10ರ ಬಾಲಕನನ್ನು ಕೊಂದು ಶವ ಕೆರೆಯಲ್ಲಿ ಬಿಸುಟ ದುಷ್ಕರ್ಮಿಗಳು
Team Udayavani, Sep 27, 2017, 11:16 AM IST
ಥಾಣೆ : ನೆರೆಯ ಪಾಲಗಢ ಜಿಲ್ಲೆಯ ಸರೋವರವೊಂದರಲ್ಲಿ 10 ವರ್ಷ ಪ್ರಾಯದ ಬಾಲಕನ ಮೃತ ದೇಹ ತೇಲುತ್ತಿರುವುದು ಕಂಡು ಬಂದಿದೆ. ಹಂತಕರು ಬಾಲಕನನ್ನು ಎಲ್ಲೋ ಒಂದೆಡೆ ಕೊಂದು ಬಳಿಕ ಆತನ ಶವವನ್ನು ಈ ಕೆರೆಗೆ ಎಸೆದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ.
ಐದನೇ ತರಗತಿಯಲ್ಲಿ ಓದುತ್ತಿದ್ದ ಈ ಬಾಲಕನನ್ನು ಆತನ ತಂದೆ ಮೊನ್ನೆ ಸೋಮವಾರ ಶಾಲೆಯಿಂದ ಮಧ್ಯಾಹ್ನ 12.30ಕ್ಕೆ ಕರೆದೊಯ್ದಿದ್ದರು. ಆದರೆ ಅವರಿಬ್ಬರೂ ಮನೆ ತಲುಪಿಲ್ಲ ಎಂದು ಬಾಲಕನ ತಾಯಿ ಪೊಲೀಸರಿಗೆ ನೀಡಿದ್ದರು.
ಕೆರೆಯಲ್ಲಿ ಪತ್ತೆಯಾಗಿರುವ ಬಾಲಕನ ಶವದ ಬಾಯಿಯನ್ನು ಪ್ಲಾಸ್ಟರ್‌ನಿಂದ ಬಿಗಿದು ಮುಚ್ಚಲಾಗಿದ್ದು ಅದು ದಹೀಸರ್ ಪ್ರದೇಶದ ಕೆರೆಯಲ್ಲಿ ನಿನ್ನೆ ಮಂಗಳವಾರ ತೇಲುತ್ತಿದ್ದಾಗ ಪತ್ತೆಯಾಯಿತು. ಬಾಲಕನ ತಂದೆ ಇನ್ನೂ ನಾಪತ್ತೆಯಾಗಿದ್ದಾರೆ. ಆತನಿಗಾಗಿ ಹುಡುಕಾಟ ನಡೆದಿದೆ ಎಂದು ಡಿವೈಎಸ್ಪಿ (ವಿರಾರ್) ಜಯಂತ ಬಜಬಲೆ ತಿಳಿಸಿದ್ದಾರೆ.
ಪೊಲೀಸರು ಅಪರಿಚಿತ ದುಷ್ಕರ್ಮಿಗಳ ವಿರುದ್ಧ ಐಪಿಸಿ ಸೆ.302(ಕೊಲೆ), 201 (ಸಾಕ್ಷ್ಯ ನಾಶ) ಅಡಿ ಕೇಸು ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Parliament; ಸಂಸತ್ ಭವನ ಎದುರು ತಳ್ಳಾಟ; ಇಬ್ಬರು ಸಂಸದರಿಗೆ ಗಾಯ, ರಾಹುಲ್ ವಿರುದ್ದ ಆರೋಪ
ಕತ್ತರಿಸಿದ ಮೂಗನ್ನು ಚೀಲದಲ್ಲಿ ಇಟ್ಟು ಆಸ್ಪತ್ರೆಗೆ ಓಡಿ ಬಂದ ಮಹಿಳೆ, ಬೆಚ್ಚಿ ಬಿದ್ದ ವೈದ್ಯರು
Ambedkar row: ಅಮಿತ್ ಶಾಗೆ ಹುಚ್ಚು ಹಿಡಿದಿದೆ, ರಾಜಕೀಯ ಬಿಟ್ಟು ಹೋಗಲಿ ಎಂದ ಲಾಲು ಪ್ರಸಾದ್
ಹೊಸ ವರ್ಷಕ್ಕೆ ಮಾರ್ಗಸೂಚಿ ಬಿಡುಗಡೆ ಮಾಡಿದ ಪೊಲೀಸರು, ಎಲ್ಲಿ…? ಇಲ್ಲಿದೆ ನೋಡಿ ಮಾಹಿತಿ
MUST WATCH
ಹೊಸ ಸೇರ್ಪಡೆ
ಪ್ರಧಾನ ಸಂಪಾದಕ ನ್ಯೂಯಾರ್ಕ್ ನ ಬೆಂಕಿ ಬಸಣ್ಣ ವಿರಚಿತ ‘ವಿಶ್ವಕನ್ನಡ ಕೂಟಗಳ ಕೈಪಿಡಿ’ ಬಿಡುಗಡೆ
Tumkur: ನೀರಾವರಿ ವಿದ್ಯುತ್ ಬಿಲ್ ಪಾವತಿ ಮಾಡುವಂತೆ ಸಿದ್ದಗಂಗಾ ಮಠಕ್ಕೆ ಪತ್ರ
Mumbai: ಚಿಕಿತ್ಸೆಗೆಂದು ಮುಂಬೈಗೆ ಹೋಗಿದ್ದ ನಾಸಿಕ್ ನ ಒಂದೇ ಕುಟುಂಬದ ಮೂವರ ದುರಂತ ಸಾ*ವು
Kadur: ದೇಗುಲ ಕಂಪೌಂಡ್ ಪ್ರವೇಶಿಸಿದರೆಂದು ದಲಿತರಿಗೆ ದಂಡ; ಸವರ್ಣೀಯರಿಂದ ದೇಗುಲಕ್ಕೆ ಬೀಗ
Kaup: ಸಮಸ್ಯೆಗೆ ದೂರು ನೀಡಲು 1912ಗೆ ಕರೆ ಮಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.