100 ಲಕ್ಷ ಕೋ.ರೂ. ಯೋಜನೆ ಜಾರಿಗೆ ಕಾರ್ಯಪಡೆ
Team Udayavani, Sep 8, 2019, 6:01 AM IST
ಹೊಸದಿಲ್ಲಿ: ದೇಶದ ಆರ್ಥಿಕತೆ ಕುಸಿತವನ್ನು ನಿಯಂತ್ರಿಸಲು ಕೆಲವೇ ದಿನಗಳ ಹಿಂದೆ ಹಲವು ಘೋಷಣೆ ಮಾಡಿದ್ದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಈಗ ಮುಂದಿನ 5 ವರ್ಷಗಳವರೆಗೆ ದೇಶದ ಮೂಲ ಸೌಕರ್ಯ ಯೋಜನೆಗಳ
ರೂಪುರೇಷೆಗೆ ಕಾರ್ಯಪಡೆ ರಚಿಸುವುದಾಗಿ ಘೋಷಿಸಿದ್ದಾರೆ.
ಈಗಾಗಲೇ ಮೂಲ ಸೌಕರ್ಯಕ್ಕಾಗಿ 100 ಲಕ್ಷ ಕೋಟಿ ರೂ.ಗಳನ್ನು ನೀಡುವುದಾಗಿ ಕೇಂದ್ರ ಘೋಷಿಸಿದ್ದು, ಈ ಕಾರ್ಯ ಪಡೆಯು ಪ್ರಸ್ತುತ ಹಣಕಾಸು ವರ್ಷ, ಮುಂದಿನ 5 ವರ್ಷ ಕೈಗೊಳ್ಳಲಾಗುವ ಯೋಜನೆಗಳನ್ನು ಗುರುತಿಸಲಿದೆ. ತಾಂತ್ರಿಕವಾಗಿ, ಆರ್ಥಿಕವಾಗಿ ಸೂಕ್ತವಾದ ಯೋಜನೆಗಳನ್ನು ಗುರುತಿಸುವುದು, ಯೋಜನೆ ವೆಚ್ಚ ಅನಗತ್ಯ ವಾಗಿ ಹೆಚ್ಚಳವಾಗುವುದು, ವಿಳಂಬವಾಗುವುದನ್ನು ತಡೆಯುವ ನಿಟ್ಟಿನಲ್ಲಿ ಈ ಕಾರ್ಯಪಡೆ ರೂಪುರೇಷೆ ಸಿದ್ಧಪಡಿಸಲಿದೆ.
ಕಾರ್ಯಪಡೆಯಲ್ಲಿ ಯಾರಿರುತ್ತಾರೆ?
ಹಣಕಾಸು ಸಚಿವಾಲಯದ ಆರ್ಥಿಕ ವ್ಯವಹಾರಗಳ ಕಾರ್ಯದರ್ಶಿ ನೇತೃತ್ವ ವಹಿಸ ಲಿದ್ದು, ಇತರ ಅಧಿಕಾರಿಗಳು ಇರುವರು.
ಒಟ್ಟು ಆರು ಸದಸ್ಯರು ಈ ಕಾರ್ಯಪಡೆಯಲ್ಲಿ ಇರಲಿದ್ದಾರೆ. ಅ. 31ರ ವೇಳೆಗೆ ಈ ವರ್ಷದ ಯೋಜನೆಯನ್ನು ಒದಗಿಸಲಿದೆ ಮತ್ತು 2021-25ರ ರೂಪುರೇಷೆಯನ್ನು ಡಿ.31ರಂದು ನೀಡಲಿದೆ.
ಆರ್ಥಿಕತೆಯ ಗುರಿ
5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿಯನ್ನು ಸಾಧಿಸಲು ಗುಣಮಟ್ಟದ ಮೂಲಸೌಕರ್ಯ ಅತ್ಯಂತ ಪ್ರಮುಖ. ದೇಶದ ಅಭಿವೃದ್ಧಿ ದರ ಹೆಚ್ಚಳ ಕಾಣಲು ಮೂಲ ಸೌಕರ್ಯದಲ್ಲಿ ಹೂಡಿಕೆ ಮಾಡಬೇಕಾಗುತ್ತದೆ ಎಂದು ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kashmir cold: 34 ವರ್ಷಗಳಲ್ಲೇ ಕನಿಷ್ಠ ತಾಪಮಾನ ದಾಖಲು!
Natural Disaster: ಅನಿರೀಕ್ಷಿತ ಮಳೆಗೆ ಸೊರಗಿದ ವಿಶಿಷ್ಟ ಗುಣದ ಹೆಮ್ಮಾಡಿ ಸೇವಂತಿಗೆ
Rain Alert: ರಾಜ್ಯದಲ್ಲಿ ಕನಿಷ್ಠ ತಾಪಮಾನ 4 ಡಿ.ಸೆ ಏರಿಕೆ; ಹಲವೆಡೆ 24ರಂದು ಮಳೆ ಸಾಧ್ಯತೆ
Karnataka; ರಾಜ್ಯದ ಕಾಡಿಗೆ ಕೊಡಲಿ! ಮಾನವ-ವನ್ಯಜೀವಿ ಸಂಘರ್ಷ ಹೆಚ್ಚಳ?
Puri; ವರ್ಷಾರಂಭದೊಂದಿಗೆ ಜಗನ್ನಾಥ ದೇಗುಲದಲ್ಲಿ ಹೊಸ ದರ್ಶನ ವ್ಯವಸ್ಥೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.