ಭಾರತಕ್ಕೂ ಬರಲಿದೆ ಶಿಯೋಮಿ ಸ್ಮಾರ್ಟ್ ವಾಚ್
Team Udayavani, Nov 6, 2019, 3:40 PM IST
ಶಿಯೋಮಿ ಕಂಪನಿ ಹೊಸದಾಗಿ ಮಾರುಕಟ್ಟೆಗೆ ಸ್ಮಾರ್ಟ್ ವಾಚ್ ಒಂದನ್ನು ಪರಿಚಯಿಸಿದೆ. ಚೀನದ ಬೀಜಿಂಗ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ತನ್ನ ಮೊದಲ ಸ್ಮಾರ್ಟ್ ವಾಚ್ ಅನ್ನು ಅನಾವರಣಗೊಳಿಸಿದ್ದು, ಅಲ್ಯೂಮಿನಿಯಂ ಅಮ್ಲೆàಡ್ ಫ್ರೆàಮ್ ಜತೆಗೆ ವಿಭಿನ್ನ ರೀತಿಯಲ್ಲಿ ವಿನ್ಯಾಸ ಮಾಡಿದೆ.
ಮಿ ವಾಚ್ ಎಂದು ನಾಮಕರಣ
ಈ ಸ್ಮಾರ್ಟ್ ವಾಚ್‌ಗೆ ಮಿ ವಾಚ್ ಎಂದು ಹೆಸರಿಡಲಾಗಿದ್ದು, ಹೊಸ ಮಿ ಸಿಸಿ 9 ಪೊ› ಮತ್ತು ಮಿ ಟಿವಿ 5 ಸರಣಿಯ ಜತೆಗೆ ಈ ಮಿ ವಾಚ್‌ನ್ನು ಅನಾವರಣ ಮಾಡಿದೆ.
1.78 ಇಂಚಿನ ಡಿಸ್‌ಪ್ಲೇ
1.78 ಇಂಚಿನ ಅಲ್ಯೂಮಿನಿಯಂ ಆ್ಯಮೋಲ್ಡ್ ಹೊಂದಿದ್ದು, 3100 ಎಸ್‌ಒಸಿ ಕಾಲ್ಕಮ್ ಸ್ನಾಪ್‌ಡ್ರಾಗನ್ ಪ್ರೊಸೆಸರ್ ಅನ್ನು ಒಳಗೊಂಡಿದೆ.
ಸೆರಾಮಿಕ್ ಬ್ಯಾಕ್ ಕವರ್
ಮಿ ವಾಚ್‌ನ ವಿನ್ಯಾಸ ಆಕರ್ಷಣೀಯವಾಗಿದ್ದು, ಸೆರಾಮಿಕ್ ಬ್ಯಾಕ್ ಕವರ್, ಗೊರಿÇÉಾ ಗ್ಲಾಸ್‌ನ ವಿನ್ಯಾಸ ಇದೆ.
ಬೆಲೆ ಎಷ್ಟು ?
ಶಿಯೋಮಿಯ ಹಂಚಿಕೊಂಡ ಮಾಹಿತಿ ಪ್ರಕಾರ ಮಿ ವಾಚ್‌ಗೆ ಸುಮಾರು 13,000 ರೂ. ಬೆಲೆ ನಿಗದಿಪಡಿಸಲಾಗಿದೆ. ಪ್ರೀಮಿಯಂ ವಾಚ್‌ನ ಆವೃತ್ತಿಗೆ ಸುಮಾರು 20,000 ರೂ. ಬೆಲೆ ನಿಗದಿಪಡಿಸಲಾಗಿದೆ.
ನ.11 ರಂದು ಮಾರುಕಟ್ಟೆಗೆ
ಈ ಆಧುನಿಕ ಸ್ಮಾರ್ಟ್ ವಾಚ್ ನವೆಂಬರ್ 11 ರಂದು ಭಾರತದ ಮಾರುಕಟ್ಟೆಗೆ ಬರಲಿದ್ದು, ಸಿಲ್ವರ್ ಹಾಗೂ ಕಪ್ಪು ಬಣ್ಣದಲ್ಲಿ ಲಭ್ಯವಿರಲಿದೆ. .
