ದ ವೇಳೆ ಕಾಡಾನೆ ದಾಳಿ; ಇಬ್ಬರಿಗೆ ಗಾಯ

ಅಪರಿಚಿತ ವಾಹನ ಡಿಕ್ಕಿ : ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri ಅಪರಿಚಿತ ವಾಹನ ಡಿಕ್ಕಿ: ಚಿಕಿತ್ಸೆ ಫ‌ಲಿಸದೆ ವ್ಯಕ್ತಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Madikeri: ಲಾರಿಯಿಂದ ಹಾರಿದ ಚಾಲಕ: ಚಕ್ರದಡಿಗೆ ಸಿಲುಕಿ ಸಾವು

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ

Vande Bharat Sleeper Train: ಪರೀಕ್ಷಾರ್ಥ ಓಡಾಟದಲ್ಲಿ ಗಂಟೆಗೆ 180 ಕಿ.ಮೀ ವೇಗ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

2024ರಲ್ಲಿ ಆಟೋ ಮೊಬೈಲ್‌ ಕ್ಷೇತ್ರಕ್ಕೆ ಲಾಭ: ದಾಖಲೆ ಮಾರಾಟ

Sensex-High

Share Market: ಹೊಸ ವರ್ಷದ ಮೊದಲ ದಿನ 368 ಅಂಕ ಏರಿದ ಸೆನ್ಸೆಕ್ಸ್‌

Rule Changes: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ

New Year 2025: ಜಿಎಸ್‌ಟಿ, ಎಲ್‌ಪಿಜಿ, ಯುಪಿಐ..: ಜನವರಿ 1 ರಿಂದ ಇದೆಲ್ಲಾ ನಿಯಮ ಬದಲಾವಣೆ

GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ

GST on Sale: ಹಳೆ ಕಾರು ಮಾರಾಟ: ಲಾಭಕ್ಕೆ ಮಾತ್ರ ಜಿಎಸ್‌ಟಿ

IRCTC: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

IRCTC Down: ತಾಂತ್ರಿಕ ದೋಷ- ರೈಲು ಟಿಕೆಟ್‌ ಬುಕ್ಕಿಂಗ್‌ ಸಮಸ್ಯೆ-ಪ್ರಯಾಣಿಕರ ಆಕ್ರೋಶ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

Hunsur: ಆಕಸ್ಮಿಕ ವಿದ್ಯುತ್‌ ತಂತಿ ತಗುಲಿ ಟ್ರ್ಯಾಕ್ಟರ್‌ನಲ್ಲಿದ್ದ ಹುಲ್ಲಿಗೆ ಬೆಂಕಿ 

police

Kasaragod; ಬಂದೂಕು ತೋರಿಸಿ ಹಲ್ಲೆ : ನಾಲ್ವರ ಮೇಲೆ ಕೇಸು

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

Koratagere: ಟಾಟಾ ಏಸ್ ಪಲ್ಟಿ; 15 ವಿದ್ಯಾರ್ಥಿಗಳಿಗೆ ಗಂಭೀರ ಗಾಯ

2

Mulki: ಗಾಂಜಾ ಮಾರಾಟ ಯತ್ನ; ಇಬ್ಬರ ಬಂಧನ

accident

Udupi: ಸ್ಕೂಟರಿಗೆ ಕಾರು ಢಿಕ್ಕಿ; ಇಬ್ಬರಿಗೆ ಗಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.