ನಿಮಗೆ ಗೊತ್ತೇ ? ಜೂನ್ 30ರಿಂದ ವಾಟ್ಸಾಪ್ ಈ ಫೋನ್ಗಳಲ್ಲಿ ಅಲಭ್ಯ
Team Udayavani, Jun 13, 2017, 7:41 PM IST
ಹೊಸದಿಲ್ಲಿ : ವಾಟ್ಸಾಪ್ ಬಳಕೆದಾರರೇ ಗಮನಿಸಿ – ಇದೇ ಜೂನ್ 30ರಿಂದ ವಾಟ್ಸಾಪ್ ಸೇವೆ ಕೆಲವೊಂದು ಫೋನ್ಗಳಲ್ಲಿ ಲಭ್ಯವಿರುವುದಿಲ್ಲ; ಒಂದೊಮ್ಮೆ ನೀವು ಅಂತಹ ಫೋನ್ಗಳನ್ನು ಬಳಸುವವರಾಗಿದ್ದರೆ, ಬೇರೊಂದು ಫೋನ್ ಖರೀದಿಸುವುದೇ ಒಳಿತು.
ಇದೇ ಜೂನ್ 30ರಿಂದ ಈ ಕೆಳಗಿನ ಫೋನ್ಗಳಿಗೆ ತನ್ನ ಸೇವೆ ಲಭ್ಯವಿರುವುದಿಲ್ಲ ಎಂದು ವಾಟ್ಸಾಪ್ ಹೇಳಿದೆ :
1. ಬ್ಲಾಕ್ ಬೆರಿ ಓಎಸ್
2. ಬ್ಲಾಕ್ ಬೆರಿ 10
3. ನೋಕಿಯಾ ಎಸ್ 40
4. ನೋಕಿಯಾ ಸಿಂಬಿಯಾನ್ ಎಸ್ 60
ವಾಟ್ಸಾಪ್ ಪ್ರಕಾರ “ಈ ಮೇಲಿನ ಫೋನುಗಳು ಭವಿಷ್ಯದಲ್ಲಿ ನಾವು ವಿಸ್ತರಿಸಬಯಸುವ ನಮ್ಮ ಸೇವೆಯ ಗುಣ ಲಕ್ಷಣಗಳನ್ನು ತಾಳಿಕೊಳ್ಳುವ ಸಾಮರ್ಥ್ಯವನ್ನು ಹೊಂದಿರುವುದಿಲ್ಲ; ಆದುದರಿಂದ ಬಾಧಿತ ಗ್ರಾಹಕರು ಹೊಸ ಓಎಸ್ ಆವೃತ್ತಿಗೆ upgrade ಮಾಡಿಕೊಳ್ಳಬೇಕೆಂದು ನಾವು ಶಿಫಾರಸು ಮಾಡುತ್ತೇವೆ ಅಥವಾ ಓಎಸ್ 2.3.3+, ಐಓಎಸ್ 7+ ನಲ್ಲಿ ಕಾರ್ಯನಿರ್ವಹಿಸುವ ಐಫೋನ್ ಅಥವಾ ವಿಂಡೋಸ್ ಫೋನ್ 8+ಗೆ ವರ್ಗಾಯಿಸಿಕೊಳ್ಳಬೇಕೆಂದು ಸೂಚಿಸುತ್ತೇವೆ’.
“ಈ ಮೇಲಿನ ಉಪಕರಣಗಳನ್ನು ನೀವು ಹೊಂದಿದಾಗ ಅದರಲ್ಲಿ ವಾಟ್ಸಾಪ್ ಇನ್ಸ್ಟಾಲ್ ಮಾಡಿಕೊಳ್ಳಬೇಕು ಮತ್ತು ನಿಮ್ಮ ಹೊಸ ಉಪಕರಣದಲ್ಲಿ ನಿಮ್ಮ ಫೋನ್ ನಂಬರನ್ನು ಪರಿಶೀಲಿಸಿಕೊಳ್ಳಬೇಕು. ನೆನಪಿಡಿ – ವಾಟ್ಸಾಪ್ ಅನ್ನು ಒಂದು ಉಪಕರಣದಲ್ಲಿ, ಒಂದು ಬಾರಿಗೆ, ಒಂದು ಫೋನ್ ನಂಬರ್ನಲ್ಲಿ ಮಾತ್ರವೇ ಕ್ರಿಯಾಶೀಲಗೊಳಿಸಬಹುದು.’
“ಆದರೆ ನಿಮ್ಮ ಚ್ಯಾಟ್ ಹಿಸ್ಟರಿಯನ್ನು ಉಭಯ ವೇದಿಕೆಗಳಿಗೆ ವರ್ಗಾಯಿಸಿಕೊಳ್ಳುವುದಕ್ಕೆ ಅವಕಾಶ ಇರುವುದಿಲ್ಲ. ಆದರೆ ನಿಮ್ಮ ಚಾಟ್ ಹಿಸ್ಟರಿಯನ್ನು, ಜೋಡಿಸಲ್ಪಟ್ಟ ಇ-ಮೇಲ್ಗೆ ವರ್ಗಾಯಿಸುವ ಆಯ್ಕೆಯನ್ನು ವಾಟ್ಸಾಪ್ ಒದಗಿಸುತ್ತದೆ.’
2017ರ ಆರಂಭದಿಂದಲೇ ವಾಟ್ಸಾಪ್ ಸೇವೆ ದೊರಕದ ಫೋನ್ಗಳ ಈ ರೀತಿಯಾಗಿವೆ : 1. 2.3.3.ಕ್ಕಿಂತ ಹಳೆಯದಾದ ಆಂಡ್ರಾಯ್ಡ ಆವೃತ್ತಿ; ವಿಂಡೋಸ್ ಫೋನ್ 7, ಐಫೋನ್ 3ಜಿಎಸ್/ಐಓಎಸ್6.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
MUST WATCH
ಹೊಸ ಸೇರ್ಪಡೆ
Waqf Issue: ಮೂರು ತಂಡ ರಚನೆಗೆ ಅವ್ವ-ಅಪ್ಪ ಏನೂ ಇಲ್ಲ: ಬಸನಗೌಡ ಪಾಟೀಲ್ ಯತ್ನಾಳ್ ಆಕ್ಷೇಪ
GKVK Research; ಇನ್ನು ಜೇನು ಗೂಡು ಕಟ್ಟಬೇಕಿಲ್ಲ: 3ಡಿ ಗೂಡು ಆವಿಷ್ಕಾರ!
Court Judgement: ತಪ್ಪಿತಸ್ಥ ಎಂದಾದರೆ ಮಾತ್ರ ರಾಜೀನಾಮೆ ನೀಡಬೇಕು: ಜಿ.ಟಿ.ದೇವೇಗೌಡ
Daily Horoscope: ಈ ರಾಶಿಯವರಿಗಿಂದು ದಿನವಿಡೀ ಮಿಶ್ರ ಫಲಗಳ ಅನುಭವ
Average Income: ದೇಶದ ಗ್ರಾಮ ಪಂಚಾಯ್ತಿ ಆದಾಯ ಕೇವಲ 59 ಮಾತ್ರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.