ಡ್ರಗ್ಸ್ ಸಾಗಾಟ: 10 ಪಾಕಿಸ್ಥಾನಿ ಪ್ರಜೆಗಳ ಬಂಧನ
Team Udayavani, Dec 27, 2022, 1:34 AM IST
ಗಾಂಧಿನಗರ: ದೇಶದ ಜಲಗಡಿಯನ್ನು ಅಕ್ರಮವಾಗಿ ಪ್ರವೇಶ ಮಾಡಿರುವ ಪಾಕಿಸ್ಥಾನದ ಬೋಟ್ ಅನ್ನು ಗುಜರಾತ್ ಉಗ್ರ ನಿಗ್ರಹ ದಳ, ಕರಾವಳಿ ರಕ್ಷಣ ಪಡೆ ವಶಕ್ಕೆ ಪಡೆದು ಕೊಂಡಿದೆ. ಅದರಲ್ಲಿ ಇದ್ದ 10 ಮಂದಿ ಪಾಕಿಸ್ಥಾನಿ ಪ್ರಜೆಗಳನ್ನು ಬಂಧಿಸಿದ್ದು, ಅವರಿಂದ 300 ಕೋಟಿ ರೂ. ಮೌಲ್ಯದ 40 ಕೆಜಿ ಮಾದಕ ವಸ್ತುಗಳು, ಶಸ್ತ್ರಾಸ್ತ್ರಗಳು, ಮದ್ದು- ಗುಂಡುಗಳು ಹಾಗೂ ಮೀನುಗಾರಿಕೆ ಹಡಗನ್ನು ಅಧಿಕಾರಿಗಳು ವಶಪಡಿ ಸಿಕೊಂಡಿದ್ದಾರೆ. ದೇಶದಲ್ಲಿ ಭಾರೀ ಪ್ರಮಾಣದ ದುಷ್ಕೃತ್ಯಕ್ಕೆ ಅವರು ಸಂಚು ರೂಪಿಸಿದ್ದರು ಎಂದು ಹೇಳಲಾಗಿದೆ.
ಖಚಿತ ಮಾಹಿತಿ ಮೇರೆಗೆ ಗುಜರಾತ್ ಉಗ್ರ ನಿಗ್ರಹ ಪಡೆ (ಎಟಿಎಸ್) ಮತ್ತು ಭಾರತೀಯ ಕರಾವಳಿ ಪಡೆ(ಐಸಿಜಿ) ರವಿವಾರ ಮಧ್ಯರಾತ್ರಿ ಜಂಟಿ ಕಾರ್ಯಾಚರಣೆ ನಡೆಸಿ, ಭಾರತದ ಸಮುದ್ರ ವ್ಯಾಪ್ತಿ ಯಲ್ಲಿ ಅನುಮಾನಾಸ್ಪದವಾಗಿ ಸಂಚರಿ ಸುತ್ತಿದ್ದ ಪಾಕಿಸ್ಥಾನಿ ಮೀನುಗಾರಿಕೆ ಹಡಗು “ಅಲ್ ಸೊಯೇಲಿ’ಯನ್ನು ವಶಕ್ಕೆ ಪಡೆದಿದ್ದಾರೆ.
ಹಡಗಿನಲ್ಲಿದ್ದ ಮಾದಕ ವಸ್ತುಗಳನ್ನು ಮತ್ತು ಶಸ್ತ್ರಾಸ್ತ್ರಗಳನ್ನು ದೇವಭೂಮಿ ದ್ವಾರಕ ಜಿಲ್ಲೆಯ ಜಖೌ ಬಂದರಿಗೆ ತೆಗೆದುಕೊಂಡು ಹೋಗಲಾಗುತ್ತಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Train ಜನಶತಾಬ್ದಿ ಎಕ್ಸ್ಪ್ರೆಸ್ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ
Himachal Pradesh;ನಷ್ಟದಲ್ಲಿರುವ ಹೊಟೇಲ್ ಮುಚ್ಚಲು ಹೈಕೋರ್ಟ್ ಆದೇಶ
Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್ ಘೋಷಣೆ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.