Greater Noida: 7 ಮಕ್ಕಳು ಸೇರಿದಂತೆ 10 ಮಂದಿ ಲಿಫ್ಟ್ ನೊಳಗೆ ಲಾಕ್… ಮುಂದೇನಾಯ್ತು…?
Team Udayavani, Nov 30, 2023, 11:24 AM IST
ನವದೆಹಲಿ: ತಾಂತ್ರಿಕ ಸಮಸ್ಯೆಯಿಂದ ವಸತಿ ಸಮುಚ್ಚಯದಲ್ಲಿದ್ದ ಲಿಫ್ಟ್ ಒಂದು ಕೈ ಕೊಟ್ಟ ಪರಿಣಾಮ ಏಳು ಮಕ್ಕಳು ಸೇರಿದಂತೆ ಒಟ್ಟು ಹತ್ತು ಮಂದಿ ಲಿಫ್ಟ್ ನೊಳಗೆ ಸಿಲುಕಿ ಒದ್ದಾಡಿದ ಘಟನೆ ನಡೆದಿದೆ.
ಗ್ರೇಟರ್ ನೋಯ್ಡಾದ ಬಹುಮಹಡಿ ಹೌಸಿಂಗ್ ಸೊಸೈಟಿಯಲ್ಲಿನ ಲಿಫ್ಟ್ನಲ್ಲಿ ತಾಂತ್ರಿಕ ದೋಷ ಕಂಡು ಬಂದು ಇದರೊಳಗಿದ್ದ ಹತ್ತು ಮಂದಿ ಆತಂಕಕ್ಕೊಳಗಾಗಿದ್ದಾರೆ, ಲಿಫ್ಟ್ ಸ್ಥಗಿತಗೊಂಡ ವೇಳೆ ಅದರೊಳಗಿದ್ದ ಜನ ಸಹಾಯಕ್ಕಾಗಿ ಕರೆದಿದ್ದಾರೆ ಆದರೆ ಇವರ ಕರೆ ಯಾರ ಕಿವಿಗೂ ಬೀಳಲಿಲ್ಲ. ಸುಮಾರು ಮೂವತ್ತು ನಿಮಿಷಗಳ ಕಾಲ ಲಿಫ್ಟ್ ನೊಳಗೆ ಬಂಧಿಯಾದ ಮಂದಿಗೆ ಜೀವ ಭಯ ಉಂಟಾಗಿ ಜೋರಾಗಿ ಕಿರುಚಿದ್ದಾರೆ ಈ ವೇಳೆ ಅಲ್ಲಿನ ಕೆಲ ನಿವಾಸಿಗಳು ಬಂದು ನೋಡಿದಾಗ ಲಿಫ್ಟ್ ಸ್ಥಗಿತಗೊಂಡಿರುವುದು ಬೆಳಕಿಗೆ ಬಂದಿದೆ ಕೂಡಲೇ ಲಿಫ್ಟ್ ನಿರ್ವಾಹಕರನ್ನು ಸಂಪರ್ಕಿಸಿದ್ದಾರೆ ಬಳಿಕ ಬಂದ ನಿರ್ವಾಹಕರು ಕೆಲ ಹೊತ್ತಿನ ಕಾರ್ಯಾಚರಣೆ ಬಳಿಕ ಲಿಫ್ಟ್ ಒಳಗೆ ಸಿಲುಕಿದ್ದ ಜನರನ್ನು ರಕ್ಷಣೆ ಮಾಡಿದ್ದಾರೆ.
ಈ ವೇಳೆ ಮಾಹಿತಿ ನೀಡಿದ ವಸತಿ ಸಮುಚ್ಚಯದ ಮೇಲ್ವಿಚಾರಕರು ಕಟ್ಟಡದಲ್ಲಿ ಹೆಚ್ಚಿನ ಜನರೇಟರ್ ಇಲ್ಲದೆ ಈ ಸಮಸ್ಯೆ ಎದುರಾಗಿದೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Fraud: ಪ್ರತಿಷ್ಠಿತ ವಿಎಸ್‌ಟಿ ಡ್ಯೂಕಾಟಿ ಬೈಕ್ ಶೋರೂಂಗೆ ವಂಚನೆ; ಮುಖ್ಯಸ್ಥ ಸೆರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
K.V.Narayana: ವಿಮರ್ಶಕ ಪ್ರೊ.ಕೆ.ವಿ.ನಾರಾಯಣಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.