ಲಕ್ನೋ-ಆಗ್ರಾ ಎಕ್ಸ್‌ಪ್ರೆಸ್‌ವೇ : ಪರಸ್ಪರ ಗುದ್ದಿಕೊಂಡ 10 ಕಾರು
Team Udayavani, Dec 19, 2017, 3:07 PM IST
ಹೊಸದಿಲ್ಲಿ : ದಟ್ಟ ಮಂಜು ಮುಸುಕಿದ್ದ ಲಕ್ನೋ – ಆಗ್ರಾ ಎಕ್ಸ್‌ಪ್ರೆಸ್‌ವೇ ಯಲ್ಲಿ ನಿಕೃಷ್ಟ ಗೋಚರತೆಯ ಕಾರಣ ಹತ್ತು ಕಾರುಗಳು ಪರಸ್ಪರ ಗುದ್ದಿಕೊಂಡು ಅವಘಡಕ್ಕೀಡಾದ ಆಘಾತಕಾರಿ ಘಟನೆ ನಡೆದಿದೆ.
ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಬಂಗರ್‌ಮಾವು ಎಂಬಲ್ಲಿ ರಸ್ತೆಯಲ್ಲಿ ದಟ್ಟ ಮಂಜು ಮುಸುಕಿದ್ದ ಸಂದರ್ಭದಲ್ಲಿ ನಿನ್ನೆ ಸೋಮವಾರ ಬೆಳಗ್ಗೆ ಈ ಸರಣಿ ಅಪಘಾತ ನಡೆಯಿತು. ಹತ್ತು ಕಾರುಗಳು ತೀವ್ರವಾಗಿ ಹಾನಿಗೀಡಾದವು. ಕಾರುಗಳಲ್ಲಿದ್ದ ಹಲವರಿಗೆ ಗಾಯಗಳಾಗಿದ್ದು ಕೆಲವರ ಸ್ಥಿತಿ ಗಂಭೀರವಿದೆ; ಆದರೆ ಯಾರೂ ಮೃತ ಪಟ್ಟ ವರದಿಗಳು ಬಂದಿಲ್ಲ.
ಉತ್ತರ ಭಾರತದ ಹೆಚ್ಚಿನ ಭಾಗಗಳಲ್ಲಿ ಚಳಿಗಾಲದ ಈ ಅವಧಿಯಲ್ಲಿ ದಟ್ಟ ಮಂಜು ಮುಸುಕಿರುವುದು ಸಾಮಾನ್ಯ. ಕಡಿಮೆ ಗೋಚರತೆಯ ಕಾರಣ ವಾಹನಗಳು ಪರಸ್ಪರ ಢಿಕ್ಕಿಯಾಗುವುದು ಕೂಡ ಸಾಮಾನ್ಯ. ಆದರೆ ನಿನ್ನೆ ಸೋಮವಾರದ ಈ ಸರಣಿ ಅಪಘಾತದಲ್ಲಿ 10 ಕಾರುಗಳು ಹಾನಿಗೀಡಾದವು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Sagara: ಚಿರತೆ ಉಗುರು, ಹಲ್ಲು ಅಕ್ರಮ ಸಾಗಣೆ… ಸೊತ್ತು ಸಮೇತ ವ್ಯಕ್ತಿ ವಶ
Mudhol: ಸಾಲಬಾಧೆಗೆ ಹೆದರಿ ರೈತ ಮಹಿಳೆ ಬಾವಿಗೆ ಹಾರಿ ಆತ್ಮಹತ್ಯೆ
Belegavi: ‘ನಾ ಡ್ರೈವರ್’ ಹಾಡಿನ ಗಾಯಕ ಮಾಳು ನಿಪನಾಳನಿಂದ ಯುವಕನ ಮೇಲೆ ಹಲ್ಲೆ
Horoscope: ಉದ್ಯೋಗ ಸ್ಥಾನದಲ್ಲಿ ಎರಡೂ ಬಗೆಯ ಅನುಭವಗಳು ಆಗಲಿದೆ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.