ಖಾತೆಯಲ್ಲಿ 10 ಸಾವಿರ ಇರುವವರು ಬಡವರಲ್ಲ!
Team Udayavani, Nov 18, 2017, 8:16 AM IST
ಹೊಸದಿಲ್ಲಿ: ಮಿಶನ್ ಅಂತ್ಯೋದಯ ಯೋಜನೆ ಅಡಿ 50 ಸಾವಿರ ಗ್ರಾಮ ಪಂಚಾಯತ್‌ಗಳಲ್ಲಿ ಬಡತನ ನಿವಾರಣೆಗೆ ನಿರ್ಧರಿಸಿದ್ದು, ಇದರ ಅಡಿಯಲ್ಲಿ ಬಡತನದ ಮಾನದಂಡಗಳನ್ನು ಇದೀಗ ನಿಗದಿಸಲಾಗಿದೆ. ಒಂದು ಕುಟುಂಬದಲ್ಲಿ ಹೆಚ್ಚಿನ ಸಂಖ್ಯೆಯ ಸದಸ್ಯರು ಬ್ಯಾಂಕ್ ಖಾತೆಯಲ್ಲಿ 10 ಸಾವಿರಕ್ಕಿಂತ ಹೆಚ್ಚು ಮೊತ್ತವನ್ನು ಇಟ್ಟುಕೊಂಡಿದ್ದರೆ, ಆ ಕುಟುಂಬ ಬಡತನ ಅನುಭವಿಸುತ್ತಿಲ್ಲ ಎಂದು ಪಂಚಾಯತ್‌ಗಳು ನಿರ್ಧರಿಸಬಹುದಾಗಿದೆ. ಅಲ್ಲದೆ ಒಂದು ಗ್ರಾಮ ಪಂಚಾಯತ್‌ನಲ್ಲಿ ಎಷ್ಟು ಮಹಿಳೆಯರು ಉದ್ಯೋಗ ಹೊಂದಿದ್ದಾರೆ ಅಥವಾ ಸ್ವಯಂ ಉದ್ಯೋಗಿಗಳಾಗಿದ್ದಾರೆ ಮತ್ತು ಎಲ್‌ಪಿಜಿ ಸಂಪರ್ಕವನ್ನು ಎಷ್ಟು ಕುಟುಂಬಗಳು ಹೊಂದಿವೆ ಎಂಬುದನ್ನೂ ಪರಿಗಣಿಸಲಾಗುತ್ತದೆ.
ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಕುಟುಂಬಗಳ ಬಡತನ ಶ್ರೇಣಿ ಅಳೆಯಲು ಸುಮಾರು 21 ಮಾನದಂಡಗಳನ್ನು ಗ್ರಾಮೀಣಾಭಿವೃದ್ಧಿ ಇಲಾಖೆ ನಿಗದಿಸಿದೆ. ಸಾಲ, ಹೈನುಗಾರಿಕೆ, ಕೃಷಿಯೇತರ ಉದ್ಯೋಗ, ಮಾರುಕಟ್ಟೆ ಮತ್ತು ಬ್ಯಾಂಕ್ ಖಾತೆಗಳ ಸಂಖ್ಯೆಯ ಅಂಶಗಳನ್ನೂ ಇದರ ಅಡಿಯಲ್ಲಿ ಮೌಲೀಕರಿಸಲಾಗುತ್ತದೆ. ಕೂಲಿ ಅಥವಾ ಸ್ವಯಂ ಉದ್ಯೋಗ ಹೊಂದಿರುವ ಕುಟುಂಬವು ಒಂದು ಗ್ರಾಮ ಪಂಚಾಯಿತಿಯಲ್ಲಿ ಎಷ್ಟಿವೆ ಎಂಬುದನ್ನು ಆಧರಿಸಿ ಗ್ರಾಮ ಪಂಚಾಯತ್‌ಎಷ್ಟು ಉತ್ತಮವಾಗಿದೆ ಎಂದು ವಿಶ್ಲೇಷಿಸಲಾಗುತ್ತದೆ.
ಮಿಶನ್ ಅಂತ್ಯೋದಯ ಯೋಜನೆ ಅಡಿಯಲ್ಲಿ, ಗ್ರಾಮ ಪಂಚಾಯತ್‌ಗಳನ್ನು ಶ್ರೇಣೀಕರಿಸಲು ಮೂರು ಮೂಲ ಮಾನದಂಡ ಗಳಿಗೆ ಸಚಿವಾಲಯವು ಅನುಮೋದನೆ ನೀಡಿದೆ. ಮೂಲಸೌಕರ್ಯ, ಸಾಮಾಜಿಕ ಅಭಿವೃದ್ಧಿ ಮತ್ತು ರಕ್ಷಣೆ, ಆರ್ಥಿಕ ಅಭಿವೃದ್ಧಿ ಹಾಗೂ ಜೀವನಮಟ್ಟದ ವೈವಿಧ್ಯತೆಯನ್ನು ಈ ಮಾನದಂಡಗಳಿಗೆ ಸೂಕ್ತವಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.