ದೇಶಾದ್ಯಂತ 12 ಭಾಷೆಗಳಲ್ಲಿ CET ಪರೀಕ್ಷೆ,700 ಜಿಲ್ಲೆಗಳಲ್ಲಿ 1000 ಪರೀಕ್ಷಾ ಕೇಂದ್ರ: ಸಿಂಗ್
ಹಣ ಉಳಿತಾಯ ಹಾಗೂ ಹಲವಾರು ಪರೀಕ್ಷೆಗಳನ್ನು ಬರೆಯುವುದನ್ನು ತಪ್ಪಿಸಿದಂತಾಗಿದೆ.
Team Udayavani, Aug 24, 2020, 5:57 PM IST
ನವದೆಹಲಿ: ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಮೂಲಕ ದೇಶದ 700 ಜಿಲ್ಲೆಗಳಲ್ಲಿ ಒಂದು ಸಾವಿರ ಸೆಂಟರ್ ಗಳಲ್ಲಿ ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಸೋಮವಾರ (ಆಗಸ್ಟ್ 24, 2020) ತಿಳಿಸಿದ್ದಾರೆ.
ಜೀ ನ್ಯೂಸ್ ಜತೆ ಮಾತನಾಡಿರುವ ಅವರು, ಪ್ರತಿಯೊಂದು ಜಿಲ್ಲೆಯಲ್ಲಿಯೂ ಸೆಂಟರ್ ಮಾಡಲಾಗುವುದು. ದೇಶದಲ್ಲಿ 700 ಜಿಲ್ಲೆಗಳಿದ್ದು, ಒಟ್ಟು ಒಂದು ಸಾವಿರ ಸೆಂಟರ್ ತೆರೆಯಲಾಗುವುದು ಎಂದು ಹೇಳಿದರು.
ರಾಷ್ಟ್ರೀಯ ನೇಮಕಾತಿ ಏಜೆನ್ಸಿ ಅಡಿಯಲ್ಲಿ ಸಿಇಟಿಯನ್ನು 12 ಭಾಷೆಗಳಲ್ಲಿ ನಡೆಸಲಾಗುವುದು ನಂತರ ಇನ್ನಷ್ಟು ಹೆಚ್ಚು ಭಾಷೆಗಳನ್ನು ಸೇರಿಸುವುದಾಗಿ ತಿಳಿಸಿದರು.
ಕೇಂದ್ರ ಸರ್ಕಾರದ ಹುದ್ದೆಗಳಿಗಾಗಿ ಅಭ್ಯರ್ಥಿಗಳನ್ನು ಮಾಡಲು ಸಿಇಟಿ (ಸಾಮಾನ್ಯ ಪ್ರವೇಶ ಪರೀಕ್ಷೆ) ಆನ್ ಲೈನ್ ನಲ್ಲಿ ನಡೆಸುವುದು ಕಡ್ಡಾಯ ಎಂದು ರಾಷ್ಟ್ರೀಯ ನೇಮಕಾತಿ ಏಜೆನ್ಸಿ ತಿಳಿಸಿತ್ತು. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರದ ಹುದ್ದೆಗಾಗಿ ಅಭ್ಯರ್ಥಿಗಳ ನೇಮಕಾತಿಗೆ ಆನ್ ಲೈನ್ ನಲ್ಲಿ ಸಿಇಟಿ ನಡೆಸಲು ಎನ್ ಆರ್ ಎಗೆ ಕೇಂದ್ರ ಸಚಿವ ಸಂಪುಟ ಹಸಿರು ನಿಶಾನೆ ತೋರಿಸಿತ್ತು.
ಇದೊಂದು ಐತಿಹಾಸಿಕವಾದ ನಿರ್ಧಾರ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರ ಖಾತೆ ಸಚಿವ ಪ್ರಕಾಶ್ ಜಾವ್ಡೇಕರ್ ತಿಳಿಸಿದ್ದು, ಉದ್ಯೋಗ ಹುಡುಕುವವರಿಗೆ ಒಂದೇ ಸಾಮಾನ್ಯ ಪರೀಕ್ಷೆ ನಡೆಸುವ ಮೂಲಕ ಹಣ ಉಳಿತಾಯ ಹಾಗೂ ಹಲವಾರು ಪರೀಕ್ಷೆಗಳನ್ನು ಬರೆಯುವುದನ್ನು ತಪ್ಪಿಸಿದಂತಾಗಿದೆ. ಯುವಕರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ದೇಶಾದ್ಯಂತ ಸೆಂಟರ್ ಗಳನ್ನು ತೆರೆಯಲಾಗುವುದು, ಇದರಲ್ಲಿ ಮುಖ್ಯವಾಗಿ ಗ್ರಾಮೀಣ ಮತ್ತು ಕುಗ್ರಾಮ ಪ್ರದೇಶದಲ್ಲಿರುವ ಮಹಿಳೆಯರಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಈ ಕ್ರಮ ತೆಗೆದುಕೊಳ್ಳಲಾಗಿದೆ ಎಂದು ವಿವರಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
By Election: ಯೋಗೇಶ್ವರ್ ನಿಂದಿಸಿದ್ದ ಡಿ.ಕೆ.ಸುರೇಶ್ ಆಡಿಯೋ ಎಚ್‌ಡಿಕೆ ಬಿಡುಗಡೆ
By Election: ನಾಗೇಂದ್ರ, ಜಮೀರ್, ಡಿಕೆಶಿ ಮೇಲೆ ಚುನಾವಣಾ ಆಯೋಗ ಕಣ್ಣಿಡಲಿ: ಡಿವಿಎಸ್
Waqf: ಮುಸ್ಲಿಮರ ಗುರಿ ಮಾಡುವುದು ಬಿಟ್ಟರೆ ಬಿಜೆಪಿಗೆ ಬೇರೇನೂ ಇಲ್ಲ: ಸಚಿವ ದಿನೇಶ್
Maharashtra: ಸ್ತ್ರೀಯರಿಗೆ ಮಾಸಿಕ 3000, ರೈತರ ಸಾಲ ಮನ್ನಾ: ಎಂವಿಎ
Jet Airways ಆಸ್ತಿ ಮಾರಾಟಕ್ಕೆ ಸುಪ್ರೀಂ ಕೋರ್ಟ್ ಅನುಮತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.