![naki](https://www.udayavani.com/wp-content/uploads/2025/02/naki-415x221.png)
![naki](https://www.udayavani.com/wp-content/uploads/2025/02/naki-415x221.png)
Team Udayavani, Aug 11, 2022, 6:45 AM IST
ಚೆನ್ನೈ: ಸುಮಾರು ಒಂದು ಸಾವಿರ ವರ್ಷಗಳಷ್ಟು ಹಳೆಯ 5 ವಿಗ್ರಹ ಸೇರಿದಂತೆ ಒಟ್ಟು 8 ವಿಗ್ರಹಗಳನ್ನು ತಮಿಳುನಾಡಿನ ತಾಂಜಾವೂರು ಜಿಲ್ಲೆಯಲ್ಲಿ ಪೊಲೀಸ್ ಇಲಾಖೆಯ ವಿಗ್ರಹ ತಂಡವು ವಶಪಡಿಸಿಕೊಂಡಿದೆ.
ಸ್ವಾಮಿಮಲೈನಲ್ಲಿ ಜಿ. ಮಸಿಲಮಣಿ ಹೆಸರಿನ ವ್ಯಕ್ತಿಗೆ ಸೇರಿದ ಸ್ಥಳದಲ್ಲಿ ವಿಗ್ರಹಗಳನ್ನು ಹೂತಿಡಲಾಗಿತ್ತು. 200ಕೆ.ಜಿ. ತೂಕದ ಬೋಗಶಕ್ತಿ ಅಮ್ಮ ದೇವರ ಮೂರ್ತಿ, ಬುದ್ಧನ 2 ಮೂರ್ತಿಗಳು, ಅಂದಲ್ ಮತ್ತು ವಿಷ್ಣು ದೇವರ ಮೂರ್ತಿಗಳು ಪತ್ತೆಯಾಗಿದ್ದು ಅವೆಲ್ಲವೂ ಸಾವಿರ ವರ್ಷಗಳಷ್ಟು ಹಳೆಯವು ಎನ್ನಲಾಗಿದೆ.
ಅದರ ಜತೆಯಲ್ಲಿ 100 ವರ್ಷಗಳಷ್ಟು ಹಳೆಯ ನಟರಾಜ ಮೂರ್ತಿ, ಶಿವಕಮಿ ಮತ್ತು ರಮಣ ಮಹರ್ಷಿ ವಿಗ್ರಹಗಳೂ ಪತ್ತೆಯಾಗಿವೆ.
ಮಸಿಲಮಣಿ ವಿರುದ್ಧ ವಿಗ್ರಹ ಕಳ್ಳತನದ ಆರೋಪವಿದ್ದು, ಮೊದಲಿಗೆ ಕೊಡಂಬಕ್ಕಂನ ಅವರ ನಿವಾಸದಲ್ಲಿ ವಿಗ್ರಹಗಳಿಗಾಗಿ ಶೋಧ ನಡೆಸಲಾಗಿತ್ತು. ನಂತರ ಆ.9ರಂದು ಸ್ವಾಮಿಮಲೈನಲ್ಲಿ ಶೋಧ ನಡೆಸಿದಾಗ ವಿಗ್ರಹಗಳು ಪತ್ತೆಯಾಗಿವೆ.
You seem to have an Ad Blocker on.
To continue reading, please turn it off or whitelist Udayavani.