ರೈತನಿಗೆ 1 ಪೈಸೆ ಸಾಲ ಮನ್ನಾ!
Team Udayavani, Sep 20, 2017, 10:59 AM IST
ಮಥುರಾ: ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರು ಸಾಲ ಮನ್ನಾ ಘೋಷಿಸುತ್ತಿದ್ದಂತೆ ಕುಣಿದು ಕುಪ್ಪಳಿಸಿದ್ದ ರೈತರಿಗೆ ಇದೀಗ ಆತಂಕ ಶುರುವಾಗಿದೆ. ಏಕೆಂದರೆ, ಲಕ್ಷ ಲಕ್ಷ ರೂ. ಸಾಲದ ಹೊರೆಯಲ್ಲಿ ದಿನ ದೂಡುತ್ತಿರುವ ರೈತರ ಪೈಕಿ ಅನೇಕರಿಗೆ ಸರಕಾರ ಮಾಡಿರುವ ಸಾಲ ಮನ್ನಾ ಎಷ್ಟು ಗೊತ್ತಾ? 1 ಪೈಸೆ!
ಹೌದು, ಹಲವಾರು ರೈತರಿಗೆ 1 ಪೈಸೆ, 12 ರೂ.ನಂತೆ ಅತ್ಯಂತ ಕನಿಷ್ಠ ಪ್ರಮಾಣದಲ್ಲಿ ಸಾಲ ಮನ್ನಾ ಮಾಡಲಾಗಿದೆ. ಮಥುರಾ ಜಿಲ್ಲೆಯ ರೈತರೊಬ್ಬರಿಗೆ ಕೇವಲ 1 ಪೈಸೆ ಸಾಲ ಮನ್ನಾ ಮಾಡಿರುವುದು ಇದೀಗ ಚರ್ಚೆಗೆ ಗ್ರಾಸವಾಗಿದೆ. 1 ಪೈಸೆ ಸಾಲ ಮನ್ನಾ ಮಾಡಿರುವ ಪ್ರಮಾಣ ಪತ್ರವನ್ನು ರೈತ ಚಿದ್ಧಿಗೆ ಕಳುಹಿಸಲಾಗಿದೆ. ಚಿದ್ಧಿ ತನ್ನ ಜಮೀನಿನಲ್ಲಿ ಉಳುಮೆ ಮಾಡಲೆಂದು 2011ರಲ್ಲಿ ಪಂಜಾಬ್ ನ್ಯಾಶನಲ್ ಬ್ಯಾಂಕ್‌ನಿಂದ 1.55 ಲಕ್ಷ ರೂ. ಬೆಳೆ ಸಾಲ ಪಡೆದಿದ್ದರು. “ಸರಕಾರದ “ರಿನ್ ಮೋಚನ್ ಯೋಜನೆ’ ಪ್ರಕಾರ ನನಗೆ 1 ಲಕ್ಷ ರೂ. ಸಾಲ ಮನ್ನಾ ಆಗಬೇಕಿತ್ತು. ಆದರೆ ಪ್ರಮಾಣ ಪತ್ರದ ಮೇಲೆ 1 ಪೈಸೆ ಎಂದು ಬರೆಯಲಾಗಿದೆ. ಅದನ್ನು ನೋಡಿ ಏನು ಮಾಡಬೇಕೆಂದು ತಿಳಿಯುತ್ತಿಲ್ಲ’ ಎಂದು ಚಿದ್ಧಿ ಹೇಳಿದ್ದಾರೆ. 1 ಪೈಸೆ ಸಾಲ ಮನ್ನಾ ಬಗ್ಗೆ ಪ್ರತಿಕ್ರಿಯೆ ನೀಡಿರುವ ಜಿಲ್ಲಾಡಳಿತ, ಇದು ತಾಂತ್ರಿಕ ದೋಷದಿಂದ ಆಗಿರುವ ಪ್ರಮಾದ ಎಂದಿದೆ. ಆದರೆ, ಇಂಥ ಸಮಸ್ಯೆ ಚಿದ್ಧಿಗೆ ಮಾತ್ರ ಎದುರಾಗಿದ್ದಲ್ಲ. ರಾಜ್ಯಾದ್ಯಂತ ಸುಮಾರು 10,000 ರೈತರಿಗೆ ಕೇವಲ ಕೆಲ ರೂಪಾಯಿಗಳು ಮಾತ್ರವೇ ಸಾಲ ಮನ್ನಾ ಆಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Uttar Pradesh: ಆಸ್ಪತ್ರೆಯಲ್ಲಿ ಬೆಂಕಿ 10 ನವಜಾತ ಶಿಶುಗಳ ಸಾವು; 40 ಮಕ್ಕಳ ರಕ್ಷಣೆ
Delhi: ಹೆಚ್ಚಿದ ಮಾಲಿನ್ಯ: ಮಾಸ್ಕ್ ಧರಿಸಿ ಬಂದ ವಿದ್ಯಾರ್ಥಿಗಳು
Gujarat: 700 ಕೆ.ಜಿ. ಡ್ರಗ್ಸ್ ವಶ: 8 ಮಂದಿ ಬಂಧನ; ಕಳೆದ 1 ತಿಂಗಳಲ್ಲಿ ಭರ್ಜರಿ 3ನೇ ಬೇಟೆ
Bombay high court: ವಯಸ್ಕಳಲ್ಲದ ಪತ್ನಿ ಜತೆ ಒಪ್ಪಿತ ಲೈಂಗಿಕ ಸಂಬಂಧ ರೇ*ಪ್
Jharkhand; ವಿಮಾನದಲ್ಲಿ ತಾಂತ್ರಿಕ ದೋಷ: 2 ಗಂಟೆ ಕಾದ ಪ್ರಧಾನಿ ಮೋದಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.