ಪ್ಲಾಸ್ಟಿಕ್ ಬಳಸಿ 2 ಲಕ್ಷ ಕಿ.ಮೀ. ರಸ್ತೆ ನಿರ್ಮಾಣ
ವಿವಿಧೆಡೆ ಪ್ರಗತಿಯಲ್ಲಿರುವ ತ್ಯಾಜ್ಯ ಪ್ಲಾಸ್ಟಿಕ್ ಮಿಶ್ರಿತ ರಸ್ತೆ ಕಾಮಗಾರಿ
Team Udayavani, Jul 11, 2020, 7:07 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೊಸದಿಲ್ಲಿ: ರಾಷ್ಟ್ರೀಯ ಹೆದ್ದಾರಿಗಳ ನಿರ್ಮಾಣದ ವೇಳೆ, ಮರುಬಳಕೆ ಮಾಡಲಾಗದ ಪ್ಲಾಸ್ಟಿಕ್ ಅನ್ನು ಬಳಸಲಾಗುತ್ತಿದೆ.
ಈವರೆಗೆ 1 ಲಕ್ಷ ಕಿ.ಮೀ.ವರೆಗಿನ ರಸ್ತೆ ನಿರ್ಮಾಣದಲ್ಲಿ ಇಂಥ ಪ್ಲಾಸ್ಟಿಕ್ ಅನ್ನೇ ಬಳಸಲಾಗಿದೆ.
ಈ ವರ್ಷ 2 ಲಕ್ಷ ಕಿ.ಮೀ.ವರೆಗಿನ ರಸ್ತೆಯನ್ನು ಇಂಥ ಪ್ಲಾಸ್ಟಿಕ್‌ನಿಂದಲೇ ನಿರ್ಮಿಸುವ ಇರಾದೆಯನ್ನು ವಿವಿಧ ರಾಜ್ಯ ಸರಕಾರಗಳು ಹೊಂದಿದೆ ಎಂದು ‘ದ ಹಿಂದುಸ್ತಾನ್ ಟೈಮ್ಸ್’ ವರದಿ ಮಾಡಿದೆ.
ಇಂಥ ರಸ್ತೆಗಳ ಪ್ರತಿ ಒಂದು ಕಿ.ಮೀ. ನಿರ್ಮಾಣಕ್ಕೆ 9 ಟನ್‌ನಷ್ಟು ಡಾಂಬರ್ ಹಾಗೂ 1 ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಬೇಕಾಗುತ್ತದೆ. ಹೀಗಾಗಿ, ಸಾಮಾನ್ಯವಾಗಿ 1 ಕಿ.ಮೀ. ರಸ್ತೆ ನಿರ್ಮಾಣಕ್ಕೆ ಬೇಕಾಗುವ 10 ಟನ್ ಡಾಂಬರಿನಲ್ಲಿ 1 ಟನ್‌ನಷ್ಟು ಉಳಿತಾಯವಾಗುತ್ತದೆ. 1 ಟನ್ ಡಾಂಬರಿಗೆ 30 ಸಾವಿರ ರೂ. ಇದ್ದು, ಆ ಹಣ ಉಳಿತಾಯವಾಗುತ್ತದೆ. ಇಂಥ ಹೊಸ ಮಾದ ರಿಯ ರಸ್ತೆಗಳಲ್ಲಿ ಶೇ. 6ರಿಂದ 8ರಷ್ಟು ಪ್ಲಾಸ್ಟಿಕ್, ಶೇ. 92-94ರಷ್ಟು ಡಾಂಬರ್ ಇರುತ್ತದೆ.
2016ರಲ್ಲಿ ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ, 11 ರಾಜ್ಯಗಳಲ್ಲಿ ಸುಮಾರು 1 ಲಕ್ಷ ಕಿ.ಮೀ.ವರೆಗಿನ ರಸ್ತೆಗಳನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ನಿರ್ಮಿಸುವುದಾಗಿ ತಿಳಿಸಿದ್ದರು. ಈ ವರ್ಷದಲ್ಲಿ 2 ಲಕ್ಷ ಕಿ.ಮೀ.ವರೆಗಿನ ರಸ್ತೆಗಳನ್ನು ನಿರ್ಮಿಸುವುದಾಗಿ ಅವರು ಹೇಳಿದ್ದಾರೆ.
