ಗುಜರಾತ್ನಲ್ಲಿ 1.30 ಲಕ್ಷ ಬಾಲಕಾರ್ಮಿಕರು!
Team Udayavani, Oct 21, 2020, 12:52 AM IST
ಸಾಂದರ್ಭಿಕ ಚಿತ್ರ
ಅಹ್ಮದಾಬಾದ್: ಗುಜರಾತ್ನ ಹತ್ತಿಬೀಜದ ಫಾರ್ಮ್ಗಳು ಬಾಲ ಕಾರ್ಮಿಕರ ಗೂಡುಗಳಾಗಿವೆ. ಅಂದಾಜು 1.30 ಲಕ್ಷ ಮಕ್ಕಳು ಇವುಗಳಲ್ಲಿ ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದಾರೆ!
ಹೀಗೊಂದು ಆತಂಕಕಾರಿ ಸಂಗತಿಯನ್ನು ನಗರದ ಎನ್ಜಿಒ ಸ್ಫೋಟಿಸಿದೆ. “ಈ ಮಕ್ಕಳಲ್ಲಿ ಬಹುತೇಕರು ಬುಡಕಟ್ಟು ಜನಾಂಗಕ್ಕೆ ಸೇರಿದವರಾಗಿದ್ದು, ಕೇವಲ 150 ರೂ. ದಿನಗೂಲಿಗೆ ದುಡಿಯುತ್ತಿದ್ದಾರೆ’ ಎಂದು ಸೆಂಟರ್ ಫಾರ್ ಲೇಬರ್ ರಿಸರ್ಚ್ ಆ್ಯಂಡ್ ಆ್ಯಕ್ಷನ್ನ ಸುಧೀರ್ ಕಟಿಯಾರ್ ತಿಳಿಸಿದ್ದಾರೆ.
ಕಾರಣ ಏನು?: “ಹೆಚ್ಚಿನ ಬುಡಕಟ್ಟು ಕಾರ್ಮಿಕರನ್ನು ಹೊಂದಿರುವ ಫಾರ್ಮ್ಗಳಲ್ಲಿ ಕನಿಷ್ಠ ಕೂಲಿಯನ್ನು ನೀಡಲಾಗುತ್ತದೆ. ಈ ಕಾರಣಕ್ಕಾಗಿ ಪೋಷಕರು ಮಕ್ಕಳನ್ನು ಕೂಲಿಗೆ ಬಳಸಿಕೊಳ್ಳುತ್ತಿದ್ದಾರೆ’ ಎಂದಿದ್ದಾರೆ. 10 ವರ್ಷಗಳ ಹಿಂದೆ ಸರಕಾರ ಬಾಲಕಾರ್ಮಿಕ ವಿರೋಧಿ ಕಾನೂನನ್ನು ಕಟ್ಟುನಿಟ್ಟಾಗಿ ಜಾರಿಗೆ ತಂದಾಗ ಉತ್ತರ ಗುಜರಾತ್ನಿಂದ ಹಲವರು ಬುಡಕಟ್ಟು ವಲಯದ ಹತ್ತಿಬೀಜದ ಫಾರ್ಮ್ ಗಳಿಗೆ ವಲಸೆ ಹೋಗಿದ್ದಾರೆ. ಬನಸ್ಕಾಂತ, ಸಬರ್ಕಾಂತ, ಅರಾವಳಿ, ಮಹಿಸಾಗರ್ ಮತ್ತು ಛೋಟಾಡೇಪುರ್ ಜಿಲ್ಲೆಗಳಲ್ಲಿ ಈ ಪ್ರಕರಣಗಳು ಹೆಚ್ಚು ಬೆಳಕಿಗೆ ಬಂದಿವೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.