ತನ್ನ ಕಿರಿಯ ಉದ್ಯೋಗಿಗಳಿಗೆ ಒಂದೇ ವರ್ಷದಲ್ಲಿ ಎರಡು ಬಾರಿ ವೇತನ ಹೆಚ್ಚು ಮಾಡಿದ ವಿಪ್ರೊ..!
ಸಹಾಯಕ ವ್ಯವಸ್ಥಾಪಕ ಹಾಗೂ ಅದಕ್ಕಿಂತ ಕಿರಿಯ ಹುದ್ದೆಗಳಲ್ಲಿ ಇರುವವರಿಗೆ ಮೆರಿಟ್ ಆಧಾರದಲ್ಲಿ ಹೆಚ್ಚುವರಿ ವೇತನ
Team Udayavani, Jun 19, 2021, 3:03 PM IST
ನವ ದೆಹಲಿ : ಕೋವಿಡ್ ಮಹಾಮಾರಿ ಎಲ್ಲಾ ವರ್ಗಗಳಿಗೆ ಭಾರಿ ಪ್ರಮಾಣದಲ್ಲಿ ಹೊಡೆತ ಕೊಟ್ಟಿದೆ. ಉದ್ಯಮ ಕ್ಷೇತ್ರಗಳು ಅನುಭವಿಸಿದಷ್ಟು ಸಂಕಷ್ಟ ಮತ್ತೆ ಯಾವ ಕ್ಷೇತ್ರಗಳು ಅನುಭವಿಸಿಲ್ಲ.
ವ್ಯಾಪಾರ ವಹಿವಾಟುಗಳು, ಉತ್ಪಾದನೆಗಳು ಕುಂಟಿತಗೊಂಡಿವೆ. ಇಂತಹ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ವರಪ್ರೋ ತನ್ನ ಉದ್ಯೋಗಿಗಳಿಗೆ ಹೆಚ್ಚುವರಿ ವೇತನವನ್ನು ನೀಡಲು ಮುಂದಾಗಿದೆ.
ಹೌದು, ಐ.ಟಿ ಕ್ಷೇತ್ರಗಳಲ್ಲಿಯೇ ದೈತ್ಯ ಸಂಸ್ಥೆ ಎಂದು ಕರೆಸಿಕೊಳ್ಳುವ ವಿಪ್ರೊ ತನ್ನ ಕಿರಿಯ ಶ್ರೇಣಿಯ ಉದ್ಯೋಗಿಗಳಿಗೆ ಹೆಚ್ಚುವರಿ ವೇತನವನ್ನು ನೀಡಲಿದೆ ಎಂದು ಘೋಷಿಸಿದೆ.
ಇದನ್ನೂ ಓದಿ : ಐತಿಹಾಸಿಕ ಟೆಸ್ಟ್ ಫೈನಲ್: ಕೃಪೆ ತೋರಿದ ವರುಣ, ಟಾಸ್ ಗೆದ್ದ ಕೇನ್ ವಿಲಿಯಮ್ಸನ್
ಬರುವ ಸೆಪ್ಟೆಂಬರ್ 1ರಿಂದ ಈ ನಿಯಮ ಜಾರಿಗೆ ಬರುವಂತೆ ವೇತನ ಹೆಚ್ಚಿಸಲಿದೆ ಎಂದು ಸಂಸ್ಥೆ ತನ್ನ ಪ್ರಕಟಣೆಯಲ್ಲಿ ಹೇಳಿದೆ.
ಇನ್ನು, “ಸಹಾಯಕ ವ್ಯವಸ್ಥಾಪಕ ಹಾಗೂ ಅದಕ್ಕಿಂತ ಕಿರಿಯ ಹುದ್ದೆಗಳಲ್ಲಿ ಇರುವವರಿಗೆ ಮೆರಿಟ್ ಆಧಾರದಲ್ಲಿ ಹೆಚ್ಚುವರಿ ವೇತನವನ್ನು ನೀಡಲು ಸಂಸ್ಥೆ ಮುಯಂದಾಗಿದ್ದು, ಗ್ರಾಹಕರ ಪಾಲಿಗಿದು ಕೋವಿಡ್ ಬಿಕ್ಕಟ್ಟಿನ ಸಂದರ್ಭದಲ್ಲಿಯೂ ಸೌಭಾಗ್ಯವೇ ಸರಿ.
ಈ ಕಿರಿಯ ಹುದ್ದೆಗಳಲ್ಲಿ ಸಂಸ್ಥೆಯಲ್ಲಿ ದುಡಿಯುತ್ತಿರುವ ಅರ್ಹರಿಗೆ ಜನವರಿಯಲ್ಲಿಯೂ ಕೂಡ ಸಂಸ್ಥೆ ಹೆಚ್ಚುವರಿ ವೇತನವನ್ನು ನೀಡಿತ್ತು. ಈಗ ಮತ್ತೆ ಒಂದೇ ವರ್ಷದಲ್ಲಿ ತನ್ನ ಕಿರಿಯ ಉದ್ಯೋಗಿಗಳಿಗೆ ವೇತನವನ್ನು ಹೆಚ್ಚು ಮಾಡಲಿದೆ ಎಂದು ತಿಳಿಸಿದೆ.
ಸೆಪ್ಟೆಂಬರ್ 1 ರಿಂದ ಜಾರಿಗೆ ಬರಲಿರುವ ಈ ಹೆಚ್ಚುವರಿ ವೇತನ ಈ ಕ್ಯಾಲೆಂಡರ್ ವರ್ಷದಲ್ಲಿನ ಎರಡನೆಯ ವೇತನ ಹೆಚ್ಚಳಎಂದು ಸಂಸ್ಥೆಯು ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಇದನ್ನೂ ಓದಿ : ಬಹಿರಂಗ ಹೇಳಿಕೆ ನೀಡುವವರ ವಿರುದ್ಧ ಶಿಸ್ತು ಕ್ರಮಕ್ಕೆ ಅರುಣ್ ಸಿಂಗ್ ಸೂಚನೆ: ಅಶೋಕ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.