ಹೀಗೆ ಸುಲಭವಾಗಿಯೂ ಕೂಡ ನೀವು ಎಲ್ ಪಿ ಜಿ ಗ್ಯಾಸ್ ಸಿಲಿಂಡರ್ ಬುಕ್ ಮಾಡಬಹುದು..!
Team Udayavani, Jul 25, 2021, 12:13 PM IST
ನವ ದೆಹಲಿ : ಎಲ್ಲವೂ ಡಿಜಿಟಲೀಕರಣ ಆಗುತ್ತಿರುವ ನಡುವೆ ಭೌತಿಕ ವ್ಯವಸ್ಥೆ ಎಲ್ಲವೂ ನಿಧಾನಕ್ಕೆ ಕಡಿಮೆಯಾಗುತ್ತಾ ಬಂದಿದೆ. ಗ್ಯಾಸ್ ಸಿಲಿಂಡರ್ ಗಳನ್ನು ಕೂಡ ಈಗ ಡಿಜಿಟಲ್ ಆಗಿ ಮಾರ್ಪಾಡಾಗಿದೆ.
ಕೇವಲ ಒಂದು ಮಿಸ್ಡ್ ಕಾಲ್ ಹಾಗೂ ವಾಟ್ಸ್ಯಾಪ್ ನೀಡುವ ಮೂಲಕ ನಾವು ಗ್ಯಾಸ್ ಸಿಲಿಂಡರ್ ಗಳನ್ನು ಬುಕ್ ಮಾಡಿಕೊಳ್ಳಬಹುದಾಗಿದೆ. ಹೌದು, ಭಾರತದ ಅತಿದೊಡ್ಡ ಪೆಟ್ರೋಲಿಯಂ ಕಂಪನಿಗಳಾದ ಭಾರತ್ ಗ್ಯಾಸ್, ಇಂಡೇನ್ ಗ್ಯಾಸ್ ಮತ್ತು ಎಚ್ ಪಿ ಗ್ಯಾಸ್ ಗ್ರಾಹಕರಿಗೆ ವಾಟ್ಸಾಪ್ ಮೂಲಕ ಸಿಲಿಂಡರ್ ಗಳನ್ನು ಕಾಯ್ದಿರಿಸುವ ಸೇವೆಯನ್ನು ನೀಡುತ್ತಿದೆ.
ಇದನ್ನೂ ಓದಿ : 39,742 ಹೊಸ ಕೋವಿಡ್ ಸೋಂಕು ಪ್ರಕರಣಗಳು ಪತ್ತೆ; 535 ಸೋಂಕಿತರು ಸಾವು
ಇಂಡೇನ್ ಎಲ್ ಪಿಜಿ ಗ್ರಾಹಕರು ತಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಯಿಂದ 8454955555, ಬಿಪಿಸಿಎಲ್ ಗ್ರಾಹಕರು 7710955555 ಮತ್ತು ಎಚ್ ಪಿ ಗ್ರಾಹಕರು 9493602222 ಗೆ ಮಿಸ್ಡ್ ಕಾಲ್ ನೀಡಬಹುದು. ಮಿಸ್ಡ್ ಕಾಲ್ ನೀಡಿದ ಕೂಡಲೇ ನಿಮ್ಮ ಸಿಲಿಂಡರ್ ಸೆಕೆಂಡುಗಳಲ್ಲಿ ಬುಕ್ ಆಗುತ್ತದೆ.
ವಾಟ್ಸ್ಯಾಪ್ ಮೂಲಕ ಹೇಗೆ ಸಿಲಿಂಡರ್ ಗಳನ್ನು ಬುಕ್ ಮಾಡುವುದು..?
ಇಂಡೇನ್ ಗ್ಯಾಸ್ ಗ್ರಾಹಕರು 7588888824 ಸಂಖ್ಯೆಯ ಮೂಲಕ ಗ್ಯಾಸ್ ಬುಕ್ ಮಾಡಬಹುದು. ಗ್ರಾಹಕರು 7588888824 ನಂಬರ್ ನನ್ನು ಮೊಬೈಲ್ ನಲ್ಲಿ ಸೇವ್ ಮಾಡಿಟ್ಟುಕೊಳ್ಳಬೇಕು.
ವಾಟ್ಸಾಪ್ ತೆರೆಯಿರಿ. ಈಗ ಸೇವ್ ಮಾಡಿರುವ ನಂಬರ್ ನನ್ನು ಓಪನ್ ಮಾಡಿ. ನೋಂದಾಯಿತ ಸಂಖ್ಯೆಯಿಂದ BOOK ಅಥವಾ REFILL# ಎಂದು ಟೈಪ್ ಮಾಡುವ ಮೂಲಕ ಮೆಸೇಜ್ ಕಳುಹಿಸಬೇಕಾಗುತ್ತದೆ.
ತದನಂತರ ಈ ಮೆಸೇಜ್ ಕಳುಸಿದ ನಂತರ ನಿಮ್ಮ ಸಿಲಿಂಡರ್ ಬುಕ್ ಆಗಿರುವುದು ನಿಮಗೆ ಮೆಸೇಜ್ ಮೂಲಕ ತಿಳಿಸಲಾಗುತ್ತದೆ.
ತದನಂತರ ಈ ಮೆಸೇಜ್ ಕಳುಹಿಸಿದ ತಕ್ಷಣ ಸಿಲಿಂಡರ್ ಬುಕ್ ಆಗಿರುವ ಮೆಸೇಜ್ ಬರುತ್ತದೆ. ಇದರಲ್ಲಿ ಸಿಲಿಂಡರ್ ಯಾವಾಗ ಡೆಲಿವೆರಿ ಆಗಲಿದೆ ಎನ್ನುವ ಮಾಹಿತಿ ಕೂಡಾ ನಿಮಗೆ ತಿಳಿಯುತ್ತದೆ.
ಇದನ್ನೂ ಓದಿ : ಪ್ರವಾಹ ಸಂತ್ರಸ್ತರಿಗೆ ಪರ್ಯಾಯ ವ್ಯವಸ್ಥೆಗೆ ಕ್ರಮ: ಸಿಎಂ ಯಡಿಯೂರಪ್ಪ ಭರವಸೆ
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.