ಜಾಗತಿಕವಾಗಿ ಕೆಲ ಕಾಲ ಕೈಕೊಟ್ಟ ಯೂಟ್ಯೂಬ್, ಜಿ ಮೇಲ್ ಸೇವೆ, ಬಳಕೆದಾರರು ಕಂಗಾಲು
ಯೂಟ್ಯೂಬ್ ತೆರೆದಾಗ “ ಇದರ ಕಾರ್ಯ ಪ್ರಸ್ತುತ ಸ್ಥಗಿತಗೊಂಡಿದೆ” ಎಂಬ ಸಂದೇಶ ಕಾಣಿಸಿಕೊಂಡಿತ್ತು.
Team Udayavani, Dec 14, 2020, 6:26 PM IST
ನವದೆಹಲಿ: ಆನ್ ಲೈನ್ ಜನಪ್ರಿಯ ವಿಡಿಯೋ ಹಂಚಿಕೆ ತಾಣವಾದ ಯೂಟ್ಯೂಬ್ ಹಾಗೂ ಗೂಗಲ್ ನ ಉಚಿತ ಜಿ ಮೇಲ್ ಸೇವೆ ಸೋಮವಾರ(ಡಿಸೆಂಬರ್ 14, 2020) ಮಧ್ಯಾಹ್ನ ಸುಮಾರು ಒಂದು ಗಂಟೆ ಕಾಲ ಜಾಗತಿಕವಾಗಿ ಬಳಕೆದಾರರಿಗೆ ವ್ಯತ್ಯವಾಗಿದ್ದು (ಕ್ರ್ಯಾಶ್), ಇದರ ಪರಿಣಾಮ ನೆಟಿಜೆನ್ಸ್ ಮೆಮೇಸ್ ಮೂಲಕ ತಮ್ಮ ಟೀಕೆಯನ್ನು ಹೊರಹಾಕಿದ್ದಾರೆ ಎಂದು ವರದಿ ತಿಳಿಸಿದೆ.
ಭಾರತ ಸೇರಿದಂತೆ ಜಗತ್ತಿನ ಹಲವು ದೇಶಗಳಲ್ಲಿ ಗೂಗಲ್ ಸೇವೆಯಲ್ಲಿ ವ್ಯತ್ಯಯವಾಗಿತ್ತು. ಗೂಗಲ್ ಕಾಂಟ್ಯಾಕ್ಟ್ಸ್, ಡಾಕ್ಸ್, ಗೂಗಲ್ ಡ್ರೈವ್, ಜಿ ಮೇಲ್ ಯೂಟ್ಯೂಬ್ ಸೇವೆ ಕ್ರ್ಯಾಶ್ ಆಗಿತ್ತು. ಜಿ ಮೇಲ್, ಯೂಟ್ಯೂಬ್ ತೆರೆದಾಗ “ ಇದರ ಕಾರ್ಯ ಪ್ರಸ್ತುತ ಸ್ಥಗಿತಗೊಂಡಿದೆ” ಎಂಬ ಸಂದೇಶ ಕಾಣಿಸಿಕೊಂಡಿತ್ತು.
ಕಳೆದ ತಿಂಗಳು (ನವೆಂಬರ್) ಕೂಡಾ ಯೂಟ್ಯೂಬ್ ಸುಮಾರು ಎರಡು ಗಂಟೆಗಳ ಕಾಲ ಕ್ರ್ಯಾಶ್ ಆಗುವ ಮೂಲಕ ಭಾರೀ ಟೀಕೆಗೆ ಒಳಗಾಗಿತ್ತು. ಇದೀಗ ಯೂಟ್ಯೂಬ್ ಮತ್ತೆ ಅದೇ ಸಮಸ್ಯೆಗೆ ಗುರಿಯಾಗಿದೆ ಎಂದು ವರದಿ ತಿಳಿಸಿದೆ. ಇದೀಗ ಎಂದಿನಂತೆ ಯೂಟ್ಯೂಬ್, ಜಿ ಮೇಲ್ ಕಾರ್ಯನಿರ್ವಹಿಸುತ್ತಿದೆ.
ಜಿ ಮೇಲ್, ಯೂಟ್ಯೂಬ್ ಕ್ರ್ಯಾಶ್ ನಿಂದ ನೆಟಿಜೆನ್ಸ್ ಗಳ ಮೆಮೇಸ್ ಇಲ್ಲಿದೆ…
uh oh, it looks like @YouTube has rejected humanity. #YouTube #YouTubeDOWN pic.twitter.com/9cXV4Gknu0
— Seanius (@beilude) December 14, 2020
Youtube is behaving like a monkey. See for yourself ?
What’s up @YouTubeIndia#YouTubeDOWN pic.twitter.com/Xm1L731CUu— Ahmed (@Secular786) December 14, 2020
*WENT STRAIGHT TO TWITTER* ?♂️?
#YouTubeDOWN pic.twitter.com/GX3EmRwTyz— bee cool ? ̖́- (@deymtubbo) December 14, 2020
The day came. When you can’t even google what happened with google.
It’s still 2020.#googledown #YouTubeDOWN #gmaildown pic.twitter.com/3nDDCfPS6X
— Only Fans Designer (@onlyfandesigner) December 14, 2020
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Subrahmanya; ಅನ್ಯಕೋಮಿನ ವಿದ್ಯಾರ್ಥಿನಿಗೆ ಮೆಸೇಜ್: ಗುಂಪಿನಿಂದ ಯುವಕನಿಗೆ ಥಳಿತ
Kundapura; ನಿಯಂತ್ರಣ ತಪ್ಪಿ ಗದ್ದೆಗೆ ಉರುಳಿದ ಬೈಕ್: ಸವಾರ ದುರ್ಮರ*ಣ
J&K:ಪಾಕ್ ಮೂಲದ ಎಲ್‌ಇಟಿ ಉನ್ನತ ಕಮಾಂಡರ್ ನನ್ನ ಹೊಡೆದುರುಳಿಸಿದ ಸೇನೆ
Pushpa2: ಅಲ್ಲು ಅರ್ಜುನ್ ‘ಪುಷ್ಪ-2’ ಐಟಂ ಹಾಡಿಗೆ ಹಜ್ಜೆ ಹಾಕಲಿದ್ದಾರೆ ಈ ಇಬ್ಬರು ನಟಿಯರು?
Owaisi; ತಿರುಪತಿಯಲ್ಲಿ ಮುಸ್ಲಿಂ ಸ್ಟಾಫ್ ಇಲ್ಲದಿರುವಾಗ ವಕ್ಫ್ ನಲ್ಲೇಕೆ ಹಿಂದೂಗಳು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.