ಎಲ್ಲೆಲ್ಲಿ ಸಾಕಾರವಾಗಿದೆ?: 2018ರಲ್ಲಿ ಗುರುಗ್ರಾಮ ಕಾರ್ಪೊರೇಷನ್ ಸಂಸ್ಥೆ ತನ್ನ ವ್ಯಾಪ್ತಿಯ ರಸ್ತೆಗಳಲ್ಲಿ ಪ್ಲಾಸ್ಟಿಕ್ ಬಳಕೆಗೆ ಮುಂದಾಗಿತ್ತು. ಈ ವರ್ಷ, ಅಸ್ಸಾಂ ಸರಕಾರ ಈ ಮಾದರಿಯ ರಸ್ತೆಗಳಿಗೆ ಕೈ ಹಾಕಿದೆ. ಜಮ್ಮು-ಕಾಶ್ಮೀರ ರಾಷ್ಟ್ರೀಯ ಹೆದ್ದಾರಿಯ ಸುಮಾರು 270 ಕಿ.ಮೀ.ವರೆಗಿನ ದೂರವನ್ನು ಪ್ಲಾಸ್ಟಿಕ್ ತ್ಯಾಜ್ಯದಿಂದಲೇ ನಿರ್ಮಿಸಲಾಗಿದೆ. ದಿಲ್ಲಿ ಹಾಗೂ ಮೀರತ್ ನಡುವಿನ ಹೆದ್ದಾರಿಯ 2 ಕಿ.ಮೀ.ವರೆಗಿನ ರಸ್ತೆಗೆ ಸುಮಾರು 1.6 ಟನ್ ಪ್ಲಾಸ್ಟಿಕ್ಕನ್ನು ಬಳಸಲಾಗಿದೆ.
ನಮ್ಮಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ಪ್ರಮಾಣವೆಷ್ಟು?
ಭಾರತದಲ್ಲಿ ದಿನನಿತ್ಯ 25,940 ಟನ್‌ನಷ್ಟು ಪ್ಲಾಸ್ಟಿಕ್ ತ್ಯಾಜ್ಯ ಸೃಷ್ಟಿಯಾಗುತ್ತದೆ. ಇದು 4,300 ಆನೆಗಳ ತೂಕಕ್ಕೆ ಸರಿಸಮಾನವಾದ ತ್ಯಾಜ್ಯ! ಇದರಲ್ಲಿ, ಶೇ. 60ರಷ್ಟು ತ್ಯಾಜ್ಯ ಮರುಬಳಕೆಗೆ ಒಳಗಾಗುತ್ತದೆ. ಉಳಿದ ಪ್ಲಾಸ್ಟಿಕ್, ಬಯಲು ಪ್ರದೇಶಗಳಲ್ಲಿ ಹರಡಲ್ಪಡುತ್ತದೆ.
ಮತ್ತೊಂದೆಡೆ, ಪ್ಲಾಸ್ಟಿಕ್ ಚರಂಡಿ, ನದಿಗಳ ಮೂಲಕ ಸಮುದ್ರ ಸೇರುತ್ತದೆ. ಮರುಬಳಕೆಯಾಗದ ಪ್ಲಾಸ್ಟಿಕ್ಕನ್ನು ಸುಟ್ಟರೆ ವಾಯುಮಾಲಿನ್ಯ ತಪ್ಪಿದ್ದಲ್ಲ. ಮತ್ತೂಂದೆಡೆ, ಮರುಬಳಕೆಯಾದ ಪ್ಲಾಸ್ಲಿಕ್ ಕೂಡ ಗುಣಮಟ್ಟದಿಂದ ಕೂಡಿರುವುದಿಲ್ಲ ಎಂದು ಕೇಂದ್ರ ಪರಿಸರ ಇಲಾಖೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Enforcement Directorate: ಕ್ರಿಮಿನಲ್ ಪಿತೂರಿಯಡಿ ಮಾತ್ರವೇ ಅಕ್ರಮ ಹಣ ವರ್ಗ ಕೇಸು ಬೇಡ
Sabarimala: ತಂಗಅಂಗಿ ಶೋಭಾಯಾತ್ರೆ ಆರಂಭ
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Parliament: ಸಂಸದರ ತಳ್ಳಾಟ: ಇಂದು ಸಂಸತ್ ಭವನಕ್ಕೆ ದಿಲ್ಲಿ ಪೊಲೀಸರ ಭೇಟಿ?
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Legislative House: ಶಾಸನಸಭೆಯೊಳಗೆ ಪೊಲೀಸ್ ಪ್ರವೇಶಕ್ಕಿಲ್ಲ ಅವಕಾಶ: ತಜ್ಞರು
Christmas; ಪ್ರಭು ಕ್ರಿಸ್ತನ ಸ್ವಾಗತಕ್ಕೆ ಕರಾವಳಿ ಸಡಗರದಿಂದ ಸಜ್ಜು
Jammu- Kashmir: ಆಯ್ಕೆಯಾಗಿ 2 ತಿಂಗಳಾದ್ರೂ ಶಾಸಕರಿಗೆ ಮೊದಲ ವೇತನ ಸಿಕ್ಕಿಲ್ಲ!
Police System: ಕರ್ನಾಟಕ ಪೊಲೀಸರ ಘನತೆ ಕಾಂಗ್ರೆಸ್‌ನಿಂದ ಸರ್ವನಾಶ: ಎಚ್.ಡಿ.ಕುಮಾರಸ್ವಾಮಿ
Koteshwara: ಟಯರ್‌ಗೆ ಗಾಳಿ ತುಂಬುತ್ತಿದ್ದ ವೇಳೆ ಸ್ಫೋ*ಟಗೊಂಡು ಯುವಕ ಗಂಭೀರ; ಕಾರಣಗಳೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.