ಒಂದು ಗಂಟೆಯಲ್ಲಿ 33 ತಿಂಡಿ-ತಿನಿಸು; ಎರ್ನಾಕುಳಂ ಬಾಲಕಿ ಸಾನ್ವಿಯ ಅದ್ವಿತೀಯ ಸಾಧನೆ
Team Udayavani, Oct 16, 2020, 6:25 AM IST
ಎರ್ನಾಕುಳಂ: ಒಂದು ಗಂಟೆಯಲ್ಲಿ ಮೂವತ್ತ ಮೂರು ವಿಧಗಳ ತಿಂಡಿ-ತಿನಿಸುಗಳು ಸಿದ್ಧ. ಇದು ನುರಿತ ಅಡುಗೆಯವರ ಸಾಧನೆಯಲ್ಲ. ಕೇರಳದ ಎರ್ನಾಕುಳಂನ ಹತ್ತು ವರ್ಷದ ಸಾನ್ವಿ ಎಂ. ಪ್ರಜಿತ್ ಈ ಸಾಧನೆ ಮಾಡಿದ್ದಾಳೆ. ಅದು ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ ಮತ್ತು ಇಂಡಿಯಾ ಬುಕ್ ಆಫ್ ರೆಕಾರ್ಡ್ಸ್ ನಲ್ಲಿ ದಾಖಲಾಗಿದೆ.
ಅಂದ ಹಾಗೆ ಈ ಅದ್ಭುತ ಸಾಧನೆಗಳ ಬಾಲಕಿ ಸದ್ಯ ವಾಸ್ತವ್ಯ ಇರುವುದು ವಿಶಾಖಪಟ್ಟಣಂನಲ್ಲಿ. ಆಕೆಯ ತಂದೆ ಐಎಎಫ್ನಲ್ಲಿ ವಿಂಗ್ ಕಮಾಂಡರ್ ಆಗಿದ್ದಾರೆ. ಪ್ರಜಿತ್ ಬಾಬು ಮತ್ತು ಮಂಜ್ಮಾ ದಂಪತಿಯ ಮುದ್ದಿನ ಕುವರಿ ಈಕೆ. ಒಂದು ಗಂಟೆಯ ಅವಧಿಯಲ್ಲಿ ಇಡ್ಲಿ, ಚಿಕನ್ ರೋಸ್ಟ್, ಫ್ರೈಡ್ ರೈಸ್, ಕಾರ್ನ್ ಫ್ರಿಟ್ಟರ್ಸ್, ವಾಫೆನ್ಸ್, ಮಶ್ರೂಮ್ ಟಿಕ್ಕಾ, ಊತಪ್ಪಮ್, ಪಾಪಿx ಚಾಟ್‌ಗಳನ್ನು ಸಿದ್ಧಪಡಿಸಿದ್ದಾಳೆ. ಅಂದ ಹಾಗೆ ಈ ದಾಖಲೆ ನಿರ್ಮಾಣವಾದದ್ದು ಆ.29ರಂದು. ಆಕೆಯ ಅಡುಗೆ ಮಾಡುವ ಕ್ಷಿಪ್ರತೆ ಮತ್ತು ಇತರ ವಿಚಾರಗಳನ್ನು ಇಬ್ಬರು ಪತ್ರಾಂಕಿತ ಅಧಿಕಾರಿಗಳು, ಏಷ್ಯಾ ಬುಕ್ ಆಫ್ ರೆಕಾರ್ಡ್ಸ್ನ ಪ್ರತಿನಿಧಿಗಳು ಆನ್‌ಲೈನ್ ಮೂಲಕ ವೀಕ್ಷಿಸಿದ್ದರು.
ಪುತ್ರಿಯ ಸಾಧನೆಯ ಬಗ್ಗೆ ತಾಯಿ ಮಂಜ್ಮಾ ಸಂತಸ ವ್ಯಕ್ತಪಡಿಸಿದ್ದಾರೆ. ಮಗುವಾಗಿದ್ದಾಗಲೇ ಆಕೆ ಅಡುಗೆಯತ್ತ ಹೆಚ್ಚು ಆಸ್ಥೆ ಹೊಂದಿದ್ದಳು. ನಮ್ಮ ಕುಟುಂಬದಲ್ಲಿ ಆಹಾರ ಸಿದ್ಧತೆಯ ಬಗ್ಗೆ ಹೆಚ್ಚಿನ ಆದ್ಯತೆ ನೀಡುತ್ತೇವೆ.
ಜುಲೈವರೆಗೆ ಸಾನ್ವಿಗೆ ಗ್ಯಾಸ್ ಸ್ಟೌನಲ್ಲಿ ಅಡುಗೆ ಮಾಡಲು ಅವಕಾಶ ನೀಡಿರಲಿಲ್ಲ. ಅದುವರೆಗೆ ಇಂಡಕ್ಷನ್ ಸ್ಟವ್‌ನಲ್ಲಿ ಅಡುಗೆಯ ಪ್ರಯೋಗ ಮಾಡುತ್ತಿದ್ದಳು ಎಂದು ಮಂಜ್ಮಾ ಹೇಳಿದ್ದಾರೆ. ಅಜ್ಜಿ ಮತ್ತು ನಾನು ಅಡುಗೆ ಮಾಡುವುದನ್ನು ನೋಡಿ, ಹಲವು ಪ್ರಯೋಗಗಳನ್ನು ಮಾಡಿದ್ದಾಳೆ ಎಂದರು. ಆಕೆಯ ತಂದೆ ಅಡುಗೆ ಮಾಡುವಲ್ಲಿ ತಪ್ಪಿದ್ದಾಗ ಅದನ್ನು ಸರಿಪಡಿಸುವಷ್ಟು ಜಾಣ್ಮೆ ಆಕೆಯಲ್ಲಿದೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
RJD ಜೊತೆ ಮೈತ್ರಿ ಮಾಡಿಕೊಂಡು 2 ಬಾರಿ ತಪ್ಪೆಸಗಿದ್ದೆ: ನಿತೀಶ್ ಕುಮಾರ್
Odisha: ಕಾರಿಗೆ ಟ್ರಕ್ ಢಿಕ್ಕಿ ಹೊಡೆದು ಇಬ್ಬರು ಬಿಜೆಪಿ ನಾಯಕರು ಮೃ*ತ್ಯು
Delhi; ರಸ್ತೆಗಳು ಪ್ರಿಯಾಂಕಾ ಗಾಂಧಿ ಕೆನ್ನೆಯಂತಿರಬೇಕು: ಬಿಜೆಪಿ ನಾಯಕನ ಹೇಳಿಕೆಗೆ ಟೀಕೆ
Gujarat: ಕೋಸ್ಟ್ ಗಾರ್ಡ್ ಹೆಲಿಕಾಪ್ಟರ್ ಪತನ; ಮೂವರು ಮೃ*ತ್ಯು
Oyo Rooms: ಮದುವೆಯಾಗದ ಜೋಡಿಗೆ ಇನ್ಮುಂದೆ ʼಓಯೋʼ ರೂಮ್ ಸಿಗೋದು ಕಷ್ಟ – ವರದಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.