ವಿಶೇಷಗಳೇನು :
ಸಿಮ್‌ಗಳನ್ನು ಹಾಕಬಹುದು
ಇ-ಸಿಮ್ ಸಿಸ್ಟಮ್ ಮೂಲಕ ಡ್ಯುಯಲ್ ಸೆಲ್ಯುಲಾರ್ ನೆಟ್‌ವರ್ಕ್ ತಂತ್ರಜ್ಞಾನವನ್ನು ಇದು ಒಳಗೊಂಡಿದ್ದು, ವೈ-ಫೈ , ಬ್ಲೂಟೂತ್, ಎನ್‌ಎಫ್ಸಿ ಹಾಗೂ ಗೃಹಪಯೋಗಿ ಎಲೆಕ್ಟ್ರಾನಿಕ್ ವಸ್ತುಗಳನ್ನು ಈ ವಾಚ್‌ನ ಮೂಲಕ ನಿಯಂತ್ರಿಸ ಬಹುದಾಗಿದೆ.
570 ಎಮ್ಎಹೆಚ್ ಬ್ಯಾಟರಿ ಸಾಮರ್ಥ್ಯ
570 ಎಮ್ಎಹೆಚ್ ಬ್ಯಾಟರಿಯ ಸಾಮರ್ಥ್ಯವನ್ನು ಮಿ ವಾಚ್ ಹೊಂದಿದ್ದು, ಒಮ್ಮೆ ರಿಚಾರ್ಜ್ ಮಾಡಿದ್ದರೆ ಸುಮಾರು 36 ಗಂಟೆಗಳ ಇದನ್ನು ಉಪಯೋಗಿಸಬಹುದು.
ಫಿಟ್ನೆಸ್ ಟ್ರ್ಯಾಕರ್ ಆಗಿಯೂ ಬಳಕೆ
ಮಿ ವಾಚ್ ಅನ್ನು ಫಿಟ್ನೆಸ್ ಟ್ರ್ಯಾಕರ್ ಆಗಿಯೂ ಬಳಸಬಹುದು. ಫಿಟ್ನೆಸ್, ದೈಹಿಕ ಸಾಮರ್ಥ್ಯ, ಒತ್ತಡ ಮಟ್ಟ, ನಿದ್ದೆ, ನಡಿಗೆ, ಓಟ ಎಂಬಿತ್ಯಾದಿ ಮಾಹಿತಿಯನ್ನು ಈ ವಾಚ್ ಕಲೆ ಹಾಕಿ ತಿಳಿಸುತ್ತದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Gold Rates:ಡಾಲರ್ ಬೆಲೆ ಏರಿಕೆ-18k, 22K, 24K, ಇಂದಿನ ಚಿನ್ನದ ಮಾರುಕಟ್ಟೆ ಬೆಲೆ ಎಷ್ಟು?
Explainer: ಉಳಿತಾಯ ಖಾತೆಯಲ್ಲಿ ಎಷ್ಟು ನಗದು ಠೇವಣಿ ಇಡಬಹುದು? ವಾರ್ಷಿಕ ಮಿತಿ ಎಷ್ಟು….
Bengaluru; ಒಂದೇ ದಿನ ಚಿನ್ನದ ಬೆಲೆ 10 ಗ್ರಾಂಗೆ 1,790 ರೂ. ಇಳಿಕೆ
Stock Market: ಟ್ರಂಪ್ ಗೆಲುವಿನ ಎಫೆಕ್ಟ್-ಬಾಂಬೆ ಷೇರುಪೇಟೆ ಸೂಚ್ಯಂಕ 1 ಸಾವಿರ ಅಂಕ ಏರಿಕೆ!
US elections ಎಫೆಕ್ಟ್: ಷೇರುಪೇಟೆ ಸೂಚ್ಯಂಕ 1,300 ಅಂಕ ಕುಸಿತ, 8 ಲಕ್ಷ ಕೋಟಿ ರೂ. ನಷ್ಟ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.