ಚೀನಕ್ಕೆ ದೇಶದ ಹಣ ಹರಿವು: ಆ್ಯಪ್ಗಳ ಮೂಲಕ ಈ ಅಕ್ರಮ: ಇ.ಡಿ. ಪ್ರತಿಪಾದನೆ
Team Udayavani, Sep 11, 2022, 7:10 AM IST
ಹೊಸದಿಲ್ಲಿ: ಕೆಲವು ಚೀನೀ ಪ್ರಜೆಗಳು ಅಕ್ರಮವಾಗಿ ಅನೇಕ ಭಾರತೀಯ ಕಂಪೆನಿಗಳನ್ನು ತೆರೆಯುತ್ತಿದ್ದಾರೆ. ಇವುಗಳ ಮೂಲಕ ಸಾವಿರಾರು ಕೋಟಿ ರೂಪಾಯಿ ಆದಾಯ ಸಂಗ್ರಹಿಸಿ ಚೀನಕ್ಕೆ ವರ್ಗಾವಣೆ ಮಾಡುತ್ತಿರುವ ಅಂಶ ಜಾರಿ ನಿರ್ದೇಶನಾಲಯ (ಇ.ಡಿ.)ದ ಅಧಿಕಾರಿಗಳ ತನಿಖೆಯ ಮೂಲಕ ಬಹಿರಂಗವಾಗಿದೆ.
“ಮೊದಲಿಗೆ ಚಾರ್ಟರ್ಡ್ ಅಕೌಂಟೆಂಟ್ಗಳ ಸಹಾಯದಿಂದ ಡಮ್ಮಿ ಭಾರತೀಯ ನಿರ್ದೇಶಕರ ಹೆಸರಿನಲ್ಲಿ ಕಂಪೆನಿಯನ್ನು ಆರಂಭಿಸಲಾಗುತ್ತದೆ. ಸ್ವಲ್ಪ ಸಮಯದ ಅನಂತರ ಚೀನೀ ಪ್ರಜೆಗಳು ಭಾರತಕ್ಕೆ ಬಂದು ಈ ಕಂಪೆನಿಗಳ ನಿರ್ದೇಶಕ ಸ್ಥಾನವನ್ನು ವಹಿಸುತ್ತಾರೆ. ಅನಂತರ ಈ ಕಂಪೆನಿಗಳಿಂದ ಬಂದ ಆದಾಯವನ್ನು ಹಂತ- ಹಂತವಾಗಿ ಚೀನಕ್ಕೆ ವರ್ಗಾಯಿಸಲಾಗುತ್ತದೆ,’ ಎಂದು ಇಡಿ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
“ಬಹುತೇಕ ಲೋನ್ ಆ್ಯಪ್, ಡೇಟಿಂಗ್ ಆ್ಯಪ್, ಬೆಟ್ಟಿಂಗ್ ಆ್ಯಪ್ಗಳ ಮೂಲ ಮಾಲಕತ್ವ ಚೀನೀ ಪ್ರಜೆಗಳದ್ದಾಗಿರುತ್ತದೆ. ಈ ರೀತಿಯ ನೂರಕ್ಕೂ ಹೆಚ್ಚು ಆ್ಯಪ್ಗಳು ಚೀನದಿಂದ ನಿರ್ವಹಣೆಯಾಗುತ್ತಿರುವುದು ತನಿಖೆಯಿಂದ ತಿಳಿದುಬಂದಿದೆ. ಅಲ್ಲದೇ ಕೇವಲ ಬೆಟ್ಟಿಂಗ್ ಆ್ಯಪ್ಗ್ಳೊಂದೇ 1,300 ಕೋಟಿ ರೂ.ಗೂ ಅಧಿಕ ಆದಾಯ ಗಳಿಸಿದೆ’ ಎಂದು ವಿವರಿಸಿದರು.
ಬೆಟ್ಟಿಂಗ್ ಮತ್ತು ಡೇಟಿಂಗ್ ಆ್ಯಪ್ಗಳಿಂದ ಗಳಿಸಿದ ಆದಾಯವನ್ನು ಅಕ್ರಮವಾಗಿ ಚೀನಕ್ಕೆ ವರ್ಗಾಯಿಸುತ್ತಿರುವುದು ಪತ್ತೆಯಾಗಿದೆ ಎಂಬ ಅಂಶವೂ ತನಿಖೆಯಿಂದ ದೃಢಪಟ್ಟಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Adani Group; ಲಂಚದ ಆರೋಪ ಆಧಾರ ರಹಿತ, ಕಾನೂನು ಕ್ರಮ ಕೈಗೊಳ್ಳುತ್ತೇವೆ
Kasabಗೂ ನ್ಯಾಯಯುತ ವಿಚಾರಣೆ ಅವಕಾಶ ಸಿಕ್ಕಿತ್ತು;Yasin ಕೇಸ್ ಬಗ್ಗೆ ಸುಪ್ರೀಂ ಹೇಳಿದ್ದೇನು?
Delhi Polls: 11 ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ ಮಾಡಿದ ಆಪ್… ಯಾರಿಗೆ ಯಾವ ಕ್ಷೇತ್ರ
Viral Video: ಬೇಟೆಗೆ ಹೊಂಚು ಹಾಕುತ್ತಿದ್ದ ಹಾವನ್ನೇ ಬೇಟೆಯಾಡಲು ಮುಂದಾದ ಮೀನು…
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.