ದಾರಿ ಕೊಡದಿದ್ರೆ 10 ಸಾವಿರ ದಂಡ!
Team Udayavani, Jun 26, 2019, 5:00 AM IST
ಸಾಂದರ್ಭಿಕ ಚಿತ್ರ
ನವದೆಹಲಿ: ಇನ್ನು ಮುಂದೆ ಆ್ಯಂಬುಲೆನ್ಸ್ ಮತ್ತು ಇತರ ತುರ್ತು ವಾಹನಗಳಿಗೆ ದಾರಿ ಬಿಡದೇ ಇದ್ದರೆ 10,000, ವಾಹನ ಚಲಾಯಿಸಲು ಅನರ್ಹತೆಗೊಂಡಿದ್ದರೂ ಓಡಿಸಿದರೆ ಪ್ರತ್ಯೇಕವಾಗಿ 10 ಸಾವಿರ ರೂ. ದಂಡ ತೆರಬೇಕಾದೀತು!
ಸೋಮವಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ನಡೆದ ಕೇಂದ್ರ ಸಂಪುಟ ಸಭೆಯಲ್ಲಿ ಅನುಮೋದಿಸಲಾಗಿರುವ ಮೋಟಾರು ವಾಹನ (ತಿದ್ದುಪಡಿ) ವಿಧೇಯಕದಲ್ಲಿ ಈ ಅಂಶಗಳಿದ್ದು, ಶೀಘ್ರವೇ ಅದನ್ನು ಸಂಸತ್‌ನಲ್ಲಿ ಮಂಡಿಸಲಾಗುತ್ತದೆ.
ಓಲಾ, ಊಬರ್‌ನಂಥ ವಾಹನ ಸೇವಾ ಪೂರೈಕೆದಾರರು (ಟ್ಯಾಕ್ಸಿ ಸೇವೆ ನೀಡುವವರು) ಏನಾದರೂ ನಿಯಮಗಳನ್ನು ಉಲ್ಲಂಘಿಸಿದರೆ ಅವರಿಗೆ 1 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಸದ್ಯ ಈ ವಿಧೇಯಕ ರಾಜ್ಯಸಭೆಯಲ್ಲಿ ಅನುಮೋದನೆಗೆ ಬಾಕಿ ಉಳಿದುಕೊಂಡಿದೆ. 16ನೇ ಲೋಕಸಭೆಯ ಅವಧಿ ಮುಕ್ತಾಯವಾದ ಕಾರಣ ಮಸೂದೆ ಮಂಡಿಸಿದ್ದರೂ, ಅದು ಬಿದ್ದು ಹೋಗಿತ್ತು.
ದಂಡದ ಮೊತ್ತವೆಷ್ಟು?
•ವೇಗದ ಚಾಲನೆ 1,000 ದಿಂದ 2,000 ರೂ.
•ಹೆಲ್ಮೆಟ್ ಧರಿಸದೇ ಚಾಲನೆ 1,000 ರೂ. ಮತ್ತು 3 ತಿಂಗಳ ಕಾಲ ಲೈಸೆನ್ಸ್ ಅಮಾನತು
•ಸಂಚಾರ ನಿಯಮ ಉಲ್ಲಂಘನೆ 500 ರೂ.
•ಪರವಾನಗಿ ಇಲ್ಲದಿದ್ದರೆ 5,000 ರೂ.
•ಅಪಾಯಕಾರಿಯಾಗಿ ಚಾಲನೆ 5,000 ರೂ.
•ಮದ್ಯ ಸೇವಿಸಿ ಚಲಾಯಿಸಿದರೆ 10,000 ರೂ.
•ಓವರ್‌ಲೋಡ್ ಮಾಡಿದರೆ – 10,000 ರೂ.
•ಸೀಟ್ ಬೆಲ್ಟ್ ಧರಿಸದಿದ್ದರೆ -1,000 ರೂ.
•ಅಪ್ರಾಪ್ತ ವಯಸ್ಸಿನವರು ವಾಹನ ಚಾಲನೆ ಮಾಡಿ, ಅಪಘಾತಕ್ಕೆ ಕಾರಣವಾದರೆ ಅವರ ಹೆತ್ತವರು/ಮಾಲೀಕರ ವಿರುದ್ಧ ಕ್ರಮ. ಜತೆಗೆ, ವಾಹನದ ನೋಂದಣಿ ರದ್ದು
•ಓಲಾ, ಊಬರ್‌ನಂಥ ವಾಹನ ಸೇವಾ ಪೂರೈಕೆದಾರರು ಲೈಸೆನ್ಸ್ ನಿಯಮ ಉಲ್ಲಂಘಿಸಿದರೆ 1 ಲಕ್ಷ ರೂ. ದಂಡ
• ಅನರ್ಹರಾಗಿದ್ದೂ ಚಾಲನೆ ಮಾಡಿದ್ರೆ 10,000 ರೂ.
•ಮಸೂದೆಗೆ ಕೇಂದ್ರ ಸಂಪುಟ ಅಸ್ತು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Supreme Court; CJI ಡಿ.ವೈ.ಚಂದ್ರಚೂಡ್ ಅವರಿಗೆ ಭಾವನಾತ್ಮಕ ವಿದಾಯ
NSE, BSE; ಷೇರು ಮಾರುಕಟ್ಟೆಗೆ ನವೆಂಬರ್ 20 ರಂದು ರಜೆ ಘೋಷಣೆ
Proposes: ಪುರುಷ ಟೈಲರ್ ಮಹಿಳೆಯರ ಬಟ್ಟೆ ಅಳತೆ ತೆಗೆದುಕೊಳ್ಳುವಂತಿಲ್ಲ: ಮಹಿಳಾ ಆಯೋಗ
Supreme Court; ಆದಾಯ ಮೀರಿದ ಆಸ್ತಿ ಪ್ರಕರಣ: ರಾಜ್ಯ ಸರಕಾರ, ಡಿ.ಕೆ.ಶಿವಕುಮಾರ್ ಗೆ ನೋಟಿಸ್
Hotel Room: ಹೋಟೆಲ್ ಕೊಠಡಿಯಲ್ಲೇ ವೈದ್ಯನ ನಿಗೂಢ ಸಾ*ವು… ಸ್ಥಳದಲ್ಲಿ ಡೆತ್ ನೋಟ್ ಪತ್ತೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.