ಭಾರೀ ಆರ್ಥಿಕ ನಷ್ಟ: ವೋಡಾಫೋನ್ ಇನ್ನು ನೆನಪು ಮಾತ್ರ, ಶೀಘ್ರವೇ ಸೇವೆ ಬಂದ್
Team Udayavani, Oct 31, 2019, 4:27 PM IST
ನವದೆಹಲಿ:ಟೆಲಿಕಾಂ ಇಂಡಸ್ಟ್ರಿ ಈಗಾಗಲೇ ಭಾರೀ ಆರ್ಥಿಕ ಹೊಡೆತಕ್ಕೆ ನಲುಗುತ್ತಿರುವ ನಡುವೆಯೇ ಇದೀಗ ಆರ್ಥಿಕ ನಷ್ಟಕ್ಕೆ ಸಿಲುಕಿರುವ ವೋಡಾಫೋನ್ ಕಂಪನಿ ತನ್ನ ವ್ಯವಹಾರ ಸ್ಥಗಿತಗೊಳಿಸಿ ಭಾರತದಿಂದ ಹೊರಹೋಗುವ ಸಿದ್ಧತೆಯಲ್ಲಿದೆ ಎಂದು ವರದಿಯೊಂದು ತಿಳಿಸಿದೆ.
ಐಎಎನ್ ಎಸ್ ವರದಿಯ ಪ್ರಕಾರ, ವೋಡಾಫೋನ್ ನ ಕಾರ್ಯಾಚರಣೆಯ ವೆಚ್ಚ ಭಾರೀ ಹೊಡೆತ ನೀಡಿದ್ದು, ಈ ಹಿನ್ನೆಲೆಯಲ್ಲಿ ವೋಡಾಫೋನ್ ಯಾವುದೇ ದಿನಗಳಲ್ಲಿಯೂ ತನ್ನ ಕಾರ್ಯ ಸ್ಥಗಿತಗೊಳಿಸಿ ಹೊರ ಹೋಗುವ ಸಾಧ್ಯತೆ ಇದೆ ಎಂದು ಹೇಳಿದೆ.
ಮಾರುಕಟ್ಟೆಯಲ್ಲಿಯೂ ವೋಡಾಫೋನ್ ಬೇಡಿಕೆ ಇಳಿಮುಖವಾಗುತ್ತಿರುವುದರಿಂದ ವೋಡಾಫೋನ್ ಆರ್ಥಿಕ ಸ್ಥಿತಿ ಮೇಲೆ ಭಾರೀ ಪರಿಣಾಮ ಬೀರಿದೆ. ಅಷ್ಟೇ ಅಲ್ಲ ಪ್ರತಿ ತಿಂಗಳು ಲಕ್ಷಾಂತರ ಗ್ರಾಹಕರನ್ನು ಕಂಪನಿ ಕಳೆದುಕೊಳ್ಳುತ್ತಿದೆ ಎಂದು ತಿಳಿಸಿದೆ.
ಈ ವರ್ಷದ ವೋಡಾಫೋನ್ ತ್ರೈಮಾಸಿಕ ವರದಿಯಲ್ಲಿಯೂ ಭಾರೀ ನಷ್ಟ ಅನುಭವಿಸಿರುವುದಾಗಿ ತಿಳಿಸಿತ್ತು. ವೋಡಾಫೋನ್ ಮತ್ತು ಆದಿತ್ತಯ ಬಿರ್ಲಾ ಗ್ರೂಫ್ ಒಡೆತನದ ಐಡಿಯಾ ಸೆಲ್ಯೂಲರ್ ಜತೆ ವಿಲೀನವಾದ ನಂತರ ಕಂಪನಿಯ ಶೇರುಗಳ ಬೆಲೆಯೂ ಕೂಡಾ ತೀವ್ರ ಇಳಿಮುಖ ಕಂಡಿದೆ. 2019ರ ಮೊದಲ ತ್ರೈಮಾಸಿಕದಲ್ಲಿ ವೋಡಾಫೋನ್ ಕಂಪನಿ 4,067.01 ಕೋಟಿಯಷ್ಟು ನಷ್ಟ ಕಂಡಿದ್ದು, ಇದು 2018ರ ಜೂನ್ ಮೊದಲ ತ್ರೈಮಾಸಿಕ(2,757.60 ಕೋಟಿ) ವರದಿಗೆ ಹೋಲಿಸಿದಲ್ಲಿ ದ್ವಿಗುಣವಾಗಿದೆ ಎಂದು ವರದಿ ತಿಳಿಸಿದೆ.
