ಟಿಡಿಎಸ್ ಯಾಕೆ ಕತ್ತರಿಸಲಿಲ್ಲ? ಮಾಹಿತಿ ನೀಡಿ
ಟಿಡಿಎಸ್ ಪತ್ರಕವನ್ನು ತಿದ್ದುಪಡಿ ಮಾಡಿದ ಆದಾಯ ತೆರಿಗೆ ಇಲಾಖೆ
Team Udayavani, Jul 6, 2020, 9:25 AM IST
ನವದೆಹಲಿ: ಕೇಂದ್ರ ಆದಾಯ ತೆರಿಗೆ ಇಲಾಖೆ, ಟಿಡಿಎಸ್ (ಟ್ಯಾಕ್ಸ್ ಡಿಡಕ್ಟೆಡ್ ಆ್ಯಟ್ ಸೋರ್ಸ್) ಪತ್ರಕವನ್ನು (ಫಾರ್ಮ್) ತಿದ್ದುಪಡಿ ಮಾಡಿದೆ. ಇನ್ನು ಮುಂದೆ ಟಿಡಿಎಸ್ ಅನ್ನು ಕತ್ತರಿಸದಿದ್ದರೆ ಯಾಕೆ ಕತ್ತರಿಸಲಿಲ್ಲ ಎಂಬ ಮಾಹಿತಿಯನ್ನು ಸಂಬಂಧಪಟ್ಟ ವ್ಯಕ್ತಿ ನಮೂದಿಸಬೇಕು. ತಿದ್ದುಪಡಿಯಾದ ಪತ್ರಕದ ಪ್ರಕಾರ, ತಮ್ಮಿಂದ 1 ಕೋಟಿ ರೂ.ಗಿಂತ ಅಧಿಕ ನಗದು ಪಡೆದರೆ, ಅಲ್ಲಿ ಟಿಡಿಎಸ್ ಕತ್ತರಿಸಲ್ಪಟ್ಟಿದೆ ಎಂಬ ಮಾಹಿತಿಯನ್ನು ಬ್ಯಾಂಕ್‌ಗಳು ನೀಡಬೇಕು! ಒಟ್ಟಾರೆ ಟಿಡಿಎಸ್ ಪತ್ರಕವನ್ನು ಸಮಗ್ರಗೊಳಿಸುವತ್ತ ಕೇಂದ್ರ ಹೆಜ್ಜೆಹಾಕಿದೆ ಎಂದು ತಜ್ಞರು ಹೇಳಿದ್ದಾರೆ.
ಸಿಬಿಡಿಟಿ (ಕೇಂದ್ರ ನೇರ ತೆರಿಗೆ ಮಂಡಳಿ) ಅಧಿಸೂಚನೆಯೊಂದನ್ನು ಹೊರಡಿಸಿ ಆದಾಯ ತೆರಿಗೆ ನಿಯಮಗಳಿಗೆ ತಿದ್ದುಪಡಿ ತಂದಿದೆ. ಇದರ ಮೂಲಕ ಅಂತರ್ಜಾಲ ಆಧಾರಿತ ಮಾರಾಟ ಸಂಸ್ಥೆಗಳ ಮೇಲಿನ (ಇ-ಕಾಮರ್ಸ್) ಟಿಡಿಎಸ್, ಮ್ಯೂಚ್ಯುವಲ್ ಫಂಡ್‌ಗಳು ಮತ್ತು ಉದ್ದಿಮೆ ಟ್ರಸ್ಟ್‌ಗಳಿಂದ ವಿತರಣೆಯಾದ ಲಾಭಾಂಶ, ನಗದು ಹಿಂತೆಗೆತ, ವೃತ್ತಿಪರ ಶುಲ್ಕ ಮತ್ತು ಬಡ್ಡಿ ಇವೆನ್ನೆಲ್ಲ ಆದಾಯ ತೆರಿಗೆ ವ್ಯಾಪ್ತಿಗೆ ತರಲು ತೀರ್ಮಾನಿಸಲಾಗಿದೆ. ಕೇಂದ್ರಸರ್ಕಾರ 26 ಕ್ಯೂ ಮತ್ತು 27 ಕ್ಯೂ ಪತ್ರಕವನ್ನೂ ತಿದ್ದುಪಡಿ ಮಾಡಿದೆ. ಈ ಪತ್ರಕಗಳಲ್ಲಿ ಟಿಡಿಎಸ್ ಕಡಿತಗೊಳಿಸಲ್ಪಟ್ಟ ಹಾಗೆಯೇ ಠೇವಣಿ ಇಡಲ್ಪಟ್ಟ ಮಾಹಿತಿಯಿರುತ್ತದೆ.
ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ದುಬಾರಿ
ನವದೆಹಲಿ: ಕೇಂದ್ರಸರ್ಕಾರ ಇತ್ತೀಚೆಗೆ ಮ್ಯೂಚುವಲ್ ಫಂಡ್ ಗಳ ಮೇಲೆ ಶೇ.0.005 ಮುದ್ರಾ ತೆರಿಗೆಯನ್ನು (ಸ್ಟಾಂಪ್ ಡ್ನೂಟಿ) ನಿಗದಿಪಡಿಸಿದೆ. ಇದರಿಂದ ಮುಂದಿನದಿನಗಳಲ್ಲಿ ಎಲ್ಲ ರೀತಿಯ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡಿಕೆ ಮಾಡುವುದು ದುಬಾರಿಯಾಗಲಿದೆ. ವಿವಿಧ ರೀತಿಯ ಮ್ಯೂಚುವಲ್ ಫಂಡ್
ಯೋಜನೆಗಳಾದ ವ್ಯವಸ್ಥಿತ ಹೂಡಿಕೆ ಯೋಜನೆ (ಎಸ್‌ಐಪಿ), ವ್ಯವಸ್ಥಿತ ವರ್ಗಾವಣೆ ಯೋಜನೆ (ಎಸ್‌ಟಿಪಿ)ಗಳು ವೆಚ್ಚವನ್ನು ಹೆಚ್ಚಿಸಲಿವೆ. ಅಷ್ಟು ಮಾತ್ರವಲ್ಲ ಈಕ್ವಿಟಿ ಸಂಪರ್ಕಿತ ಉಳಿತಾಯ ಯೋಜನೆ (ಇಎಲ್‌ಎಸ್‌ಎಸ್), ಯುಲಿಪ್, ರಾಷ್ಟ್ರೀಯ ಪಿಂಚಣಿ ಯೋಜನೆ (ಎನ್‌ಪಿಎಸ್), ಭವಿಷ್ಯ ನಿಧಿ (ಪಿಎಫ್) ಗಳಲ್ಲಿ ಹೂಡಿಕೆ ಕೂಡ ದುಬಾರಿಯಾಗಲಿದೆ. ಈ ಎಲ್ಲವನ್ನೂ ಡೆಟ್ ಆಥವಾ ಈಕ್ವಿಟಿ ಮ್ಯೂಚುವಲ್ ಫಂಡ್‌ಗಳಲ್ಲಿ ಹೂಡುವುದರಿಂದ, ಈ ರೀತಿಯ ವ್ಯವಹಾರ ಮಾಡುವಾಗ ವೆಚ್ಚ ಹೆಚ್ಚಾಗುವುದು ಅನಿವಾರ್ಯ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Jio domain ಗಲಾಟೆ ನಡುವೆಯೇ “ಜಿಯೋಸ್ಟಾರ್’ ಹೊಸ ವೆಬ್‌ಸೈಟ್ ಪ್ರತ್ಯಕ್ಷ!
Haldiram ಭುಜಿಯಾವಾಲಾದಲ್ಲಿ ₹235 ಕೋಟಿ ಹೂಡಿಕೆ ಮಾಡಿದ ಭಾರತ್ ವ್ಯಾಲ್ಯು ಫಂಡ್
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
MUST WATCH
ಹೊಸ ಸೇರ್ಪಡೆ
BGT 2024-25: ಆಸೀಸ್ ನಲ್ಲಿ ಲಯಕ್ಕೆ ಮರಳಿದ ವಿರಾಟ್ ಕೊಹ್ಲಿ
Stock Market: ಷೇರುಪೇಟೆ ಸೂಚ್ಯಂಕ 500ಕ್ಕೂ ಅಧಿಕ ಅಂಕ ಕುಸಿತ; 23,400ಕ್ಕೆ ಇಳಿದ ನಿಫ್ಟಿ
Yadagiri: ಸ್ನಾನಕ್ಕೆಂದು ತೆರಳಿದ ಇಬ್ಬರು ಬಾಲಕರು ನೀರುಪಾಲು
Baaghi 4: ಟೈಗರ್ ಶ್ರಾಫ್ ʼಬಾಘಿ – 4ʼ ಗೆ ಕನ್ನಡದ ಎ.ಹರ್ಷ ಆ್ಯಕ್ಷನ್ ಕಟ್; ಪೋಸ್ಟರ್ ಔಟ್
Belagavi ವಿಮಾನ ನಿಲ್ದಾಣ ಕಂಪೌಂಡ್ ಬಳಿ ಯುವಕನ ಹತ್ಯೆ; ಕಾರಣ ನಿಗೂಢ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.