ಇಂದಿನಿಂದ ಏನೇನು ಬದಲಾವಣೆ? ಇಲ್ಲಿದೆ ಕೆಲವೊಂದು ಮಾಹಿತಿ
Team Udayavani, Aug 1, 2022, 6:50 AM IST
ಎನ್‌ಎಸಿಎಚ್ ಲಭ್ಯತೆ:
ವೇತನ, ಪಿಂಚಣಿ, ಲಾಭಾಂಶ, ಬಡ್ಡಿ ಮುಂತಾದವುಗಳ ವರ್ಗಾವಣೆಗೆ ಬ್ಯಾಂಕ್‌ಗಳು ಬಳಸುವಂಥ ದೊಡ್ಡ ಪ್ರಮಾಣದ ಪಾವತಿ ವ್ಯವಸ್ಥೆಯೇ ನ್ಯಾಷನಲ್ ಅಟೋಮೇಟೆಡ್ ಕ್ಲಿಯರಿಂಗ್ ಹೌಸ್(ಎನ್‌ಎಸಿಎಚ್). ಈವರೆಗೆ ಇದು ಬ್ಯಾಂಕ್‌ನ ಕೆಲಸದ ದಿನಗಳಲ್ಲಿ ಮಾತ್ರವೇ ಲಭ್ಯವಿರುತ್ತಿತ್ತು. ಆದರೆ, ಸೋಮವಾರದಿಂದ ವಾರದ ಎಲ್ಲ ದಿನಗಳಲ್ಲೂ ಎನ್‌ಎಸಿಎಚ್ ಲಭ್ಯವಿರಲಿದೆ.
ಎಟಿಎಂ ವಹಿವಾಟು ದುಬಾರಿ:
ಎಟಿಎಂ ಇಂಟರ್‌ಜೇಂಚ್ ಶುಲ್ಕ ಹೆಚ್ಚಳದ ಬಗ್ಗೆ ಜೂನ್‌ನಲ್ಲೇ ಆರ್‌ಬಿಐ ಘೋಷಿಸಿತ್ತು. ಅದರಂತೆ, ಆ.1ರಿಂದ ಇದು ಜಾರಿಯಾಗಲಿದ್ದು, ಎಟಿಎಂ ಕೇಂದ್ರಗಳಲ್ಲಿ ನೀವು ಮಾಡುವ ಹಣಕಾಸು ಹಾಗೂ ಹಣಕಾಸೇತರ ವಹಿವಾಟಿನ ಮೇಲೆ ವಿಧಿಸಲಾಗುವ ಶುಲ್ಕ ಹೆಚ್ಚಳವಾಗಲಿದೆ. ಪ್ರತಿ ಹಣಕಾಸು ವಹಿವಾಟಿಗಿರುವ 15ರೂ. ಶುಲ್ಕವನ್ನು 17ರೂ.ಗೆ, ಹಣಕಾಸೇತರ ವಹಿವಾಟಿನ ಮೇಲೆ ವಿಧಿಸಲಾಗುತ್ತಿರುವ ಶುಲ್ಕವನ್ನು 5ರೂ.ನಿಂದ 6 ರೂ.ಗೆ ಏರಿಕೆ ಮಾಡಲಾಗಿದೆ.
ಅಂಚೆ ಕಚೇರಿ ಶುಲ್ಕ ಪರಿಷ್ಕರಣೆ:
ಭಾರತೀಯ ಅಂಚೆ ಪಾವತಿ ಬ್ಯಾಂಕ್(ಐಪಿಪಿಬಿ)ನಲ್ಲಿ ಖಾತೆ ಹೊಂದಿರುವವರು ಇನ್ನು ಮುಂದೆ ಮನೆ ಬಾಗಿಲಿನ ಸೇವೆಗೆ ಹೆಚ್ಚಿನ ಶುಲ್ಕ ತೆರಬೇಕು. ಈವರೆಗೆ ಮನೆಗೇ ಬಂದು ಸೇವೆ ಒದಗಿಸಿದರೆ ಶುಲ್ಕವಿರಲಿಲ್ಲ. ಇನ್ನು ಮುಂದೆ ಗ್ರಾಹಕರು ಇಂಥ ಸೇವೆಗಳಿಗೆ 20 ರೂ. ಹಾಗೂ ಜಿಎಸ್‌ಟಿಯನ್ನು ಪಾವತಿಸಬೇಕಾಗುತ್ತದೆ.
ಐಸಿಐಸಿಐ ಬ್ಯಾಂಕ್ ಶುಲ್ಕ ಹೆಚ್ಚಳ:
ಖಾಸಗಿ ಬ್ಯಾಂಕ್ ಐಸಿಐಸಿಐ ತನ್ನ ಎಟಿಎಂ ಕೇಂದ್ರಗಳಲ್ಲಿನ ವಹಿವಾಟು ಶುಲ್ಕ ಮತ್ತು ಚೆಕ್ ಬುಕ್ ಶುಲ್ಕವನ್ನು ಹೆಚ್ಚಳ ಮಾಡುವುದಾಗಿ ಘೋಷಿಸಿದೆ. ಆ.1ರಿಂದಲೇ ಇದು ಜಾರಿಯಾಗಲಿದೆ. ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿರುವ ಗ್ರಾಹಕರು ತಿಂಗಳಿಗೆ 4 ಬಾರಿಯಷ್ಟೇ ಉಚಿತವಾಗಿ ಹಣ ವಿತ್‌ಡ್ರಾ ಮಾಡಬಹುದು. ಅದಕ್ಕಿಂತ ಹೆಚ್ಚು ಬಾರಿ ಮಾಡಿದರೆ ಪ್ರತಿ ವಹಿವಾಟಿನ ಮೇಲೆ 150 ರೂ. ಶುಲ್ಕ ವಿಧಿಸಲಾಗುತ್ತದೆ.
ಎಲ್‌ಪಿಜಿ ಸಿಲಿಂಡರ್ ದರ ಪರಿಷ್ಕರಣೆ
ಪ್ರತಿ ತಿಂಗಳ ಮೊದಲ ದಿನ ಅಡುಗೆ ಅನಿಲ ಸಿಲಿಂಡರ್ ದರ ಪರಿಷ್ಕರಣೆಯಾಗುತ್ತದೆ. ಅದರಂತೆ, ಸೋಮವಾರ ಎಲ್‌ಪಿಜಿ ಸಿಲಿಂಡರ್ ರೇಟ್ ಏರಿಕೆಯಾಗಲೂಬಹುದು, ಇಳಿಕೆ ಆಗಲೂಬಹುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nirmala Sitharaman: ಬ್ಯಾಂಕುಗಳು ಬಡ್ಡಿದರ ಕೈಗೆಟಕುವಂತೆ ಕ್ರಮ ಕೈಗೊಳ್ಳಬೇಕು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.