ವೋಡಾಫೋನ್:
ವೋಡಾಫೋನ್ ಗ್ರೂಫ್ ಬ್ರಿಟಿಷ್ ಮಲ್ಟಿನ್ಯಾಶನಲ್ ಟೆಲಿಕಮ್ಯೂನಿಕೇಶನ್ ಕಂಪನಿಯಾಗಿದ್ದು, ಇದರ ಕೇಂದ್ರ ಕಚೇರಿ ಲಂಡನ್ ಮತ್ತು ನ್ಯೂಬುರೈ, ಬೆರ್ಕ್ ಶೈರ್ ನಲ್ಲಿದೆ. ವೋಡಾಫೋನ್ ಏಷ್ಯಾ, ಆಫ್ರಿಕಾ, ಯುರೋಪ್ ನಲ್ಲಿ ಪ್ರಮುಖವಾಗಿ ಕಾರ್ಯಾಚರಿಸುತ್ತಿತ್ತು.
ವೋಡಾಫೋನ್ 4ನೇ ರಾಂಕ್ ನಲ್ಲಿದ್ದು, 2018ರ ವೇಳೆಯಲ್ಲಿ ವೋಡಾಫೋನ್ ಮೊಬೈಲ್ ಗ್ರಾಹಕರ ಸಂಖ್ಯೆ 313 ಮಿಲಿಯನ್.
ವೋಡಾಫೋನ್ ಬರೋಬ್ಬರಿ 25 ದೇಶಗಳಲ್ಲಿ ವೋಡಾಫೋನ್ ನೆಟ್ ವರ್ಕ್ ಕಾರ್ಯಾಚರಿಸುತ್ತಿದ್ದು, ಅಲ್ಲದೇ 47 ದೇಶಗಳ ಜತೆ ಪಾರ್ಟ್ ನರ್ ನೆಟವರ್ಕ್ಸ್ ಹೊಂದಿತ್ತು.
ವೋಡಾಫೋನ್ ಹೆಸರು ಬಂದಿದ್ದು Voice data Fone ನಿಂದ. ಮೊಬೈಲ್ ಫೋನ್ ಮೂಲಕ ಧ್ವನಿ (voice) ಮತ್ತು ಡಾಟಾ ಸೇವೆಗಳನ್ನು ನೀಡುವುದನ್ನು ಪ್ರತಿನಿಧಿಸುವ ನಿಟ್ಟಿನಲ್ಲಿ ವೋಡಾಫೋನ್ ಎಂಬ ಹೆಸರನ್ನು ಕಂಪನಿ ಆಯ್ಕೆ ಮಾಡಿತ್ತು.
ರಾಕಾಲ್ ಎಲೆಕ್ಟ್ರಾನಿಕ್ಸ್ 1982ರಲ್ಲಿ ವೋಡಾಫೋನ್ ಅನ್ನು ಆರಂಭಿಸಿತ್ತು. ರಾಕಾಲ್ ಯುಕೆಯ ಮಿಲಿಟರಿ ರೇಡಿಯೋ ಟೆಕ್ನಾಲಜಿ ತಯಾರಿಸುವ ಅತೀ ದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಯಾಗಿತ್ತು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.